ದೇಶದಲ್ಲಿ ಕೋವಿಡ್-19ನಿಂದ ಗುಣಮುಖರಾದವರ ಪ್ರಮಾಣ ಶೇ.59.52ಕ್ಕೆ ಏರಿಕೆ

ಕಳೆದ 24 ಗಂಟೆಗಳ ಅವಧಿಯಲ್ಲಿ 11 ಸಾವಿರದ 881 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದು, ಒಟ್ಟು 3 ಲಕ್ಷದ 59 ಸಾವಿರದ 859 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ 11 ಸಾವಿರದ 881 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದು, ಒಟ್ಟು 3 ಲಕ್ಷದ 59 ಸಾವಿರದ 859 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಪ್ರಸ್ತುತ ಚೇತರಿಕೆ ಪ್ರಮಾಣ 59.52 ರಷ್ಟಿದ್ದು, 2 ಲಕ್ಷದ 26 ಸಾವಿರದ 947 ಸಕ್ರಿಯ ಪ್ರಕರಣಗಳಿವೆ. ಇವೆಲ್ಲಾವು  ವೈದ್ಯಕೀಯ ನಿಗಾವಣೆಯಲ್ಲಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್ ನಿಂದ ಚೇತರಿಸಿಕೊಂಡ 15 ಪ್ರಮುಖ ರಾಜ್ಯಗಳ ರೋಗಿಗಳ ಸಂಖ್ಯೆ ಈ ಕೆಳಗಿನಂತಿದೆ.ಮಹಾರಾಷ್ಟ್ರ (93, 154 ) ದೆಹಲಿ (59,992) ತಮಿಳುನಾಡು (52,926)  ಗುಜರಾತ್ ( 24,030) ಉತ್ತರ ಪ್ರದೇಶ (16,629) ರಾಜಸ್ಥಾನ (14,574)ಪಶ್ಚಿಮ ಬಂಗಾಳ (12,528)ಮಧ್ಯ ಪ್ರದೇಶ (10,665) ಹರಿಯಾಣ (10,499) ತೆಲಂಗಾಣ (8,082)  ಕರ್ನಾಟಕ (8.063) ಬಿಹಾರ (7,946) ಆಂಧ್ರ ಪ್ರದೇಶ (6,988) ಅಸ್ಸಾಂ (5,851) ಮತ್ತು ಒಡಿಶಾ (5,353)  ರೋಗಿಗಳು ಗುಣಮುಖರಾಗಿದ್ದಾರೆ.

ಚೇತರಿಕೆ ಪ್ರಮಾಣದಲ್ಲಿ ಚಂಡೀಗಢ ( ಶೇ. 82.3) ಮೇಘಾಲಯ (ಶೇ. 80.8) ರಾಜಸ್ಥಾನ (ಶೇ.79.6) ಉತ್ತರ್ ಖಂಡ್ (ಶೇ.78.6) ಛತ್ತೀಸ್ ಗಢ (ಶೇ.78.3)ತ್ರಿಪುರಾ (ಶೇ. 78.3) ಬಿಹಾರ (ಶೇ. 77.5) ಮಿಜೋರಾಂ (ಶೇ. 76.9) ಮಧ್ಯ ಪ್ರದೇಶ (ಶೇ. 76.9) ಜಾರ್ಖಂಡ್ (ಶೇ.76.6)  ಒಡಿಶಾ ಶೇ. 73. 2) ಗುಜರಾತ್ (ಶೇ.72.3) ಉತ್ತರ ಪ್ರದೇಶ (ಶೇ.69.1) ರಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com