ಪತಿಯ ತಮ್ಮನ ಜೊತೆ ಪತ್ನಿ ಅಕ್ರಮ ಸಂಬಂಧ ಶಂಕೆ: ಇಬ್ಬರನ್ನು ಕೊಚ್ಚಿ ಕೊಂದ ಪತಿ!

ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿ ಮತ್ತು ತಮ್ಮನನ್ನು ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖಿಂಪುರ ಖೇರಿ(ಉತ್ತರಪ್ರದೇಶ): ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿ ಮತ್ತು ತಮ್ಮನನ್ನು ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. 

ಉತ್ತರ ಪ್ರದೇಶದ ನೌರಂಗಾಬಾದ್ ನಲ್ಲಿ 35 ವರ್ಷದ ಶಕೀಲ್ ಎಂಬಾತ ತನ್ನ ಪತ್ನಿ 30 ವರ್ಷದ ಶಬಿಕುನ್ನೀಶನ್ ಮತ್ತು ತನ್ನ ಸಹೋದರ 30 ವರ್ಷದ ಮೊಹ್ಸಿನ್ ಇಬ್ಬರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವೇಳೆ ಬಿಡಿಸಲು ಬಂದ ತಾಯಿಗೂ ಸಹ ಶಕೀಲ್ ಹಲ್ಲೆ ಮಾಡಿದ್ದು ಅವರು ಸಹ ಗಾಯಗೊಂಡಿದ್ದಾರೆ. ಇನ್ನು ಶಕೀಲ್ ಕೃತ್ಯ ಕಂಡ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com