ಪುಸ್ತಕ ಪ್ರೇಮಿಗಳಾಗಿ, ಜ್ಞಾನಾರ್ಜನೆ ಮಾಡಿಕೊಳ್ಳಿ  ಸಿಎಂ ಮಮತಾ ಕಿವಿಮಾತು

ಕೋಲ್ಕತಾ ಪುಸ್ತಕ ಮೇಳಕ್ಕಿಂತ ಸಂಯುಕ್ತ ಭಾರತದ ದೊಡ್ಡ ಉದಾಹರಣೆ ಇನ್ನೊಂದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

Published: 29th January 2020 08:36 PM  |   Last Updated: 29th January 2020 08:36 PM   |  A+A-


Mamata scores ton with books

ಪುಸ್ತಕ ಪ್ರೇಮಿಗಳಾಗಿ, ಜ್ಞಾನಾರ್ಜನೆ ಮಾಡಿಕೊಳ್ಳಿ  ಸಿಎಂ ಮಮತಾ ಕಿವಿಮಾತು

Posted By : Srinivas Rao BV
Source : UNI

ಕೋಲ್ಕತಾ: ಕೋಲ್ಕತಾ ಪುಸ್ತಕ ಮೇಳಕ್ಕಿಂತ ಸಂಯುಕ್ತ ಭಾರತದ ದೊಡ್ಡ ಉದಾಹರಣೆ ಇನ್ನೊಂದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

44 ನೇ ಅಂತಾರಾರಾಷ್ಟ್ರೀಯ ಕೋಲ್ಕತಾ ಪುಸ್ತಕ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನೃಸಿಂಗಾ ಪ್ರಸಾದ್ ಭದುರಿಗೆ ಸೃಷ್ಠಿ ಪ್ರಶಸ್ತಿ ಪ್ರದಾನ ಮಾಡಿ  ಪತ್ರಕರ್ತರ ಪಾತ್ರವನ್ನು ಶ್ಲಾಘಿಸಿದರು. ಕೋಲ್ಕತಾ ಪುಸ್ತಕ ಮೇಳವು ಅಂತಾರಾಷ್ಟ್ರೀಯ ಆಕರ್ಷಣೆಯಾಗಿದೆ. ನಾವು ಬಾಲ್ಯದಿಂದಲೂ ಈ ಘಟನೆ ಜೀವನದಲ್ಲಿ ಬೆರೆತು ಹೋಗಿದೆ.  ಪುಸ್ತಕಗಳ ಮೇಲಿನ ಪ್ರೀತಿ ಮತ್ತು ಪುಸ್ತಕಗಳು ಮತ್ತು ಚಿತ್ರಗಳು ಒದಗಿಸುವ ಏಕತೆಯ ಹುಡುಕಾಟ ಪ್ರತಿ ಬಾರಿಯೂ ಈ ಪುಸ್ತಕ ಜಾತ್ರೆಗೆ ಕರೆತಂದಿದೆ ಎಂದು ಅವರು  ಸ್ವಂತ ಅನುಭವ ಹೇಳಿಕೊಂಡರು. 

ಪುಸ್ತಕ ಮೇಳದ ವಿಕಸನ ಮತ್ತು ಇತಿಹಾಸದ ಬಗ್ಗೆ ಬರೆಯಲು ನಾನು ನೃಸಿಂಗ್ ಭದುರಿ ಅವರುಗೆಮನವಿ ಮಾಡಿದರು. ಇತ್ತೀಚಿನ ದಿನಗಳಲ್ಲಿ, ಇಂಟರ್ನೆಟ್ ಮಾಹಿತಿಯ ಪ್ರವೇಶವನ್ನು ಸುಲಭಗೊಳಿಸಿದೆ. ಈ ಮೊದಲು, ಏನನ್ನಾದರೂ ಬರೆಯಲು ಮಾಹಿತಿ ನ್ನು ಸಂಗ್ರಹಿಸುವುದು ತುಂಬಾ ಕಷ್ಟಕರವಾಗಿತ್ತು.ಆದರೆ ಪರಿಸ್ಥಿತಿ ಬದಲಾಗಿದೆ  ಹೊಸ ಪೀಳಿಗೆ ವಿಕಾಸದ ಬಗ್ಗೆ ತಿಳಿದಿರಬೇಕು ಎಂದರು. 
ಕಳೆದುಹೋದ ಅಥವಾ ಹೊಸ ಪ್ರತಿಭೆಗಳನ್ನು ಪತ್ತೆ ಮಾಡಲು  ಮೇಳವು ಉತ್ತಮ  ಅವಕಾಶ  ಒದಗಿಸಿದೆ  ಇದು ನಮ್ಮೊಂದಿಗೆ ಇನ್ನು ಮುಂದೆ  ಉತ್ತಮ ಬರಹಗಾರರನ್ನು ಸಹ ಅಮರಗೊಳಿಸಲಿದೆ ಎಂದೂ ಮಮತಾ  ಹೇಳಿದರು.

ನಮ್ಮಿಂದ ಯಾವುದು ದೂರವಿರುವುದಿಲ್ಲ. ನಾವು ಎಲ್ಲಾ ಹಬ್ಬಗಳನ್ನು ನಮ್ಮದೇ ಎಂಬಂತೆ ಆಚರಿಸುತ್ತೇವೆ. ಇದು ವೈವಿಧ್ಯತೆಯ ಏಕತೆಯನ್ನು ತೋರಿಸುತ್ತದೆ. ಬಾಂಗ್ಲಾ ನನ್ನ ಭಾಷೆ. ಆದರೆ ಇದರರ್ಥ ನಾನು ಉರ್ದು ಅಥವಾ ಹಿಂದಿಯಲ್ಲಿ ಬರೆದ ಪುಸ್ತಕವನ್ನು ಸ್ವೀಕರಿಸುವುದಿಲ್ಲವೆ? ಇಲ್ಲ ಈ ಪುಸ್ತಕ ಮೇಳಕ್ಕಿಂತ ದೊಡ್ಡ ಸಂಯುಕ್ತ ಭಾರತ ಎಲ್ಲಿದೆ ಇದು ಭಾರತದ ಸಂಸ್ಕೃತಿಯ ಸಾರಾಂಶವಾಗಿದೆ. ಪುಸ್ತಕ ಪ್ರೇಮಿಯಾಗಿರಿ ಎಂದೂ ಅವರು ಜನರಿಗೆ ಕಿವಿಮಾತು ಹೇಳಿದರು.

ಈ ವರ್ಷದ ಥೀಮ್ ದೇಶ ರಷ್ಯಾ. ರಷ್ಯಾ ನಮ್ಮ ಶಾಶ್ವತ ಸ್ನೇಹಿತ. ನಾವು ಪ್ರತಿನಿಧಿಗಳನ್ನು ಸ್ವಾಗತಿಸುತ್ತೇವೆ. ಅವರು ಬಿಸ್ವಾ ಬಂಗಾ ಬಿಸಿನೆಸ್ ಮೀಟ್;ನಲ್ಲಿ ಪಾಲುದಾರಿಕೆ ನೀಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.  ಅವರನ್ನು ಭೇಟಿ ಮಾಡಲು ಅವರು ವ್ಯಾಪಾರ ನಿಯೋಗವನ್ನು ಆಹ್ವಾನಿಸಿದ್ದಾರೆ. ಅವರು ವ್ಯಾಪಾರ ತಂಡವನ್ನೂ ಕಳುಹಿಸುತ್ತಾರೆ.ನಮಗೆ ಎಲ್ಲ ದೇಶಗಳೊಂದಿಗೆ ಉತ್ತಮ ಸಂಬಂಧವಿದೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ, ನಾನು ಅಂತಾರಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ  ಒಂದು ಅಥವಾ ಎರಡು ಬಾರಿ ಹೋಗಿದ್ದೇನೆ ಮತ್ತು ಅಲ್ಲಿನ  ಕೆಲವು ಸ್ಥಳಗಳನ್ನು ತಿಳಿದಿದ್ದೇನೆ ಎಂದೂ ಮಮತಾ  ತಮ್ಮ  ಹಳೆಯ ನೆನಪು ಮೆಲುಕು ಹಾಕಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp