ದೇಶವನ್ನು ವಿಭಜಿಸುವ ಯತ್ನದ ನಡುವೆ ಸಮಯ ಸಿಕ್ಕರೆ ಇದನ್ನು ಓದಿ: ಮೋದಿಗೆ ಸಂವಿಧಾನ ಪುಸ್ತಕ ಕಳುಹಿಸಿದ ಕಾಂಗ್ರೆಸ್

ಗಣರಾಜ್ಯೋತ್ಸವ ದಿನಾಚರಣೆಯಂದೇ ಪ್ರಧಾನಮಂತ್ರ ನರೇಂದ್ರ ಮೋದಿಗೆ ಕಾಂಗ್ರೆಸ್ ಸಂವಿಧಾನದ ಪ್ರತಿಯನ್ನು ಕಳುಹಿಸಿದ್ದು, ದೇಶವನ್ನು ವಿಭಜಿಸುವ ನಿಮ್ಮ ಪ್ರಯತ್ನದ ನಡುವೆ ಕಾಲಾವಕಾಶ ಸಿಕ್ಕರೆ ಇದನ್ನು ಓದಿ ಎಂದು ಟಾಂಗ್ ನೀಡಿದೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆಯಂದೇ ಪ್ರಧಾನಮಂತ್ರ ನರೇಂದ್ರ ಮೋದಿಗೆ ಕಾಂಗ್ರೆಸ್ ಸಂವಿಧಾನದ ಪ್ರತಿಯನ್ನು ಕಳುಹಿಸಿದ್ದು, ದೇಶವನ್ನು ವಿಭಜಿಸುವ ನಿಮ್ಮ ಪ್ರಯತ್ನದ ನಡುವೆ ಕಾಲಾವಕಾಶ ಸಿಕ್ಕರೆ ಇದನ್ನು ಓದಿ ಎಂದು ಟಾಂಗ್ ನೀಡಿದೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪುಸ್ತಕವನ್ನು ಆರ್ಡರ್ ಮಾಡಿರುವ ಫೋಟೋವನ್ನು ಹಂಚಿಕೊಂಡಿರುವ ಕಾಂಗ್ರೆಸ್, ಪ್ರಿಯ ಪ್ರಧಾನಿಮಂತ್ರಿಗಳೇ, ಶೀಘ್ರದಲ್ಲೇ ಸಂವಿಧಾನದ ಪ್ರತಿ ನಿಮಗೆ ತಲುಪಲಿದೆ. ದೇಶವನ್ನು ವಿಭಜಿಸುವ ನಿಮ್ಮ ಪ್ರಯತ್ನದ ನಡುವೆ ಕಾಲಾವಕಾಶ ಸಿಕ್ಕರೆ ಓದಿ ಎಂದು ಬರೆದು ಸಂವಿಧಾನದ ಪ್ರತಿಯನ್ನು ಕಳುಹಿಸಿದ ಅಮೆಜಾನ್ ರಶೀದಿಯನ್ನು ಹಾಕಿದೆ. 

ಇದರಂತೆ ಸರಣಿ ಸರಣಿ ಟ್ವೀಟ್ ಗಳ ಮೂಲಕ ಪ್ರಧಾನಿ ಮೋದಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಸಂವಿಧಾನವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದೆ. ಅಲ್ಲದೆ, ಇತ್ತೀಚೆಗೆ ರಾಜ್ ಘಾಟ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸಂವಿಧಾನ ಪೀಠಿಕೆ ಓದುವ ವಿಡಿಯೋವನ್ನು ಟ್ವಿಟರ್ ನಲ್ಲಿ ಹಾಕಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com