ದೇಶದ ಮೊದಲ ಕೋವಿಡ್-19 ಲಸಿಕೆ ಈ ವರ್ಷ ಬಿಡುಗಡೆ ಸಾಧ್ಯತೆ ಇಲ್ಲ- ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ

ಐಸಿಎಂಆರ್ ಆಗಸ್ಟ್ 15ರಂದು ಬಿಡುಗಡೆ ಮಾಡುವ ಉದ್ದೇಶ ಹೊಂದಿರುವ ದೇಶದ ಮೊದಲ ಕೋವಿಡ್-19 ಲಸಿಕೆ ಬಗ್ಗೆ ಸಾಕಷ್ಟು ಮಾನವ ಪ್ರಯೋಗ ಹಾಗೂ ಮಾಹಿತಿ ಪರೀಕ್ಷೆ ಪ್ರಕ್ರಿಯೆ ನಡೆಯಬೇಕಾಗಿರುವುದರಿಂದ ಈ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇಲ್ಲ ಎಂದು ಸಿಎಸ್ ಐಆರ್-ಸಿಸಿಎಂಬಿ ನಿರ್ದೇಶಕ ರಾಕೇಶ್ ಕೆ ಮಿಶ್ರಾ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್:  ಐಸಿಎಂಆರ್ ಆಗಸ್ಟ್ 15ರಂದು ಬಿಡುಗಡೆ ಮಾಡುವ ಉದ್ದೇಶ ಹೊಂದಿರುವ ದೇಶದ ಮೊದಲ ಕೋವಿಡ್-19 ಲಸಿಕೆ ಬಗ್ಗೆ ಸಾಕಷ್ಟು ಮಾನವ ಪ್ರಯೋಗ ಹಾಗೂ ಮಾಹಿತಿ ಪರೀಕ್ಷೆ ಪ್ರಕ್ರಿಯೆ ನಡೆಯಬೇಕಾಗಿರುವುದರಿಂದ ಈ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇಲ್ಲ ಎಂದು ಸಿಎಸ್ ಐಆರ್-ಸಿಸಿಎಂಬಿ ನಿರ್ದೇಶಕ ರಾಕೇಶ್ ಕೆ ಮಿಶ್ರಾ ಹೇಳಿದ್ದಾರೆ.

ಕ್ಲಿನಿಕಲ್ ಮಾನವ ಪ್ರಯೋಗಕ್ಕಾಗಿ ಆಸ್ಪತ್ರೆಗಳ ಮೇಲೆ ಒತ್ತಡ ಹಾಕಲು ಮತ್ತು ಆಂತರಿಕ ಬಳಕೆಗಾಗಿ ಐಸಿಎಂಆರ್ ಈ ಸಂಬಂಧ ಪತ್ರ ಬರೆದಿರಬಹುದೆಂದು ಸೆಲ್ಯುಲಾರ್ ಮತ್ತು ಅನ್ವಯಿಕ ಜೀವಶಾಸ್ತ್ರ ಕೇಂದ್ರ- ಸಿಎಸ್ಐರ್ ನಿರ್ದೇಶಕ ರಾಕೇಶ್ ಕೆ. ಮಿಶ್ರಾ ತಿಳಿಸಿದ್ದಾರೆ.

'ಎಲ್ಲವೂ ಪಠ್ಯ ಪುಸ್ತಕದ ಯೋಜನೆಯಂತೆ ನಡೆದರೆ ಕೋವಿಡ್-19 ನಂತಹ ಲಸಿಕೆ ಹೊಂದಲು ಆರರಿಂದ 8 ತಿಂಗಳು ಬೇಕಾಗಲಿದೆ ಎಂಬ ಬಗ್ಗೆ ಮಾತನಾಡಿದ್ದೇವೆ.ಕಾರಣ, ಸಾಕಷ್ಟು ಸಂಖ್ಯೆಯಲ್ಲಿ ಪರೀಕ್ಷೆ ನಡೆಯಬೇಕಾಗಿದೆ. ಯಾರಾದರೂ ರೋಗಿಗೆ ಔಷಧ ನೀಡಿ ಅವರು ಗುಣಮುಖರಾದರೆ ಅಥವಾ ಇಲ್ಲವೇ ಎಂಬುದನ್ನು ನೋಡುವ ರೀತಿಯ ಔಷಧ ಇದಲ್ಲ ಎಂದು ಅವರು ಸುದ್ದಿಗಾರರಿಗೆ
ಪ್ರತಿಕ್ರಿಯಿಸಿದ್ದಾರೆ.

ಭಾರತ್ ಬಯೋಟೆಕ್ ನಿರ್ಮಿಸಿರುವ ಕೋವಿಡ್-19 ಲಸಿಕೆ 'ಕೊವಾಕ್ಸಿನ್ ' ನ್ನು  ಆಗಸ್ಚ್ 15 ರಂದು ಬಿಡುಗಡೆ ಮಾಡುವ ಉದ್ದೇಶದಲ್ಲಿ ಕ್ಷೀಪ್ರಗತಿಯಲ್ಲಿ ಮಾನವ ಪ್ರಯೋಗ ನಡೆಸುವಂತೆ  ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಶುಕ್ರವಾರ ಆಯ್ದ ವೈದ್ಯಕೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಪತ್ರ ಬರೆದಿದೆ.

ವಾಸ್ತವವಾಗಿ ಲಸಿಕೆ ಅಭಿವೃದ್ಧಿಪಡಿಸಲು ಅನೇಕ ವರ್ಷಗಳು ಬೇಕಾಗುತ್ತದೆ. ಆದರೆ, ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಮುಂದಿನ ವರ್ಷದ ಆರಂಭದಲ್ಲಿ ಲಸಿಕೆ ಸಿದ್ಧವಾಗುವ  ಸಾಧ್ಯತೆಯಿದೆ . ಅದಕ್ಕೂ ಮುಂಚೆ ಸಾಧ್ಯವಿಲ್ಲ, ಅದಕ್ಕೂ ಮುಂಚೆ ಬರಲಿದೆ ಎಂಬುದು ನನ್ನ ತಿಳುವಳಿಕೆ ಮಟ್ಟಿಗೆ ಕಷ್ಟಸಾಧ್ಯ ಎಂದು ಮಿಶ್ರಾ ಹೇಳಿದ್ದಾರೆ.

ಮಾನವ ಪ್ರಯೋಗ ಹಂತದಲ್ಲಿ ಸಾಕಷ್ಟು ಜನರಿಗೆ ಲಸಿಕೆ ನೀಡಲಾಗುತ್ತದೆ. ಫಲಿತಾಂಶ ಹಾಗೂ ಮಾಹಿತಿ ಸಂಗ್ರಹಿಸಲು ಸಾಕಷ್ಟು ತಿಂಗಳುಗಳೇ ಬೇಕಾಗಲಿವೆ. ಪ್ರಸ್ತುತ ಪ್ರತಿದಿನ 400ರಿಂದ 500 ಕೋವಿಡ್ 19 ಲಸಿಕೆಯ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕೂ ಹೆಚ್ಚಿಗೆ ಸಂಖ್ಯೆಯಲ್ಲಿ ಪರೀಕ್ಷೆ ನಡೆಸುವುದು ಕಷ್ಟಸಾಧ್ಯ. ಅಲ್ಪಾವಧಿಯಲ್ಲಿ ಲಸಿಕೆ ಪ್ರಯೋಗ ಹಂತ ಪೂರ್ಣಗೊಳಿಸಲು ಸಾಧ್ಯವಿಲ್ಲ, ಹೊಸ ಹಾದಿ ತೋರಿಸುವಂತೆ ಐಸಿಎಂಆರ್ ನಲ್ಲಿ ಪ್ರಸ್ತಾವಿಸಿದ್ದೇವೆ. ಈ ಬಗ್ಗೆ ಐಸಿಎಂಆರ್ ಸಲಹೆಗೆ ಕಾಯುತ್ತಿರುವುದಾಗಿ ಮಿಶ್ರಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com