ಮಲೇಷಿಯಾದಲ್ಲಿ ಕೊರೊನಾ ವೈರಸ್ ನಿಂದ ಭಾರತೀಯ ಸಾವು

ಚೈನಾದಲ್ಲಿ ವ್ಯಾಪಕವಾಗಿ ಹಬ್ಬಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಡುತ್ತಿರುವ ಮಾರಣಾಂತಿಕ  ಕೊರೋನಾ ವೈರಸ್ ಸೋಂಕಿಗೆ ಭಾರತೀಯನೊಬ್ಬ ಮಲೇಷಿಯಾದಲ್ಲಿ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚೈನಾದಲ್ಲಿ ವ್ಯಾಪಕವಾಗಿ ಹಬ್ಬಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಡುತ್ತಿರುವ ಮಾರಣಾಂತಿಕ  ಕೊರೋನಾ ವೈರಸ್ ಸೋಂಕಿಗೆ ಭಾರತೀಯನೊಬ್ಬ ಮಲೇಷಿಯಾದಲ್ಲಿ ಮೃತಪಟ್ಟಿದ್ದಾರೆ.

ಭಾರತದ ತ್ರಿಪುರಾ ರಾಜ್ಯದ ವ್ಯಕ್ತಿಯೊಬ್ಬರು ಮಲೇಷ್ಯಾದ ಆಸ್ಪತ್ರೆಯಲ್ಲಿ ಕರೋನ ವೈರಸ್ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುವಾಗ ಸಾವನ್ನಪ್ಪಿದ್ದಾರೆ. 

ತ್ರಿಪುರದ ಪೂರ್ತಾಲ್  ರಾಜ್‌ ನಗರ ಗ್ರಾಮದ ಮನೀರ್ ಹುಸೇನ್,  ೨೦೧೮ ರಲ್ಲಿ  ರೆಸ್ಟೋರೆಂಟ್‌ನಲ್ಲಿ ಉದ್ಯೋಗ ಮಾಡಲು  ಮಲೇಷಿಯಾಗೆ ಪ್ರಯಾಣ ಬೆಳೆಸಿದ್ದರು. ಮಲೇಷ್ಯಾದಲ್ಲಿ ಕರೊನಾ ವೈರಸ್ ಸೋಂಕಿಗೆ ಒಳಗಾಗಿ ಮೊಮ್ಮಗ ಮನೀರ್ ಹುಸೇನ್  ಮೃತಪಟ್ಟಿದ್ದಾನೆ ಎಂದು ಅಲ್ಲಿನ ಅಧಿಕಾರಿಗಳು ತಮಗೆ  ತಿಳಿಸಿದ್ದಾರೆ ಎಂದು ಆತನ ಅಜ್ಜ ಅಬ್ದುಲ್ ರಹೀಮ್ ಹೇಳಿದ್ದಾರೆ. 

ಮಲೇಷ್ಯಾದಲ್ಲಿ ಉದ್ಯೋಗ  ಹುಡುಕಿಕೊಂಡು ಎರಡು ವರ್ಷದ ಹಿಂದೆ ತೆರಳಿದ್ದ ೨೩ ವರ್ಷದ ಮೊಮ್ಮಗ ಕರೋನವೈರಸ್‌ನಿಂದ ಮೃತಪಟ್ಟಿದ್ದಾನೆ ಎಂದು ಅವರ ಅಜ್ಜ ರಹೀಮ್ ತಿಳಿಸಿದ್ದಾರೆ.

ತನ್ನ ಮೊಮ್ಮಗನ  ಮೃತ ದೇಹವನ್ನು ಸ್ವದೇಶಕ್ಕೆ  ರವಾನಿಸಬೇಕೆಂದು ಮಲೇಷಿಯಾ  ಅಧಿಕಾರಿಗಳಿಗೆ ಕೋರಿದ್ದಾರೆ. ಚೀನಾದ ವುಹಾನ್‌ನಲ್ಲಿ ಈಗಾಗಲೇ ೧೭೦ ಜನರು  ಭಯಾನಕ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com