ಬೋಡೋ ಒಪ್ಪಂದಕ್ಕೆ ಸಹಿ: ಅಮಿತ್ ಶಾ ತಂಡವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ!

ಕೇಂದ್ರ ಸರ್ಕಾರ ಮತ್ತು ನಿಷೇಧಿತ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್(ಎನ್‌ಡಿಎಫ್‌ಬಿ) ಯ ಎಲ್ಲಾ ಬಣಗಳ ನಡುವೆ ಸಹಿ ಹಾಕಿದ ಐತಿಹಾಸಿಕ ಬೋಡೋ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದ್ದು, ಇದು ಬೋಡೋ ಜನರ ಪರಿವರ್ತನೆಗೆ ಕಾರಣವಾಗಲಿದೆ ಎಂದು ಹೇಳಿದರು.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕೇಂದ್ರ ಸರ್ಕಾರ ಮತ್ತು ನಿಷೇಧಿತ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್(ಎನ್‌ಡಿಎಫ್‌ಬಿ) ಯ ಎಲ್ಲಾ ಬಣಗಳ ನಡುವೆ ಸಹಿ ಹಾಕಿದ ಐತಿಹಾಸಿಕ ಬೋಡೋ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದ್ದು, ಇದು ಬೋಡೋ ಜನರ ಪರಿವರ್ತನೆಗೆ ಕಾರಣವಾಗಲಿದೆ ಎಂದು ಹೇಳಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ, “ಶಾಂತಿ, ಸಾಮರಸ್ಯ ಮತ್ತು ಒಗ್ಗಟ್ಟಿನ ಹೊಸ ಉದಯ ಪ್ರಾರಂಭವಾಗುತ್ತಿದೆ! ಇಂದು ಭಾರತಕ್ಕೆ ಬಹಳ ವಿಶೇಷ ದಿನ. ಇಂದು ಸಹಿ ಹಾಕಿರುವ ಬೋಡೋ ಗುಂಪುಗಳೊಂದಿಗಿನ ಒಪ್ಪಂದವು ಬೋಡೋ ಜನರಿಗೆ ಪರಿವರ್ತಕ ಫಲಿತಾಂಶಗಳಿಗೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.

ಬೋಡೋ ಒಪ್ಪಂದಕ್ಕೆ  ಸಹಿ ಹಾಕಿರುವುದು ಇಂದು ಅನೇಕ ಕಾರಣಗಳಿಗಾಗಿ ಪ್ರಮುಖವಾಗಿದೆ. ಇದು ಒಂದು ಚೌಕಟ್ಟಿನಡಿಯಲ್ಲಿ ಪ್ರಮುಖ ಪಾಲುದಾರರನ್ನು ಯಶಸ್ವಿಯಾಗಿ ಒಟ್ಟುಗೂಡಿಸುತ್ತದೆ. ಈ ಹಿಂದೆ ಸಶಸ್ತ್ರ ಪ್ರತಿರೋಧ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದವರು ಈಗ ಮುಖ್ಯವಾಹಿನಿಗೆ ಪ್ರವೇಶಿಸಿ ನಮ್ಮ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com