ಕೊರೋನಾ ವೈರಸ್ ಆತಂಕ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಪರಾಮರ್ಶೆ

ಈಗ ಎಲ್ಲೆಲ್ಲೂ ಕೊರೋನಾ ವೈರಸ್ ದ್ದೇ ಮಾತು. ಎಲ್ಲಿ ವೈರಸ್ ಸೋಂಕು ತಗುಲುತ್ತದೋ ಎಂಬ ಭೀತಿಯಲ್ಲಿ ಜನತೆ ಇರುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ್ ಕುಮಾರ್ ವಿಮಾನ ನಿಲ್ದಾಣಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಮಾಡಿರುವ ಸಿದ್ದತೆಗಳ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ.
ಕೊರೋನಾ ವೈರಸ್ ಆತಂಕ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಪರಾಮರ್ಶೆ

ನವದೆಹಲಿ: ಈಗ ಎಲ್ಲೆಲ್ಲೂ ಕೊರೋನಾ ವೈರಸ್ ದ್ದೇ ಮಾತು. ಎಲ್ಲಿ ವೈರಸ್ ಸೋಂಕು ತಗುಲುತ್ತದೋ ಎಂಬ ಭೀತಿಯಲ್ಲಿ ಜನತೆ ಇರುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ್ ಕುಮಾರ್ ವಿಮಾನ ನಿಲ್ದಾಣಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಮಾಡಿರುವ ಸಿದ್ದತೆಗಳ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ.


ಈ ಸಭೆಯನ್ನು ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ವಿಮಾನ ನಿಲ್ದಾಣ ಆರೋಗ್ಯ ಸಂಘಟನೆಗಳ ಅಧಿಕಾರಿಗಳ ಸಮ್ಮುಖದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದರು. 


ಸ್ಥಳೀಯ ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರಗಳು ಮಾಡಬೇಕು. ವಿಮಾನದಲ್ಲಿ ದೇಶ-ಹೊರ ದೇಶಗಳಿಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಲ್ಲಿ ಕೊರೊನಾ ವೈರಸ್ ನ ಲಕ್ಷಣಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಟಿ ವಿ, ರೇಡಿಯೊ, ಪತ್ರಿಕಾ ಪ್ರಕಟಣೆಗಳು, ಸೋಷಿಯಲ್ ಮೀಡಿಯಾ ಮತ್ತು ಇತರ ಮಾಧ್ಯಮಗಳ ಮೂಲಕ ಕಾಲ್ ಸೆಂಟರ್ ಮತ್ತು ಸಹಾಯವಾಣಿ ಸಂಖ್ಯೆಗಳನ್ನು ಜನಪ್ರಿಯಗೊಳಿಸಬೇಕಾದ ಅಗತ್ಯವಿದೆ ಎಂದು ಕುಮಾರ್ ತಿಳಿಸಿದ್ದಾರೆ.


ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ದೇಹದ ಉಷ್ಣತೆ ಮತ್ತು ರೋಗ ಲಕ್ಷಣ ತಪಾಸಣೆಗಳನ್ನು ಆರಂಭಿಸಲಾಗಿದ್ದು ವಲಸೆ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳನ್ನು ಸೂಕ್ಷ್ಮವಾಗಿ ನಿಗಾವಹಿಸುವಂತೆ ಸೂಚಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಆಂಬ್ಯುಲೆನ್ಸ್ ಇರುವಂತೆ ನೋಡಿಕೊಳ್ಳಲಾಗಿದೆ. ಸ್ವಘೋಷಿತ ಅರ್ಜಿಗಳು ಮತ್ತು ಸಿಗ್ನೇಜಸ್ಗಳು ವಿಮಾನ ನಿಲ್ದಾಣದುದ್ದಕ್ಕೂ ಪ್ರಮುಖ ಸ್ಥಳಗಳಲ್ಲಿ ಇರಿಸಲಾಗಿದೆ. ಏಳು ಕೇಂದ್ರ ತಂಡಗಳು ಆಯಾ ರಾಜ್ಯಗಳಿಗೆ ಭೇಟಿ ನೀಡಿ ವೈದ್ಯಕೀಯ ಮತ್ತು ಇತರ ಸೌಲಭ್ಯಗಳನ್ನು ಬಲಪಡಿಸಲು ಸಹಾಯ ಮಾಡಲಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಈ ಮಧ್ಯೆ ಚೀನಾ ದೇಶದಲ್ಲಿ ಕೊರೋನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 170ಕ್ಕೇರಿದೆ. 1700ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಚೀನಾ ಸರ್ಕಾರ ಖಚಿತಪಡಿಸಿದೆ. 

ಹುಬೈಯಿಂದ ಭಾರತೀಯರನ್ನು ಕರೆತರಲು ಅನುಮತಿ ಕೋರಿಕೆ: ಚೀನಾದ ಹುಬೈ ಪ್ರಾಂತ್ಯದಿಂದ ಭಾರತ ಪ್ರಜೆಗಳನ್ನು ವಾಪಸ್‍ ಕರೆತರಲು ಎರಡು ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡುವಂತೆ ಭಾರತ ಬುಧವಾರ ಚೀನಾ ಸರ್ಕಾರವನ್ನು ಕೋರಿದೆ.


ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಚೀನಾದ ಅಧಿಕಾರಿಗಳೊಂದಿಗೆ ಈ ಕುರಿತಂತೆ ಸಂಪರ್ಕದಲ್ಲಿದ್ದು, ಅಗತ್ಯ ವ್ಯವಸ್ಥೆಗಳನ್ನು ರೂಪಿಸುತ್ತಿದೆ. ಹೊಸ ಮಾಹಿತಿಯನ್ನು ಎರಡೂ ಕಡೆ ಹಂಚಿಕೊಳ್ಳಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.


ಈ ಮಧ್ಯೆ, ಚೀನಾದ ಭಾರತೀಯ ರಾಯಭಾರ ಕಚೇರಿ ಸರಣಿ ಟ್ವೀಟ್‌ ಮಾಡಿ, ಕರೋನಾ ವೈರಸ್ ಪೀಡಿತ ಹುಬೈ ಪ್ರಾಂತ್ಯದಿಂದ ಭಾರತೀಯ ನಾಗರಿಕರನ್ನು ಸುಗಮವಾಗಿ ಸ್ಥಳಾಂತರಿಸುವತ್ತ ಕಾರ್ಯೋನ್ಮುಖವಾಗಿದ್ದೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com