ಲಡಾಖ್'ನ ನೀಮುನಲ್ಲಿ ಸಿಂಧು ದರ್ಶನ್ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಅಚ್ಚರಿಯ ರೀತಿಯಲ್ಲಿ ಲಡಾಖ್'ನ ನೀಮುವಿನಲ್ಲಿರುವ ಸೇನಾ ನೆಲೆಗೆ ಭೇಟಿ ನೀಡಿದ್ದು, ಈ ವೇಳೆ ನೀಮುವಿನಲ್ಲಿ ಸಿಂಧು ದರ್ಶನ್ ಪೂಜೆ ನೆರವೇರಿಸಿದರು. 
ಸಿಂಧು ನದಿಯಲ್ಲಿ ಪೂಜೆ ನೆರವೇರಿಸುತ್ತಿರುವ ಪ್ರಧಾನಿ ಮೋದಿ
ಸಿಂಧು ನದಿಯಲ್ಲಿ ಪೂಜೆ ನೆರವೇರಿಸುತ್ತಿರುವ ಪ್ರಧಾನಿ ಮೋದಿ

ಲೇಹ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಅಚ್ಚರಿಯ ರೀತಿಯಲ್ಲಿ ಲಡಾಖ್'ನ ನೀಮುವಿನಲ್ಲಿರುವ ಸೇನಾ ನೆಲೆಗೆ ಭೇಟಿ ನೀಡಿದ್ದು, ಈ ವೇಳೆ ನೀಮುವಿನಲ್ಲಿ ಸಿಂಧು ದರ್ಶನ್ ಪೂಜೆ ನೆರವೇರಿಸಿದರು. 

ಲಡಾಖ್'ನ ಲೇಹ್ ಜಿಲ್ಲೆಯಲ್ಲಿ ನೀಮು ಇದ್ದು, ಲೇಹ್ ನಿಂದ 35 ಕಿ.ಮೀ ದೂರದಲ್ಲಿರುವ ಲಿಕಿರ್ ತಾಲೂಕಿನಲ್ಲಿದೆ. ಸಮುದ್ರ ಮಟ್ಟದಿಂದ 11 ಸಾವಿರ ಅಡಿ ಎತ್ತರದಲ್ಲಿದೆ. ಇದೊಂದು ದುರ್ಗಮ ಪ್ರದೇಶವಾಗಿದೆ. ಝಾನ್ಸ್ಕಕರ್ ಪರ್ವತ ಶ್ರೇಣಿಯಲ್ಲಿ ಸಿಂಧು ನದಿಯ ದಂಡೆಯಲ್ಲಿದೆ. ಈ ಊರಿನ ಬಳಿಯೇ ಸಿಂಧು ನದಿಯಲ್ಲಿ ಝಾನ್ಸ್ ಕರ್ ನದಿಯೂ ಸಂಗಮವಾಗುತ್ತದೆ. 

ಈ ಪ್ರದೇಶಕ್ಕೆ ನಿನ್ನೆ ಭೇಟಿ ನೀಡಿದ ಪ್ರಧಾನಿ ಮೋದಿಯವರು ಸಿಂಧು ನದಿಗೆ ಪೂಜೆ ನೆರವೇರಿಸಿದರು. ಬಳಿಕ ಲೇಹ್ ನಲ್ಲಿರುವ ಯುದ್ಧ ಸ್ಮಾರಕ ಹಾಲ್ ನಲ್ಲಿ ಹುತಾತ್ಮ ವೀರ ಯೋಧರಿಗೆ ಗೌರವ ಸಲ್ಲಿಸಿದರು. ಬಳಿಕ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯೋಧರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

ಆಷಾಡ ಪೂರ್ಣಿಮೆಯ ದಿನ ಪ್ರತೀವರ್ಷ ಸಿಂಧು ನದಿಯಲ್ಲಿ ಸಿಂಧು ದರ್ಶ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಸಾಮಾನ್ಯವಾಗಿ ಮೂರು ದಿನಗಳ ಕಾಲ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸ್ಥಳಕ್ಕೆ ಭೇಟಿ ನೀಡಿದ್ದು, ಪೂಜೆ ನೆರವೇರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com