ನಾಗ್ಪುರ್: 19 ವರ್ಷದ ಯುವತಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ರಾಡ್ ಹಾಕಿ ಪೈಶಾಚಿಕ ಕೃತ್ಯ!

19 ವರ್ಷದ ಯುವತಿ ಮೇಲೆ ಮೇಲೆ ಅತ್ಯಾಚಾರವೆಸಗಿದ ಕಾಮುಕ, ಬಳಿಕ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ಪೈಶಾಚಿಕ ಕೃತ್ಯವೆಸಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದ ಪರ್ಡಿ ಪ್ರದೇಶದಲ್ಲಿ ನಡೆದಿದೆ.

Published: 28th January 2020 04:16 PM  |   Last Updated: 28th January 2020 04:16 PM   |  A+A-


Gang rape in Mysuru,one accused arrested

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ನಾಗ್ಪುರ್: 19 ವರ್ಷದ ಯುವತಿ ಮೇಲೆ ಮೇಲೆ ಅತ್ಯಾಚಾರವೆಸಗಿದ ಕಾಮುಕ, ಬಳಿಕ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ಪೈಶಾಚಿಕ ಕೃತ್ಯವೆಸಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದ ಪರ್ಡಿ ಪ್ರದೇಶದಲ್ಲಿ ನಡೆದಿದೆ.

ಜನವರಿ 21 ರಂದು ಈ ಆಘಾತಕಾರಿ ಘಟನೆ ನಡೆದಿದ್ದು, 52 ವರ್ಷದ ಯೋಗಿಲಾಲ್ ರಹಂಗದಾಳೆ ಎಂಬ ವ್ಯಕ್ತಿ ಯುವತಿ ಮೇಲೆ ಅತ್ಯಾಚಾರ ಎಸಗಿ, ಆಕೆ ಪ್ರಜ್ಞಾಹೀನಳಾದ ನಂತರ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮುಕ ಯೋಗಿಲಾಲ್ ರಹಂಗದಾಳೆಯನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಮತ್ತು ಸಂತ್ರಸ್ತೆ ಹತ್ತಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರೆ ಸಂತ್ರಸ್ಥೆ ಕೂಲಿ ಕೆಲಸ ಮಾಡುತ್ತಿದ್ದಳು. ಯುವತಿ, ಯುವತಿಯ ಸಹೋದರ, ಆರೋಪಿ ಮತ್ತು ಮತ್ತೊಬ್ಬಳು ಯುವತಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.

ಯುವತಿ ಅಣ್ಣ ಜನವರಿ 21ರಂದು ತನ್ನ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಯೋಗಿಲಾಲ್ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಇನ್ಸ್ ಪೆಕ್ಟರ್ ಸುನೀಲ್ ಚವಾಣ್ ತಿಳಿಸಿದ್ದಾರೆ.

ಯುವತಿ ರೂಂನಲ್ಲಿ ಒಬ್ಬಂಟಿಯಾಗಿ ಇರುವುದನ್ನು ಗಮನಿಸಿದ ರಂಗದಾಳೆ ರಾತ್ರಿ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಬಾಯಿಯೊಳಗೆ ಬಟ್ಟೆ ತುಂಬಿ ಅತ್ಯಾಚಾರ ಎಸಗಿದ್ದ. ಯುವತಿ ಪ್ರಜ್ಞಾಹೀನಳಾದ ನಂತರ ಆರೋಪಿ ಆಕೆಯ ಖಾಸಗಿ ಭಾಗದೊಳಕ್ಕೆ ಕಬ್ಬಿಣದ ರಾಡ್ ಅನ್ನು ತುರುಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ನಡೆದು ಮೂರು ದಿನಗಳ ಬಳಿಕ ಯುವತಿ ಈ ವಿಚಾರವನ್ನು ಅಣ್ಣನಿಗೆ ತಿಳಿಸಿದ್ದು, ಸೋಮವಾರ ಪೊಲೀಸರಿಗೆ ದೂರು ನೀಡಲಾಗಿದೆ.

Stay up to date on all the latest ರಾಷ್ಟ್ರೀಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp