ಸೋನಿಯಾ ತಂದೆ ಹಿಟ್ಲರ್ ಸಂಬಂಧಿ: ಅದ್ನಾನ್ ಸಮಿಗೆ ಪದ್ಮಶ್ರೀ ಪ್ರಶ್ನಿಸಿದ್ದ ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು!

ಪಾಕಿಸ್ತಾನಿ ಗಾಯಕ ಅದ್ನಾನ್ ಸಮಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು ನೀಡಿದ್ದ ಸೋನಿಯಾ ಗಾಂಧಿ ತಂದೆ ಹಿಟ್ಲರ್ ಗೆ ಸಂಬಂಧಪಟ್ಟವರು ಎಂದು ಹೇಳಿದೆ. 
ಸೋನಿಯಾ ಗಾಂಧಿ-ಹಿಟ್ಲರ್
ಸೋನಿಯಾ ಗಾಂಧಿ-ಹಿಟ್ಲರ್

ನವದೆಹಲಿ: ಪಾಕಿಸ್ತಾನಿ ಗಾಯಕ ಅದ್ನಾನ್ ಸಮಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು ನೀಡಿದ್ದ ಸೋನಿಯಾ ಗಾಂಧಿ ತಂದೆ ಹಿಟ್ಲರ್ ಗೆ ಸಂಬಂಧಪಟ್ಟವರು ಎಂದು ಹೇಳಿದೆ. 

ಪಾಕ್ ವಾಯುಪಡೆಯ ಪೈಲಟ್ ಪುತ್ರ ಅದ್ನಾನ್ ಸಮಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಆದರೆ ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ)ಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಮಹ್ಮದ್ ಸನಾವುಲಾರನ್ನು ವಿದೇಶಿಗ ಎಂದು ಸರ್ಕಾರ ಘೋಷಿಸಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. 

ಅದ್ನಾನ್ ಸಮಿಯ ತಂದೆಯ ವಿಚಾರವಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಶ್ನಿಸುವುದಿದ್ದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಂದೆ ಹಿಟ್ಲರ್ ಗೆ ಸಂಬಂಧಪಟ್ಟವರು ಎಂಬುದು ಮರೆಯಬೇಡಿ. ಸೋನಿಯಾಗೆ ಭಾರತೀಯಳು ಎಂದು ಒಪ್ಪಿಕೊಂಡ ಮೇಲೆ ಇವರನ್ನು ಯಾಕೆ ಒಪ್ಪಿಕೊಳ್ಳುವುದಿಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ತಿರುಗೇಟು ನೀಡಿದ್ದಾರೆ.

ಸರ್ಕಾರಕ್ಕಾಗಿ ಚಮಚಾಗಿರಿ ಮಾಡಿದ ಮ್ಯಾಜಿಕ್ ಗಾಗಿ ಅದ್ನಾನ್ ಸಮಿಗೆ ಪದ್ಮಶೀ ಸಿಕ್ಕಿದೆ ಎಂದು ಕಾಂಗ್ರೆಸ್ ನ ಅಧಿಕೃತ ಪ್ರತಿನಿಧಿ ಜೈವೀರ್ ಶೇರ್ ಗಿಲ್ ಟ್ವೀಟರ್ ನಲ್ಲಿ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com