ದೆಹಲಿ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಮಹಿಳೆ ಮೇಲೆ ಹರಿಸಿದ ಸಬ್ ಇನ್ಸ್ ಪೆಕ್ಟರ್, ಬಂಧನ

ಕುಡಿದ ಮತ್ತಿನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೇಗವಾಗಿ ಕಾರು ಚಲಾಯಿಸಿ ವೃದ್ಧ ಮಹಿಳೆ ಮೇಲೆ ಹರಿಸಿ ಗಂಭೀರ ಗಾಯಗೊಳಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ. ಆರೋಪಿ ಸಬ್ ಇನ್ಸ್ ಪೆಕ್ಟರ್ ಯೋಗೇಂದ್ರ ನನ್ನು ಬಂಧಿಸಲಾಗಿದೆ.
ಮಹಿಳೆ ಮೇಲೆ ಕಾರು ಹರಿದಿರುವುದು
ಮಹಿಳೆ ಮೇಲೆ ಕಾರು ಹರಿದಿರುವುದು

ನವದೆಹಲಿ: ಕುಡಿದ ಮತ್ತಿನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೇಗವಾಗಿ ಕಾರು ಚಲಾಯಿಸಿ ವೃದ್ಧ ಮಹಿಳೆ ಮೇಲೆ ಹರಿಸಿ ಗಂಭೀರ ಗಾಯಗೊಳಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ. ಆರೋಪಿ ಸಬ್ ಇನ್ಸ್ ಪೆಕ್ಟರ್ ಯೋಗೇಂದ್ರ ನನ್ನು ಬಂಧಿಸಲಾಗಿದೆ.

ಪೂರ್ವ ದೆಹಲಿಯ ಘಾಜಿಪುರ ಪ್ರದೇಶದ ಚಿಲ್ಲಾ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಮದ್ಯಪಾನ ಮಾಡಿ ಸಬ್ ಇನ್ಸ್ ಪೆಕ್ಟರ್ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಿರುವಾಗ ರಸ್ತೆ ಬದಿ ಮಹಿಳೆ ನಡೆದುಕೊಂಡು ಹೋಗುತ್ತಿದ್ದರು. ಚಾಲನೆಯಲ್ಲಿ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಾಯಿಸಿ ಮಹಿಳೆಯ ಮೇಲೆ ಹರಿಸಿದ್ದಲ್ಲದೆ ಕಾರಿನಡಿ ಮಹಿಳೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಗೊತ್ತಾದಾಗ ತಪ್ಪಿಸಿಕೊಂಡು ಹೋಗಲು ಸಬ್ ಇನ್ಸ್ ಪೆಕ್ಟರ್ ಯತ್ನಿಸಿದ್ದಾನೆ.

ಸಿಸಿಟಿವಿಯಲ್ಲಿ ಇದು ಸೆರೆಯಾಗಿದ್ದು ಅದರ ಸಹಾಯದಿಂದ ಆರೋಪಿ ಸಬ್ ಇನ್ಸ್ ಪೆಕ್ಟರ್ ನನ್ನು ಬಂಧಿಸಲಾಗಿದೆ.ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದ್ಯಪಾನ ಮಾಡಿ ಮಹಿಳೆ ಮೇಲೆ ಕಾರು ಚಲಾಯಿಸಿ ಜೀವಕ್ಕೆ ಕುತ್ತು ತಂದ ಸಬ್ ಇನ್ಸ್ ಪೆಕ್ಟರ್ ಯೋಗೇಂದ್ರ ವಿರುದ್ಧ ಕೇಸು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com