ನಾನು ದೆಹಲಿ ಪುತ್ರನೋ ಅಥವಾ ಉಗ್ರನೋ ಎಂಬುದನ್ನು ಜನ ನಿರ್ಧರಿಸುತ್ತಾರೆ: ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು

ನನ್ನನ್ನು ತಮ್ಮ ಮಗ, ಸಹೋದರ ಅಥವಾ ಉಗ್ರನೆಂದು ಪರಿಗಣಿಸಬೇಕೇ ಎಂಬುದನ್ನು ದೆಹಲಿ ಜನತೆ ನಿರ್ಧರಿಸಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮನ್ನು ಉಗ್ರ ಎಂದು ಕರೆದ ಬಿಜೆಪಿಗೆ ಗುರುವಾರ ತಿರುಗೇಟು ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ನನ್ನನ್ನು ತಮ್ಮ ಮಗ, ಸಹೋದರ ಅಥವಾ ಉಗ್ರನೆಂದು ಪರಿಗಣಿಸಬೇಕೇ ಎಂಬುದನ್ನು ದೆಹಲಿ ಜನತೆ ನಿರ್ಧರಿಸಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮನ್ನು ಉಗ್ರ ಎಂದು ಕರೆದ ಬಿಜೆಪಿಗೆ ಗುರುವಾರ ತಿರುಗೇಟು ನೀಡಿದ್ದಾರೆ.

'ದೆಹಲಿ ಜನತೆಯ ಈ ನಿರ್ಧಾರಕ್ಕಾಗಿ ನಾನು ಬದುಕುತ್ತಿದ್ದೇನೆ. ಅವರು ನನ್ನನ್ನು ತಮ್ಮ ಮಗನೆಂದೋ, ಸಹೋದರನೆಂದೋ ಅಥವಾ ಉಗ್ರನೆಂದು ಪರಿಗಣಿಸಾತ್ತಾರೆಯೇ ನೋಡೋಣ' ಎಂದಿದ್ದಾರೆ.

ದೇಶಕ್ಕಾಗಿ ನಾನು ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದೇನೆ. ನಾನು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರೂ ಭ್ರಷ್ಟಾಚಾರದ ವಿರುದ್ಧ ಉಪವಾಸ ಮಾಡಿದೆ ಎಂದು ಕೇಜ್ರಿವಾಲ್ ವರದಿಗಾರರಿಗೆ ತಿಳಿಸಿದ್ದಾರೆ.

ನಾನು ಒಬ್ಬ ಡಯಾಬಿಟಿಕ್, ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ತೆಗೆದುಕೊಳ್ಳುತ್ತೇನೆ. ಡಯಾಬಿಟಿಕ್ ರೋಗಿ 3 ರಿಂದ ನಾಲ್ಕು ಗಂಟೆ ಏನೂ ತಿನ್ನದಿದ್ದರೆ ಆತ ಕುಸಿದು ಬೀಳುತ್ತಾನೆ ಮತ್ತು ಸಾಯುವ ಸಾಧ್ಯತೆಯೂ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲೂ ನಾನು ಭ್ರಷ್ಟಾಚಾರದ ವಿರುದ್ಧ ಎರಡು ಬಾರಿ ಉಪವಾಸ ಮಾಡಿದ್ದೇನೆ. ಒಂದು ಬಾರಿ 15 ದಿನ ಮತ್ತೊಂದು ಬಾರಿ 10 ದಿನ ಉಪವಾಸ ಸತ್ಯಾಗ್ರಹ ಮಾಡಿದ್ದೇನೆ ಎಂದರು.

ನಿನ್ನೆ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ಅವರು, "ದೆಹಲಿಯಲ್ಲಿ ಕೇಜ್ರೀವಾಲ್ ನಂತಹ ಹಲವು ನಟ್ವರ್ ಲಾಲ್ ಮತ್ತು ಉಗ್ರಗಾಮಿಗಳು ಅವಿತಿದ್ದಾರೆ. ನಾವು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡಬೇಕೆ ಇಲ್ಲವೇ ದೆಹಲಿಯಲ್ಲಿ ಕೇಜ್ರೀವಾಲ್ ನಂತಹ ಉಗ್ರಗಾಮಿಯನ್ನು ಎದುರಿಸಬೇಕೆ ಎಂದು ತಿಳಿಯುತ್ತಿಲ್ಲ" ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com