'ಗೋಲಿ ಮಾರೋ' ವಿವಾದ: ಅನುರಾಗ್ ಘೋಷಣೆ ಕುರಿತು ವರದಿ ಕೇಳಿದೆ ದೆಹಲಿ ಸಿಇಒ ಕಚೇರಿ

ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂಬ ಕೇಂದ್ರದ ಹಣಕಾಸು ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರ ಹೇಳಿಕೆ ವಿವಾದ ಸೃಷ್ಟಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಘೋಷಣಾ ವಾಕ್ಯ ಸಂಬಂಧ ವರದಿ ಸಲ್ಲಿಸುವಂತೆ ವಾಯುವ್ಯ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೆಹಲಿ ಸಿಇಒ ಕಚೇರಿ ಸೂಚನೆ ನೀಡಿದೆ. 
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ನವದೆಹಲಿ: ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂಬ ಕೇಂದ್ರದ ಹಣಕಾಸು ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರ ಹೇಳಿಕೆ ವಿವಾದ ಸೃಷ್ಟಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಘೋಷಣಾ ವಾಕ್ಯ ಸಂಬಂಧ ವರದಿ ಸಲ್ಲಿಸುವಂತೆ ವಾಯುವ್ಯ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೆಹಲಿ ಸಿಇಒ ಕಚೇರಿ ಸೂಚನೆ ನೀಡಿದೆ. 

ಅನುರಾಗ್ ಠಾಕೂರ್ ಅವರ ಹೇಳಿಕೆ ನಮ್ಮ ಗಮನಕ್ಕೆ ಬಂದಿದ್ದು, ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳ ಬಳಿ ವರದಿ ಕೇಳಲಾಗಿದೆ. ಹೇಳಿಕೆ ಹಾಗೂ ಘೋಷಣಾ ವಾಕ್ಯಗಳ ಸಂಬಂಧ ಈ ವರೆಗೂ ಯಾವುದೇ ದೂರುಗಳೂ ದಾಖಲಾಗಿಲ್ಲ ಎಂದು ದೆಹಲಿ ಸಿಇಒ ಕಚೇರಿ ಮಾಹಿತಿ ನೀಡಿದೆ. 

ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಠಾಕೂರ್ ಅವರು, ಪ್ರಚೋದನಾಕಾರಿ ಘೋಷಣೆ ಕೂಗಿದ್ದರು. ಭಾಷಣದ ವೇಳೆ ಕೈಗಳನ್ನು ಎತ್ತಿ ದೇಶದ್ರೋಹಿಗಳನ್ನು ಎಂದು ಕೂಗಿದ ಅನುರಾಗ್ ಅವರ ಜೊತೆಗೆ ಗೋಲಿ ಮಾರೋ ಎಂದು ಸಭೆಯಲ್ಲಿ ಸೇರಿದ್ದ ಜನರೆಲ್ಲಾ ಆಕ್ರೋಶದಿಂದ ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com