ಕೋವಿಡ್-19: ದೇಶದ ಮೊದಲ 'ಪ್ಲಾಸ್ಮಾ ಬ್ಯಾಂಕ್'ಗೆ ದೆಹಲಿ ಸಿಎಂ ಕೇಜ್ರಿವಾಲ್ ಚಾಲನೆ

ಕೊರೋನಾ ವೈರಸ್ ವಿರುದ್ಧ ಹೋರಾಡುವಲ್ಲಿ ಗಮನಾರ್ಹ ಹೆಜ್ಜೆಯೊಂದನ್ನು ಇಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್'ಗೆ ಗುರುವಾರ ಚಾಲನೆ ನೀಡಿದ್ದಾರೆ. 

Published: 02nd July 2020 02:19 PM  |   Last Updated: 02nd July 2020 03:22 PM   |  A+A-


Delhi CM kejriwal

ದೆಹಲಿ ಸಿಎಂ ಕೇಜ್ರಿವಾಲ್

Posted By : Manjula VN
Source : The New Indian Express

ನವದೆಹಲಿ: ಕೊರೋನಾ ವೈರಸ್ ವಿರುದ್ಧ ಹೋರಾಡುವಲ್ಲಿ ಗಮನಾರ್ಹ ಹೆಜ್ಜೆಯೊಂದನ್ನು ಇಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್'ಗೆ ಗುರುವಾರ ಚಾಲನೆ ನೀಡಿದ್ದಾರೆ. 

ದೆಹಲಿಯ ಇನ್ಸ್'ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬಿಲಿಯರಿ ಸೈನ್ಸಸ್ (ಐಎಲ್'ಬಿಎಸ್)ನಲ್ಲಿ ಈ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆಗೊಂಡಿದ್ದು, ಪ್ಲಾಸ್ಮಾ ಬ್ಯಾಂಕ್'ಗೆ ಕೇಜ್ರಿವಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. 

ಪ್ಲಾಸ್ಮಾ ಬ್ಯಾಂಕ್'ಗೆ ಚಾಲನೆ ನೀಡಿದ ಬಳಿಕ ಮಾತಾನಾಡಿರುವ ಅವರು, 18ರಿಂದ 60 ವರ್ಷಗೊಹಿನ ಬಾಹೂ 50 ಕೆಜಿ ತೂಕಕ್ಕಿಂತಲೂ ಹೆಚ್ಚು ಇರುವ ಕೊರೋನಾ ಸೋಂಕಿನಿಂದ ಗುಣಮುಖರಾಗಿರುವವರು ಪ್ಲಾಸ್ಮಾ ದಾನ ಮಾಡಬಹುದಾಗಿದೆ. ಮಗುವಿಗೆ ಜನ್ಮ ನೀಡಿದ ಮಹಿಳೆಯರು ಹಾಗೂ ದೀರ್ಘಕಾಲಿಕ ರೋಗಗಳಿಂದ ಬಳುತ್ತಿರುವವರು ಅಂದರೆ, ಮಧುಮೇಹ, ಸಕ್ಕರೆ ಕಾಯಿಲೆ, ಶ್ವಾಸಕೋಶ ಸಮಸ್ಯೆಗಲು, ಕಿಡ್ನಿ ಸಮಸ್ಯೆಗಳು, ಹೃದಯ ಸಮಸ್ಯೆಯಿಂದ ಬಳುತ್ತಿರುವ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡುವಂತಿಲ್ಲ. ಅರ್ಹ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಲು ಮುಂದಕ್ಕೆ ಬರಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 

ಪ್ಲಾಸ್ಮಾ ಪಡೆದುಕೊಳ್ಳಲು ಜನರು ಸಮಸ್ಯೆ ಎದುರಿಸುತ್ತಿದ್ದು, ಜನರು ಪ್ಲಾಸ್ಮಾ ದಾನ ಮಾಡಲು ಮುಂದಾದರೆ ಮಾತ್ರ ಈ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಯಶಸ್ವಿಯಾಗುತ್ತದೆ. ಪ್ಲಾಸ್ಮಾ ದಾನ ಮಾಡಲು ನೀವು ಅರ್ಹರೆಂದು ತಿಳಿದರೆ, 1031ಗೆ ಕರೆ ಮಾಡಬಹುದು. ಇಲ್ಲವೇ 8800007722 ಸಂಖ್ಯೆಗೆ ವಾಟ್ಸ್ಅಪ್ ಮಾಡಬಹುದು. ನಮ್ಮ ವೈದ್ಯರು ನಿಮ್ಮನ್ನು ಸಂಪರ್ಕಿಸಲಿದ್ದು, ಪ್ಲಾಸ್ಮಾ ದಾನ ಮಾಡಲು ನೀವು ಅರ್ಹರೋ ಅಥವಾ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸುತ್ತಾರೆಂದು ಹೇಳಿದ್ದಾರೆ. 

ಕೊರೋನಾಗೆ ಲಸಿಕೆಗಳು ಬರುವವರೆಗೂ ಪ್ಲಾಸ್ಮಾ ಚಿಕಿತ್ಸೆ ಸೋಂಕಿತರಿಗೆ ಸಹಾಯ ಮಾಡಲಿದೆ. ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ. 

ಈ ವರೆಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 89,802 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp