ಕೇಂದ್ರ ಸರ್ಕಾರ ರೈಲ್ವೆಯನ್ನು ಬಡವರಿಂದ ಕಸಿದುಕೊಳ್ಳುತ್ತಿದೆ: ರಾಹುಲ್ ಗಾಂಧಿ ಕಿಡಿ

ಕೇಂದ್ರ ಸರ್ಕಾರ ರೈಲ್ವೆಯನ್ನು ಖಾಸಗೀಕರಣಗೊಳಿಸುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ರೈಲ್ವೆಯನ್ನು ಖಾಸಗೀಕರಣಗೊಳಿಸುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ರೈಲ್ವೆಯನ್ನು ಖಾಸಗೀಕರಣಗೊಳಿಸಲು ಹೊರಟಿರುವ ಸರ್ಕಾರ, ಬಡವರ ಈ ಜೀವಸೆಲೆಯನ್ನು ಕೂಡ ಅವರಿಂದ ಕಿತ್ತುಕೊಳ್ಳುತ್ತಿದೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ರೈಲು ಬಡವರ ಜೀವಸೆಲೆ.  ಇದನ್ನೂ ಸರ್ಕಾರ ಅವರಿಂದ ಕಸಿದುಕೊಳ್ಳುತ್ತಿದೆ. ಆದರೆ ನೆನಪಿಡಿ, ದೇಶದ ಜನರು ಸೂಕ್ತವಾದ ಉತ್ತರವನ್ನು ನೀಡುತ್ತಾರೆ” ಎಂದು ಹೇಳಿದ್ದಾರೆ.

ಕೊರೋನಾ ಯುಗದಲ್ಲಿ ಬೃಹತ್ ಸಾಧನೆ!
ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲಾ ಪ್ರಯಾಣಿಕ ರೈಲುಗಳು ಸಮಯಕ್ಕೆ ಸರಿಯಾಗಿ ತಮ್ಮ ಗಮ್ಯಸ್ಥಾನವನ್ನು ತಲುಪಿದೆ.

ಒಟ್ಟು 201 ಪ್ಯಾಸೆಂಜರ್ ರೈಲುಗಳು ತಮ್ಮ ಗಮ್ಯಸ್ಥಾನವನ್ನು ತಲುಪಿದಾಗ ಭಾರತೀಯ ರೈಲ್ವೆ ಬುಧವಾರ ಈ ವಿಶಿಷ್ಟ ಸಾಧನೆ ಮಾಡಿದ್ದು,  ಎಲ್ಲವೂ ಸಮಯಕ್ಕೆ ಸರಿಯಾಗಿ ಆಗಮಿಸಿವೆ. ಪ್ರಯಾಣಿಕರ ರೈಲುಗಳು ಅತ್ಯಂತ ಕಡಿಮೆ ಒತ್ತಡದ ಇರುವಾಗ, ಕೊರೋನಾಯುಗದಲ್ಲಿ ಈ ದಾಖಲೆಯನ್ನು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com