ರಕ್ಷಣ ಸಚಿವ ರಾಜನಾಥ್ ಸಿಂಗ್ ಲಡಾಖ್ ಭೇಟಿ ಮುಂದೂಡಿಕೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಲಡಾಖ್ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. ಗ್ಯಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷವಾದ ಬಳಿಕ ಶುಕ್ರವಾರ ರಾಜನಾಥ್ ಸಿಂಗ್ ಲಡಾಖ್ ಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಲಡಾಖ್ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. ಗ್ಯಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷವಾದ ಬಳಿಕ ಶುಕ್ರವಾರ ರಾಜನಾಥ್ ಸಿಂಗ್ ಲಡಾಖ್ ಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಯೋಜನೆಯಂತೆ ರಕ್ಷಣಾ ಸಚಿವ ರಾಜನಾಥ್‌‌ ಸಿಂಗ್‌ ಶುಕ್ರವಾರ ಮುಂಜಾನೆಯೇ ಲಡಾಖ್‌ಗೆ ಭೇಟಿ ನೀಡಬೇಕಿತ್ತು. ಅಲ್ಲಿನ ಲೇಹ್ ಆಸ್ಪತ್ರೆಗೆ ತೆರಳಿ ಚೀನಾದೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡ ಸೈನಿಕರನ್ನು ಯೋಗಕ್ಷೇಮ ವಿಚಾರಿಸಬೇಕಿತ್ತು. ಅಲ್ಲದೆ, ಗಡಿಯಲ್ಲಿ ಸೈನಿಕ ಕಾರ್ಯಾಚರಣೆಗೆ ಸನ್ನದ್ಧಗೊಂಡಿರುವ ಸೇನೆಯನ್ನು ಪರಿಶೀಲಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಮಹತ್ವದ ಭೇಟಿಯನ್ನು ಇದೀಗ ನಾನಾ ಕಾರಣಗಳಿಂದಾಗಿ ಮುಂದೂಡಲಾಗಿದೆ.

ಸಚಿವ ರಾಜ್‌ನಾಥ್‌ ಸಿಂಗ್ ಅವರ ಲಡಾಖ್ ಭೇಟಿಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ಸರ್ಕಾರದ ವಲಯದಿಂದ ಈವರೆಗೆ ಯಾವುದೇ ಸ್ಪಷ್ಟತೆ ದೊರಕಿಲ್ಲ. ಆದರೆ, ಜೂನ್ 6, 22 ಹಾಗೂ 30 ರಂದು ಎರಡೂ ದೇಶದ ಕಮಾಂಡರ್ ಮಟ್ಟದಲ್ಲಿ ಮೂರು ಸುತ್ತಿನ ಮಾತುಕತೆ ನಡೆದಿದೆ. ಗಡಿಯಲ್ಲಿ ಶಾಂತಿ ಸ್ಥಾಪಿಸುವ ಕುರಿತು ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ.

ಹೀಗಾಗಿ ಈ ಮಾತುಕತೆಗೆ ಅನುಗುಣವಾಗಿ ಚೀನಾ ಸೇನೆಯ ಬದ್ಧತೆಯನ್ನು ಕಾದು ನೋಡಿ ಮುಂದಿನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು, ಇದೇ ಕಾರಣಕ್ಕೆ ಸಚಿವರಾಜನಾಥ್‌ ಸಿಂಗ್ ಅವರ ಲಡಾಖ್ ಭೇಟಿಯನ್ನು ಮುಂದೂಡಲಾಗಿದೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com