ವಂದೇ ಭಾರತ್ ಮೂಲಕ 4.75 ಲಕ್ಷ ಮಂದಿ ಸ್ವದೇಶಕ್ಕೆ ಆಗಮನ: ವಿದೇಶಾಂಗ ವ್ಯವಹಾರ ಸಚಿವಾಲಯ

ಕೊರೋನಾವೈರಸ್ ಸಾಂಕ್ರಾಮಿಕದ ಹಾವಳಿಯ ಕಾಲಘಟ್ಟದಲ್ಲಿ ಭಾರತ ಸರ್ಕಾರ ಮೇ 7 ರಂದು ವಂದೇ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದ ನಂತರ 4.75 ಲಕ್ಷಕ್ಕೂ ಹೆಚ್ಚು ಭಾರತೀಯರು ವಿದೇಶದಿಂದ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಂದೇ ಭಾರತ್ ಮೂಲಕ 4.75 ಲಕ್ಷ ಮಂದಿ ಸ್ವದೇಶಕ್ಕೆ ಆಗಮನ: ವಿದೇಶಾಂಗ ವ್ಯವಹಾರ ಸಚಿವಾಲಯ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ಹಾವಳಿಯ ಕಾಲಘಟ್ಟದಲ್ಲಿ ಭಾರತ ಸರ್ಕಾರ ಮೇ 7 ರಂದು ವಂದೇ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದ ನಂತರ 4.75 ಲಕ್ಷಕ್ಕೂ ಹೆಚ್ಚು ಭಾರತೀಯರು ವಿದೇಶದಿಂದ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಂದೇ ಭಾರತ್ ಮಿಷನ್ ನ ನಾಲ್ಕನೇ ಹಂತಕ್ಕೆ ಗುರುವಾರ ಚಾಲನೆ ಸಿಕ್ಕಿದೆ.

ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ, "ಜುಲೈ 1 ರ ಹೊತ್ತಿಗೆ, ಭಾರತಕ್ಕೆ ವಾಪಸಾಗಲು ವಿದೇಶದಲ್ಲಿ ನಿರೀಕ್ಷೆಯಲ್ಲಿರುವ ನಮ್ಮವರ ಸಂಖ್ಯೆ ಇನ್ನೂ ಬಹಳಷ್ಟಿದು ಮಿಷನ್ ನಲ್ಲಿ  ಇದುವರೆಗೆ ಒಟ್ಟು 5,83,109 ಜನ ನೊಂದಾಯಿಸಿದ್ದು ಅವರಲ್ಲಿ 4,75,000 ಕ್ಕೂ ಹೆಚ್ಚು ಜನರು ಈಗ ಸ್ವದೇಶಕ್ಕೆ ಮರಳಿದ್ದಾರೆ" ಎಂದಿದ್ದಾರೆ.

ಈ ವಿದೇಶವಾಸಿಗಳ ಸಂಖ್ಯೆಯಲ್ಲಿ ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದಿಂದ ಭೂಗಡಿ ದಾಟಿ ಬಂದ  90,000 ಕ್ಕೂ ಹೆಚ್ಚು ಭಾರತೀಯರು ಸೇರಿದ್ದಾರೆ ಎಂದು ಅವರು ಹೇಳಿದರು.

ಮಿಷನ್‌ನ ನಾಲ್ಕನೇ ಹಂತ ವಿಮಾನಗಳ ಪಟ್ಟಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು ನಿಯಮಿತವಾಗಿ ನವೀಕರಿಸಲಾಗುತ್ತಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ. "ವಂದೇ ಭಾರತ್ ಮಿಷನ್‌ನ ಹಂತ- IV ರ ಅಡಿಯಲ್ಲಿ, ನಾವು 500 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸಲಿದ್ದೇವೆ. ಇದರಲ್ಲಿ ಏರ್ ಇಂಡಿಯಾ ಮತ್ತು ಖಾಸಗಿ ವಾಹಕಗಳು ಸೇರಿವೆ, " ಅವರು ವಿವರಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com