ಶಾಲೆಗಳು ಆರಂಭವಾಗುವವರೆಗೆ ಶುಲ್ಕ ಪಾವತಿಗೆ ತಡೆ ನೀಡಿ: ವಿವಿಧ ರಾಜ್ಯಗಳ ಪೋಷಕರಿಂದ ಸುಪ್ರೀಂ ಕೋರ್ಟ್ ಗೆ ಮೊರೆ

ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟವುಂಟಾಗಿರುವುದರಿಂದ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸುವುದನ್ನು ಮುಂದೂಡಬೇಕು ಅಥವಾ ಶುಲ್ಕ ಪಾವತಿಗೆ ತಡೆ ತರಬೇಕೆಂದು ವಿವಿಧ ರಾಜ್ಯಗಳ ಪೋಷಕರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟವುಂಟಾಗಿರುವುದರಿಂದ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸುವುದನ್ನು ಮುಂದೂಡಬೇಕು ಅಥವಾ ಶುಲ್ಕ ಪಾವತಿಗೆ ತಡೆ ತರಬೇಕೆಂದು ವಿವಿಧ ರಾಜ್ಯಗಳ ಪೋಷಕರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಶಾಲೆಗಳು ತೆರೆಯದಿರುವುದರಿಂದ ಆನ್ ಲೈನ್ ವರ್ಚುವಲ್ ತರಗತಿಗಳನ್ನು ನಡೆಸಲು ಎಷ್ಟು ಖರ್ಚಾಗುತ್ತದೆಯೇ ಅಷ್ಟನ್ನೇ ವಿದ್ಯಾರ್ಥಿಗಳ ಪೋಷಕರಿಂದ ತೆಗೆದುಕೊಳ್ಳಬೇಕೆಂದು ಖಾಸಗಿ ಅನುದಾನರಹಿತ ಮತ್ತು ಅನುದಾನಿತ ಖಾಸಗಿ ಶಾಲೆಗಳಿಗೆ ಆದೇಶ ನೀಡಬೇಕು. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಆದೇಶ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕೆಂದು ಪೋಷಕರು ಮನವಿ ಮಾಡಿಕೊಂಡಿದ್ದಾರೆ. ಈ ನಿಯಮ ಕಳೆದ ಏಪ್ರಿಲ್ 1ರಿಂದ ಇನ್ನು ಶಾಲೆಗಳು ಪುನರಾರಂಭವಾಗುವವರೆಗೆ ಅನ್ವಯವಾಗುವಂತೆ ಆದೇಶ ನೀಡಬೇಕೆಂದು ಪೋಷಕರು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ದೇಶದ ಸಂವಿಧಾನದಡಿಯಲ್ಲಿ ಶಿಕ್ಷಣದ ಖಾತ್ರಿ ಮತ್ತು ಬದುಕುವ ಮೂಲಭೂತ ಹಕ್ಕಿನಡಿ ನ್ಯಾಯಾಲಯ ಆದೇಶ ನೀಡಬೇಕೆಂದು ವಿವಿಧ ರಾಜ್ಯಗಳಿಂದ ಅರ್ಜಿ ಸಲ್ಲಿಸಿದವರು ಕೋರಿದ್ದಾರೆ. ಕಳೆದ ಏಪ್ರಿಲ್ 1ರಿಂದ ಇನ್ನು ಶಾಲೆಗಳು ಆರಂಭವಾಗುವವರೆಗೆ ಮಕ್ಕಳ ಪೋಷಕರಿಂದ ಶಾಲೆಗಳು ಕೇವಲ ಬೋಧನಾ ಶುಲ್ಕ ಮಾತ್ರ ತೆಗೆದುಕೊಳ್ಳಲು ಆದೇಶ ನೀಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com