ಕೋವಿಡ್-19 ಪರೀಕ್ಷಾ ವರದಿ ಬರುವುದಕ್ಕೆ ಕಾಯಬೇಕಿಲ್ಲ, ಕುಟುಂಬಸ್ಥರಿಗೆ ಸಿಗಲಿದೆ ಶಂಕಿತರ ಮೃತದೇಹ!
ಕೋವಿಡ್-19 ಶಂಕಿತ ವ್ಯಕ್ತಿಗಳು ಮೃತಪಟ್ಟರೆ ಅವರ ಪಾರ್ಥಿವ ಶರೀರವನ್ನು, ಪರೀಕ್ಷಾ ವರದಿ ಬರುವುದಕ್ಕೂ ಮುನ್ನವೇ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬಹುದೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
Published: 02nd July 2020 06:12 PM | Last Updated: 02nd July 2020 06:12 PM | A+A A-

ಕೋವಿಡ್-19 ಪರೀಕ್ಷಾ ವರದಿ ಬರುವುದಕ್ಕೆ ಕಾಯಬೇಕಿಲ್ಲ, ಕುಟುಂಬಸ್ಥರಿಗೆ ಸಿಗಲಿದೆ ಶಂಕಿತರ ಮೃತದೇಹ!
ನವದೆಹಲಿ: ಕೋವಿಡ್-19 ಶಂಕಿತ ವ್ಯಕ್ತಿಗಳು ಮೃತಪಟ್ಟರೆ ಅವರ ಪಾರ್ಥಿವ ಶರೀರವನ್ನು, ಪರೀಕ್ಷಾ ವರದಿ ಬರುವುದಕ್ಕೂ ಮುನ್ನವೇ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬಹುದೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಆದರೆ ಕೋವಿಡ್-19 ಸೊಂಕು ಶಂಕಿತರ ಮೃತದೇಹಕ್ಕೆ ಸರ್ಕಾರಿ ಮಾರ್ಗಸೂಚಿಗಳ ಅನುಗುಣವಾಗಿಯೇ ಅಂತ್ಯ ಸಂಸ್ಕಾರ ನೆರವೇರಿಸಬೇಕೆಂದು ಆರೋಗ್ಯ ಸಚಿವಾಲಯದ ಸಾಮಾನ್ಯ ಆರೋಗ್ಯ ಸೇವೆಗಳ ನಿರ್ದೇಶಕ ಡಾ.ರಾಜೀವ್ ಗರ್ಗ್ ಹೇಳಿದ್ದಾರೆ.
ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯದ ಆದೇಶವನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಳಿಸಿಕೊಡಲಾಗಿದೆ.
ಒಂದು ವೇಳೆ ಅಂತ್ಯಸಂಸ್ಕಾರ ನೆರವೇರಿಸಿದ ಬಳಿಕ ಮೃತ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟರೆ, ಸಂಪರ್ಕದಲ್ಲಿದ್ದವರ ಪಟ್ಟಿ, ಅವರನ್ನು ಪತ್ತೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.