ದೆಹಲಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದಕ್ಕೆ ಉಗ್ರನ ಪಟ್ಟ: ಕೇಜ್ರೀವಾಲ್ ಬೇಸರ

ತಮ್ಮನ್ನು ಭಯೋತ್ಪಾದಕ ಎಂದು ಕರೆದಿರುವ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಹೇಳಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

Published: 29th January 2020 07:34 PM  |   Last Updated: 29th January 2020 07:34 PM   |  A+A-


Kejriwal1

ಕೇಜ್ರಿವಾಲ್

Posted By : Lingaraj Badiger
Source : UNI

ನವದೆಹಲಿ: ತಮ್ಮನ್ನು ಭಯೋತ್ಪಾದಕ ಎಂದು ಕರೆದಿರುವ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಹೇಳಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ದೆಹಲಿಗಾಗಿ ಕಳೆದ ಐದು ವರ್ಷಗಳಿಂದ ಹಗಲೂ ರಾತ್ರಿ ದುಡಿದಿದ್ದೇನೆ. ದೆಹಲಿಯ ಜನರಿಗಾಗಿ ಪ್ರತಿಯೊಂದನ್ನೂ ತ್ಯಾಗ ಮಾಡಿದ್ದೇನೆ. ರಾಜಕೀಯ ಸೇರಿದ ಮೇಲೆ ಜನರ ಜೀವನವನ್ನು ಸುಧಾರಿಸಲು ಹಲವು ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ ಅದಕ್ಕೆ ಪ್ರತಿಯಾಗಿ ಇಂದು ಬಿಜೆಪಿ ನನ್ನನ್ನು ಉಗ್ರಗಾಮಿ ಎಂದು ಕರೆಯುತ್ತಿದೆ. ಅದು ನೋವುಂಟು ಮಾಡುತ್ತದೆ" ಎಂದಿದ್ದಾರೆ.

ಇದಕ್ಕೂ ಮುನ್ನ ಸಾರ್ವಜನಿಕ ಜಾಥಾದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ, "ದೆಹಲಿಯಲ್ಲಿ ಕೇಜ್ರೀವಾಲ್ ನಂತಹ ಹಲವು ನಟ್ವರ್ ಲಾಲ್ ಮತ್ತು ಉಗ್ರಗಾಮಿಗಳು ಅವಿತಿದ್ದಾರೆ. ನಾವು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡಬೇಕೆ ಇಲ್ಲವೇ ದೆಹಲಿಯಲ್ಲಿ ಕೇಜ್ರೀವಾಲ್ ನಂತಹ ಉಗ್ರಗಾಮಿಯನ್ನು ಎದುರಿಸಬೇಕೆ ಎಂದು ತಿಳಿಯುತ್ತಿಲ್ಲ" ಎಂದಿದ್ದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp