ಸಶಸ್ತ್ರ ಪೊಲೀಸ್ ಪಡೆಗಳಿಗೆ ಶೀಘ್ರವೇ ತೃತೀಯಲಿಂಗಿಗಳ ನೇಮಕಕ್ಕೆ ಅವಕಾಶ!?

ತೃತೀಯ ಲಿಂಗಿಗಳಿಗೆ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಶೀಘ್ರವೇ ಕಾರ್ಯಸಾಧು ಆಗುವ ಸಾಧ್ಯತೆ ಇದೆ.
ಸಶಸ್ತ್ರ ಪೊಲೀಸ್ ಪಡೆಗಳಿಗೆ ಶೀಘ್ರವೇ ತೃತೀಯಲಿಂಗಿಗಳ ನೇಮಕಕ್ಕೆ ಅವಕಾಶ!?
ಸಶಸ್ತ್ರ ಪೊಲೀಸ್ ಪಡೆಗಳಿಗೆ ಶೀಘ್ರವೇ ತೃತೀಯಲಿಂಗಿಗಳ ನೇಮಕಕ್ಕೆ ಅವಕಾಶ!?

ನವದೆಹಲಿ: ತೃತೀಯ ಲಿಂಗಿಗಳಿಗೆ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಶೀಘ್ರವೇ ಕಾರ್ಯಸಾಧು ಆಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ತೃತ್ತೀಯ ಲಿಂಗಿಗಳ ಭದ್ರತೆಯ ಹಕ್ಕುಗಳ ಕಾಯ್ದೆಗೆ ಡಿಸೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿದ್ದು, ಈ ಮೂಲಕ ತೃತೀಯ ಲಿಂಗಿಗಳೂ ಸಹ ಯುಪಿಎಸ್ ಸಿ ಪರೀಕ್ಷೆಗಳಿಗೆ ಹಾಜರಾಗಿ ಕೇಂದ್ರ ಅರೆಸೇನಾಪಡೆಗಳ ನೇಮಕಾತಿಗೆ ಪ್ರಯತ್ನಿಸಬಹುದಾದ ಅವಕಾಶ ಲಭ್ಯವಾಗಲಿದೆ.

ತೃತೀಯ ಲಿಂಗಿಗಳನ್ನು ಅರೆಸೇನಾಪಡೆಗಳಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯ 5 ಅರೆಸೆನಾಪಡೆಗಳಿಂದ ನಿಗದಿತ ಕಾಲಾವಕಾಶದಲ್ಲಿ, ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸುವ ಪರವಾದ ಅಭಿಪ್ರಾಯ ಅಥವಾ ಸಕಾರಣ ವಿರೋಧ ಅಭಿಪ್ರಾಯಗಳನ್ನು ತಿಳಿಸುವಂತೆ ಕೋರಿದೆ.

ಈ ಅಭಿಪ್ರಾಯಗಳನ್ನು ಸಂಗ್ರಹಿಸಿ ಯುಪಿಎಸ್ ಸಿ ಪರೀಕ್ಷೆಗಳಲ್ಲಿ ತೃತೀಯ ಲಿಂಗಿಗಳಿಗೆ ಅರೆಸೇನಾಪಡೆಗಳಿಗೆ ನೇಮಕವಾಗುವ ಅವಕಾಶ ಕಲ್ಪಿಸುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಇದಕ್ಕೂ ಮುನ್ನ ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಳ್ಳುವುದರಿಂದ ಉಂಟಾಗಬಹುದಾದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಿಎಪಿಎಫ್ ನ ಕಮಾಂಡರ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com