ರಾಷ್ಟ್ರೀಯ ವೈದ್ಯರ ದಿನ: ನಿಂದನೆ ಸಹಿಸಿಕೊಂಡು, ದಣಿವರಿಯದೆ ಗಡಿಯಿಲ್ಲದೆ ದುಡಿಯುತ್ತಿರುವ ವೈದ್ಯರಿಗೆ ಸಲಾಂ

ದೇಶದಾದ್ಯಂತ ಇಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದ್ದು, ನಿಂದನೆ ಸಹಿಸಿಕೊಂಡು, ದಣಿವರಿಯದೆ ಹಾಗೂ ಗಡಿಯಿಲ್ಲದೆ ದುಡಿಯುತ್ತಿರುವ, ವೈದ್ಯೋ ನಾರಾಯಣೋ ಹರಿ- ಎಂಬ ಗೌರವಕ್ಕೆ ಪಾತ್ರರಾಗಿರುವ ಎಲ್ಲಾ ವೈದ್ಯರಿಗೂ ಧನ್ಯವಾದಗಳು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೇಶದಾದ್ಯಂತ ಇಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದ್ದು, ನಿಂದನೆ ಸಹಿಸಿಕೊಂಡು, ದಣಿವರಿಯದೆ ಹಾಗೂ ಗಡಿಯಿಲ್ಲದೆ ದುಡಿಯುತ್ತಿರುವ, ವೈದ್ಯೋ ನಾರಾಯಣೋ ಹರಿ- ಎಂಬ ಗೌರವಕ್ಕೆ ಪಾತ್ರರಾಗಿರುವ ಎಲ್ಲಾ ವೈದ್ಯರಿಗೂ ಧನ್ಯವಾದಗಳು...

ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈ ವರೆಗೂ ಭಾರತದ 300 ವೈದ್ಯರನ್ನು ಕಳೆದುಕೊಂಡಿದೆ. ಮಹಾಮಾರಿ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಕೂಡ ಯಾವುದಕ್ಕೂ ಅಂಜದ ವೈದ್ಯಕೀಯ ಸಿಬ್ಬಂದಿಗಳು ನಿಂದನೆಗಳನ್ನು ಸಹಿಸಿಕೊಂಡು, ದಣಿವರಿಯದೆ ಗಡಿಯಿಲ್ಲದೆ ಸತತ 10 ಗಂಟೆಗಳ ಕಾಲ ಸುಧೀರ್ಘವಾಕಿ ಸೇವೆ ಸಲ್ಲಿಸುತ್ತಿದ್ದಾರೆ. 

ರಾಷ್ಟ್ರೀಯ ವೈದ್ಯರ ದಿನ ಹಿನ್ನೆಲೆಯಲ್ಲಿ ವೈದ್ಯರು ತಮ್ಮ ಹೋರಾಟದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ವೃತ್ತಿಪರದಲ್ಲಿ ಎದುರಾಗುವ ಸಂಕಷ್ಟಗಳ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. 

ರೋಗಿಗಳು ಹಾಗೂ ಕುಟುಂಬಸ್ಥರಲ್ಲಿ ವೈರಸ್ ಕುರಿತು ಭೀತಿ ಹೆಚ್ಚಾಗಿದ್ದು, ನಾವು ಕೇವಲ ವೈರಸ್ ವಿರುದ್ಧವಷ್ಟೇ ಹೋರಾಡುತ್ತಿದ್ದೇವೆ. ವೈದ್ಯರಾಗಿ ನಾವು ಪರಿಸ್ಥಿತಿಯನ್ನು ಲೆಕ್ಕಿಸದೇ ಜನರ ಸೇವೆ ಮಾಡಬೇಕಾಗಿದೆ ಎಂದು ದ್ವಾರಕಾದ ಆಕಾಶ್ ಹೆಲ್ತ್‌ಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ವಾಸ್ಥ್ಯ ತಜ್ಞ ಡಾ.ಇಂದರ್ ಕುಮಾರ್ ಕಸ್ತೂರಿಯಾ ಹೇಳಿದ್ದಾರೆ. 

ಕೊರೋನಾ ಪರೀಕ್ಷೆ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಸಿಬ್ಬಂದಿಗಳು ಸಂಕಷ್ಟದ ನಡುವೆಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಬೇಸಿಗೆಯಲ್ಲಿ ಪಿಪಿಇ ಕಿಟ್ ಗಳೊಂದಿಗೆ ಕಾರ್ಯನಿರ್ವಹಿಸುವುದರ ಜೊತೆಗೆ, ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಕೆಲ ಕಳಂಕಗಳನ್ನು ನಾವು ಎದುರಿಸಬೇಕಾಗಿ ಬಂದಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ನಾವು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆಂದೂ ನೋಡಿರದ ಪರಿಸ್ಥಿತಿ ಎದುರಾಗಿದೆ. ಆರೋಗ್ಯ ಸಿಬ್ಬಂದಿಗಳು ನಿಸ್ವಾರ್ಥದಿಂದ ಕಾರ್ಯನಿರ್ವಹಿಸುತ್ತಿದ್ದಾರೆಂದು ನ್ಯೂ ಫ್ರೆಂಡ್ಸ್ ಕಾಲೋನಿಯ ಸೀಡ್ಸ್ ಆಫ್ ಇನೊಸೆನ್ಸ್ & ಜೆನೆಸ್ಟ್ರಿಂಗ್ಸ್ ಸ್ಥಾಪಕ ಡಾ. ಗೌರಿ ಅಗರ್ವಾಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com