8 ಪೊಲೀಸರ ಹತ್ಯೆಗೈದ ಹಂತಕ ವಿಕಾಸ್ ದುಬೆ ಮನೆ-ಐಷಾರಾಮಿ ಕಾರುಗಳು ಜಖಂ!

ಎಂಟು ಪೊಲೀಸರನ್ನು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಮನೆ ಹಾಗೂ ಐಷಾರಾಮಿ ಕಾರುಗಳನ್ನು ಜಿಲ್ಲಾಡಳಿತ ಕೆಡವಿ ಹಾಕಿದೆ. 

Published: 04th July 2020 07:00 PM  |   Last Updated: 04th July 2020 07:00 PM   |  A+A-


Incident Photo

ಪ್ರತ್ಯಕ್ಷ ದೃಶ್ಯ

Posted By : Vishwanath S
Source : Online Desk

ಲಖನೌ: ಎಂಟು ಪೊಲೀಸರನ್ನು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಮನೆ ಹಾಗೂ ಐಷಾರಾಮಿ ಕಾರುಗಳನ್ನು ಜಿಲ್ಲಾಡಳಿತ ಕೆಡವಿ ಹಾಕಿದೆ. 

ಉತ್ತರ ಪ್ರದೇಶದ ಪೊಲೀಸರು ಕೊಲೆ ಪ್ರಕರಣ ಸಂಬಂಧ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿದ್ದಾಗ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಓರ್ವ ಡಿವೈಎಸ್ಪಿ, ಮೂರು ಸಬ್ ಇನ್ ಸ್ಪೆಕ್ಟರ್ ಹಾಗೂ ನಾಲ್ಕು ಮಂದಿ ಕಾನ್ಸ್ ಸ್ಟೇಬಲ್ ಗಳು ಸೇರಿದಂತೆ ಒಟ್ಟು ಎಂಟು ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. 

ಈ ಹತ್ಯೆಕಾಂಡದ ನಂತರ ವಿಕಾಸ್ ದುಬೆ ತಲೆಮರೆಸಿಕೊಂಡಿದ್ದು ಆತನನ್ನು ಬಂಧಿಸಲು 26 ತಂಡಗಳನ್ನು ರಚಿಸಲಾಗಿದೆ. ಇನ್ನು ವಿಕಾಸ್ ದುಬೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಕಾನ್ಪುರದ ಪೊಲೀಸುರ ಘೋಷಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Yeddyurappa

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಕರ್ನಾಟಕ ಬಜೆಟ್ 2021 ಕುರಿತು ನಿಮ್ಮ ಅಭಿಪ್ರಾಯ...


Result
ಸಮತೋಲಿತ ಬಜೆಟ್
ಗೊತ್ತುಗುರಿ ಇಲ್ಲದ ಬಜೆಟ್
flipboard facebook twitter whatsapp