ಬಿಹಾರ: ದೇಶದ್ರೋಹ ಪ್ರಕರಣ, ಸಿಎಎ ವಿರೋಧಿ ಹೋರಾಟಗಾರ ಶಾರ್ಜೀಲ್ ಇಮಾಮ್ ಬಂಧನ 

ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದಾಗಿ ಬೆಳಕಿಗೆ ಬಂದಿರುವ ವಿವಾದಾತ್ಮಾಕ ಜೆಎನ್ ಯು  ವಿದ್ಯಾರ್ಥಿ ಹಾಗೂ ಹೋರಾಟಗಾರ ಶಾರ್ಜೀಲ್ ಇಮಾಮ್ ಅವರನ್ನು ದೇಹದ್ರೋಹ ಪ್ರಕರಣದಲ್ಲಿ ಜಿಹಾನ್ ಬಾದ್ ನಲ್ಲಿಂದು ಬಂಧಿಸಲಾಗಿದೆ
ಶಾರ್ಜಿಲ್ ಇಮಾಮ್
ಶಾರ್ಜಿಲ್ ಇಮಾಮ್

ಪಾಟ್ನಾ: ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದಾಗಿ ಬೆಳಕಿಗೆ ಬಂದಿರುವ ವಿವಾದಾತ್ಮಾಕ ಜೆಎನ್ ಯು  ವಿದ್ಯಾರ್ಥಿ ಹಾಗೂ ಹೋರಾಟಗಾರ ಶಾರ್ಜೀಲ್ ಇಮಾಮ್ ಅವರನ್ನು ದೇಹದ್ರೋಹ ಪ್ರಕರಣದಲ್ಲಿ ಜಿಹಾನ್ ಬಾದ್ ನಲ್ಲಿಂದು ಬಂಧಿಸಲಾಗಿದೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಪ್ರಚೋದನಾಕರಿ ಭಾಷಣದ ಆರೋಪದ ಮೇರೆಗೆ ದೇಹದ್ರೋಹ ಪ್ರಕರಣ ದಾಖಲಿಸಿದ್ದ ದೆಹಲಿ ಪೊಲೀಸರು ತಲೆಮರೆಸಿಕೊಂಡಿದ್ದ ಇಮಾಮ್ ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. 

ಶಾರ್ಜೀಲ್ ಇಮಾಮ್ ನೇಪಾಳಕ್ಕೆ ಪಲಾಯನ ಮಾಡಿರಬೇಕೆಂದು ಪೊಲೀಸರು ಭಯಗೊಂಡಿದ್ದರು. ಒಂದು ವೇಳೆ ಅವರು ನೇಪಾಳಕ್ಕೆ ಪಲಾಯನ ಮಾಡಿದರೆ ಭಾರತಕ್ಕೆ ವಾಪಾಸ್ ತರುವುದು ಕಷ್ಟಕರವಾಗಲಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದರು. 
 
ಮುಂಬೈ, ದೆಹಲಿ, ಪಾಟ್ನಾ ಮತ್ತಿತರ ಕಡೆಗಳಲ್ಲಿ ದೆಹಲಿ ಪೊಲೀಸರ ತಂಡ  ಬಹುಹಂತದ ದಾಳಿ ನಡೆಸಿ ಇಮಾಮ್ ಅವರನ್ನು ಹುಡುಕುತ್ತಿದ್ದರು. ಆದರೆ, ಆತ ಸಿಕ್ಕಿರಲಿಲ್ಲ.  ಜನವರಿ 27ರಂದು ರಾತ್ರಿ 7ರಿಂದ 8 ಗಂಟೆ ಸಂದರ್ಭದ ಬಿಹಾರದ ಪುಲ್ವಾರಿಷರೀಫ್ ನಲ್ಲಿ ನಲ್ಲಿ ಶಾರ್ಜೀಲ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು ಎಂದು ಅವರು ಅಧಿಕಾರಿ ತಿಳಿಸಿದ್ದರು. 

ಶಾರ್ಜೀಲ್ ಬಂಧನಕ್ಕಾಗಿ ಐದು ತಂಡ ರಚಿಸಲಾಗಿದ್ದು,  ಮಹಾರಾಷ್ಟ್ರ, ದೆಹಲಿ, ಬಿಹಾರದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಆತನ ಅಡಗಿರುವ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಅವರ ಕುಟುಂಬ ಸದಸ್ಯರನ್ನು ಕೇಳಲಾಗಿದೆ ಎಂದು ದೆಹಲಿ ಪೊಲೀಸ್ ವಕ್ತಾರರು ಬೆಳಗ್ಗೆಯಷ್ಟೇ ಹೇಳಿಕೆ ನೀಡಿದ್ದರು. 

ಎನ್ ಆರ್ ಸಿ ಅನುಷ್ಠಾನ ಸ್ಥಗಿತ ಹಾಗೂ ಈಶಾನ್ಯ ರಾಜ್ಯವನ್ನು ಭಾರತದಿಂದ ವಿಭಜನೆ ಕುರಿತಂತೆ ಜನವರಿ 25 ರಂದು ಶಾರ್ಜೀಲ್ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿತ್ತು. ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆಯಲ್ಲಿ ದೆಹಲಿ ಅಪರಾಧ ವಿಭಾಗದ ಪೊಲೀಸರು  ಇಮಾಮ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com