ಕೇರಳ ಮೀನುಗಾರರ ಹತ್ಯೆ: ಇಟಾಲಿಯನ್ ನೌಕಾದಳದ ವಿರುದ್ಧ ಅಂತರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಭಾರತಕ್ಕೆ ಗೆಲುವು

 2012 ರಲ್ಲಿ ಕೇರಳದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಹೊಡೆದುರುಳಿಸಿದ ಆರೋಪ ಹೊತ್ತಿದ್ದ ಇಬ್ಬರು ಇಟಾಲಿಯನ್ ನೌಕಾಪಡೆ ಸದಸ್ಯರ ವಿರುದ್ಧ  ಭಾರತತನ್ನ ಪ್ರಕರಣವನ್ನು ಗೆದ್ದಿದೆ. ಈ ಪ್ರಕರಣವನ್ನು ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಶಾಶ್ವತ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಸಲಾಯಿತು. ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಇಟಾಲಿಯನ್  ನೌಕಾದಳ
ಕೇರಳ ಮೀನುಗಾರರ ಹತ್ಯೆ: ಇಟಾಲಿಯನ್ ನೌಕಾದಳದ ವಿರುದ್ಧ ಅಂತರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಭಾರತಕ್ಕೆ ಗೆಲುವು

ಹೇಗ್: 2012 ರಲ್ಲಿ ಕೇರಳದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಹೊಡೆದುರುಳಿಸಿದ ಆರೋಪ ಹೊತ್ತಿದ್ದ ಇಬ್ಬರು ಇಟಾಲಿಯನ್ ನೌಕಾಪಡೆ ಸದಸ್ಯರ ವಿರುದ್ಧ  ಭಾರತತನ್ನ ಪ್ರಕರಣವನ್ನು ಗೆದ್ದಿದೆ. ಈ ಪ್ರಕರಣವನ್ನು ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಇಟಾಲಿಯನ್  ನೌಕಾದಳದ  ಪ್ರಕರಣವನ್ನು ಭಾರತ ಗೆದ್ದಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ

ನ್ಯಾಯಾಧಿಕರಣದ ತೀರ್ಪಿನ ಪ್ರಕಾರ, ಇಬ್ಬರು ಇಟಾಲಿಯನ್ ನೌಕಾಪಡೆ ಸದಸ್ಯರು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿವೆ ಮತ್ತು ಇದರ ಪರಿಣಾಮವಾಗಿ ಇಟಲಿ ಸಮುದ್ರದ ಕಾನೂನಿನ ಕುರಿತ ವಿಶ್ವಸಂಸ್ಥೆಯ ಸಮಾವೇಶದಡಿಯಲ್ಲಿ ಭಾರತದ ಸ್ವಾತಂತ್ರ ಉಲ್ಲಂಘನೆಯಾಗಿದೆ.

ನ್ಯಾಯಪೀಠವು ಇಟಲಿಯಿಂದ ಅನುಭವಿಸಿದ ಪ್ರಾಣಹಾನಿಗೆ ಭಾರತ ಪರಿಹಾರವನ್ನು ಪಡೆಯಲು ಅರ್ಹವಾಗಿದೆ ಎಂದು ಹೇಳಿದೆ. ಇಟಾಲಿಯನ್ ನೌಕಾದಳ್ದ ಪ್ರಕರಣಗಳನ್ನು ಹೇಗ್‌ನಲ್ಲಿರುವ ನ್ಯಾಯಾಲಯದ  ಮಧ್ಯಸ್ಥಿಕೆಯಲ್ಲಿ ವಿಚಾರಣೆ ನಡೆಸಲಾಯಿತು. ಈ ಪ್ರಕರಣದ ಅಂತಿಮ ವಿಚಾರಣೆ ಕಳೆದ ವರ್ಷ ಜುಲೈನಲ್ಲಿ ಪ್ರಾರಂಭವಾಗಿತ್ತು. 

ಜೂನ್ 26, 2015 ರಂದು ಯುಎನ್ ಕನ್ವೆನ್ಷನ್ ಆನ್ ದಿ ಸೀ (ಯುಎನ್‌ಸಿಎಲ್ಒಎಸ್) ನ ಅನೆಕ್ಸ್ VII ಅಡಿಯಲ್ಲಿ ಆರ್ಬಿಟ್ರಲ್ ಟ್ರಿಬ್ಯೂನಲ್ ಅನ್ನು ರಚಿಸಲಾಯಿತು. ಇಟಾಲಿಯನ್ ಸದಸ್ಯರನ್ನು ಒಳಗೊಂಡ ಟ್ರಿಬ್ಯೂನಲ್ ಇದಾಗಿದ್ದು  ಫೆಬ್ರವರಿ 15, 2012 ರ ಶೂಟಿಂಗ್ ಘಟನೆಗೆ ಸಂಬಂಧಿಸಿ ವಿವಾದವುಂಟಾಗಿದ್ದು ಇದಕ್ಕೆ ಸಂಬಂಧಿಸಿ ಭಾರತಕ್ಕೆ ಗೆಲುವು ದಕ್ಕಿದೆ ಈ ಪ್ರಕರಣದಲ್ಲಿ ಇಬ್ಬರು ಇಟಾಲಿಯನ್ ನೌಕಾಪಡೆ ಸದಸ್ಯರಾದ ಸಾಲ್ವಟೋರ್ ಗಿರೋನ್ ಮತ್ತು ಮಾಸ್ಸಿಮಿಲಿಯಾನೊ ಲ್ಯಾಟೊರೆ  ಬ್ಬರು ಭಾರತೀಯ ಮೀನುಗಾರರನ್ನು ಭಾರತದ ದಕ್ಷಿಣ ಕೇರಳ ಕರಾವಳಿಯಲ್ಲಿ 2012 ರಲ್ಲಿ ಗುಂಡು ಹಾರಿಸಿ ಕೊಂದ ಆರೋಪವಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com