ಮಸೀದಿಗಳಿಗೆ ಮಹಿಳೆಯರ ಪ್ರವೇಶಕ್ಕೆ ಧಾರ್ಮಿಕ ಗ್ರಂಥಗಳ ಅನುಮತಿ ಇದೆ: ಸುಪ್ರೀಂ ಕೋರ್ಟ್ ಗೆ ಮುಸ್ಲಿಂ ಸಂಸ್ಥೆ

ಮಸೀದಿಗಳಿಗೆ ಮಹಿಳೆಯರು ಪ್ರವೇಶಿಸುವುದಕ್ಕೆ ಧಾರ್ಮಿಕ ಗ್ರಂಥಗಳಲ್ಲಿ ಅನುಮತಿ ಇದೆ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. 
ಮಸೀದಿಗಳಿಗೆ ಮಹಿಳೆಯರ ಪ್ರವೇಶಕ್ಕೆ ಧಾರ್ಮಿಕ ಗ್ರಂಥಗಳ ಅನುಮತಿ ಇದೆ: ಸುಪ್ರೀಂ ಕೋರ್ಟ್ ಗೆ ಮುಸ್ಲಿಂ ಸಂಸ್ಥೆ
ಮಸೀದಿಗಳಿಗೆ ಮಹಿಳೆಯರ ಪ್ರವೇಶಕ್ಕೆ ಧಾರ್ಮಿಕ ಗ್ರಂಥಗಳ ಅನುಮತಿ ಇದೆ: ಸುಪ್ರೀಂ ಕೋರ್ಟ್ ಗೆ ಮುಸ್ಲಿಂ ಸಂಸ್ಥೆ

ನವದೆಹಲಿ: ಮಸೀದಿಗಳಿಗೆ ಮಹಿಳೆಯರು ಪ್ರವೇಶಿಸುವುದಕ್ಕೆ ಧಾರ್ಮಿಕ ಗ್ರಂಥಗಳಲ್ಲಿ ಅನುಮತಿ ಇದೆ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. 

ಮಹಾರಾಷ್ಟ್ರ ಮೂಲದ ಮುಸ್ಲಿಂ ದಂಪತಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಎಲ್ಲಾ ಮಸೀದಿಗಳಲ್ಲೂ ಅವಕಾಶ ನೀಡಬೇಕೆಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ (ಎಐಎಂಪಿಎಲ್ ಬಿ) ಮಹಿಳೆಯರು ಹಾಗೂ ಪುರುಷರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುವುದಕ್ಕೆ ಯಾವುದೇ ನಿರ್ಬಂಧಗಳೂ ಇಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. 

ಮಹಿಳೆಯರು ಮಸೀದಿ ಪ್ರವೇಶಿಸುವುದಕ್ಕೆ ಸಂಬಂಧಪಟ್ಟಂತೆ ಫತ್ವಾ ಹೊರಡಿಸಿದರೆ ಅದನ್ನು ನಿರ್ಲಕ್ಷಿಸಬಹುದು ಎಂದು ಹೇಳಿದೆ. ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರವೇಶ ಇಲ್ಲದೇ ಇರುವ ವಿಚಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು 9 ಸದಸ್ಯರಿರುವ ಸುಪ್ರೀಂ ಕೋರ್ಟ್ ನ ಪೀಠ ವಿಚಾರಣೆ ನಡೆಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com