ಹೆಚ್ಚುತ್ತಿರುವ ಕೊರೋನಾ ಸೋಂಕು: ಗ್ರಾಮಸ್ಥರಿಂದ ರೆಸಾರ್ಟ್, ಹೋಟೆಲ್ ಗಳಿಗೆ ತೆರಳುವ ಮಾರ್ಗ ಬಂದ್

ಗಡಿಯಲ್ಲಿ ರಸ್ತೆಗಳನ್ನು ನಿರ್ಬಂಧಿಸುವ ಮೂಲಕ ಗ್ರಾಮಸ್ಥರು ತಮ್ಮ ಪ್ರದೇಶಗಳಿಗೆ ನಿಷೇಧ ಹಾಕಿದ್ದಾರೆ ಎಂಬ ವರದಿಗಳ ನಡುವೆ ಒಂದು ಹೆಜ್ಜೆ ಮುಂದೆ ಹೋಗಿರುವ ಎಚ್‌ಡಿ ಕೋಟೆ ತಾಲ್ಲೂಕಿನ ನಿವಾಸಿಗಳು ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಗಡಿಯಲ್ಲಿ ರಸ್ತೆಗಳನ್ನು ನಿರ್ಬಂಧಿಸುವ ಮೂಲಕ ಗ್ರಾಮಸ್ಥರು ತಮ್ಮ ಪ್ರದೇಶಗಳಿಗೆ ನಿಷೇಧ  ಹಾಕಿದ್ದಾರೆ ಎಂಬ ವರದಿಗಳ ನಡುವೆ ಒಂದು ಹೆಜ್ಜೆ ಮುಂದೆ ಹೋಗಿರುವ ಎಚ್‌ಡಿ ಕೋಟೆ ತಾಲ್ಲೂಕಿನ ನಿವಾಸಿಗಳು ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ಗ್ರಾಮಸ್ಥರು ಅಂತರ ಸಂತೆ ಗ್ರಾಮದ ಮೂಲಕ ಸಂಪರ್ಕಕ್ಕೆ ಬರುವ ಹೋಟೆಲ್ ಮತ್ತು ರೆಸಾರ್ಟ್ ಗಳಿಗೆ ಹೋಗುವ ದಾರಿಗಳನ್ನು ಮುಚ್ಚಿದ್ದಾರೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಕುಟುಂಬಸ್ಥರೊಂದಿಗೆ ಅನೇಕ ಮಂದಿ ರೆಸಾರ್ಟ್ ಗಳಿಗೆ ಬರುತ್ತಾರೆ.  ಅವರಿಂದಾಗಿ ಮತ್ತಷ್ಟು ಸೋಂಕು ಹರಡಬಾರದೆಂಬ ಹಿನ್ನೆಲೆಯಲ್ಲಿ ರಸ್ತೆ ಬಂದ್ ಮಾಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಹೀಗಾಗಿ
ಗ್ರಾಮಸ್ಥರೇ ಮುಂದೆ ಬಂದು ರಸ್ತೆ ಮುಚ್ಚಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  ವನ್ಯಜೀವಿ ಸಫಾರಿಯನ್ನು ಮತ್ತೆ ತೆರೆದಿರುವ ಕಾರಣ ಬೆಂಗಳೂರಿನಿಂದ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ಜೊತೆಗೆ ಎಚ್.ಡಿ ಕೋಟೆಯ ಕಬಿನಿ ಹಿನ್ನೀರಿನಲ್ಲಿರುವ ಜಲಾಶಯಗಳಿಗೆ ಬಂದು ರಾತ್ರಿ ತಂಗಿರುತ್ತಾರೆ.

ಎರಡು ತಿಂಗಳುಗಳ ಕಾಲ ಲಾಕ್ ಡೌನ್ ನಿಂದ ವ್ಯವಹಾರವಿಲ್ಲದೇ ನಾವು ಈಗಾಗಲೇ ಸಮಸ್ಯೆಯಲ್ಲಿದ್ದೇವೆ, ಹೀಗಾಗಿ ವಾರಾಂತ್ಯದಲ್ಲಿ ಕಸ್ಟಮರ್ ಗಳಿಗಾಗಿ ನಿರೀಕ್ಷಿಸುತ್ತಿದ್ದೇವೆ, ಆದರೆ ಸ್ಥಳೀಯರು ರಸ್ತೆಗಳನ್ನು ಬಂದ್ ಮಾಡಿದ್ದಾರೆ ಎಂದು ರೆಸಾರ್ಟ್ ಮಾಲೀಕರು  ಅಳಲು ತೋಡಿಕೊಂಡಿದ್ದಾರೆ.

ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೂ ವನ್ಯಜೀವಿ ಸಫಾರಿ ಮುಚ್ಚಬೇಕೆಂದು ಕೆಲವರು ಅಭಿಪ್ರಾಯ ಪಟ್ಚಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಚಾಮರಾಜನರ ಜಿಲ್ಲೆಯಲ್ಲಿ 50 ಕೇಸ್ ಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com