ಭಯಾನಕ ವಿಡಿಯೋ! ಕುಡಿದ ಮತ್ತಿನಲ್ಲಿ ಮಹಿಳೆಗೆ ಕಾರು ಗುದ್ದಿಸಿದ ಚಾಲಕ, ಮುಂದೇನಾಯ್ತು?ನೋಡಿ

 ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ 55 ವರ್ಷದ ಮಹಿಳೆ ಮೇಲೆ ಕಾರು ಹತ್ತಿಸಿದ್ದರಿಂದ ಆಕೆ ಗಾಯಗೊಂಡಿರುವ ಘಟನೆ ನವದೆಹಲಿಯ ಚಿಲ್ಲಾ ಗ್ರಾಮದಲ್ಲಿ  ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Published: 04th July 2020 11:24 PM  |   Last Updated: 04th July 2020 11:31 PM   |  A+A-


The_video_footage_shows_the_woman1

ಕಾರಿನಲ್ಲಿ ಮುಂಭಾಗದಲ್ಲಿ ಮಹಿಳೆಯ ಚಿತ್ರ

Posted By : Nagaraja AB
Source : The New Indian Express

ನವದೆಹಲಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ 55 ವರ್ಷದ ಮಹಿಳೆ ಮೇಲೆ ಕಾರು ಹತ್ತಿಸಿದ್ದರಿಂದ ಆಕೆ ಗಾಯಗೊಂಡಿರುವ ಘಟನೆ ನವದೆಹಲಿಯ ಚಿಲ್ಲಾ ಗ್ರಾಮದಲ್ಲಿ  ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಿರಿದಾದ ರಸ್ತೆಯಲ್ಲಿ ಬರುವ ಕಾರಿನ ಮುಂಭಾಗದಿಂದ ಕೆಳಗೆ ಬೀಳುವ ಮಹಿಳೆ ಮೇಲೆ ಮತ್ತೆ ಕಾರು ಹರಿಯುವ ದೃಶ್ಯ ವಿಡಿಯೋದಲ್ಲಿದೆ. ಈ ಮಹಿಳೆಯನ್ನು ಹರಿರಾನ್ ಎಂದು ಗುರುತಿಸಲಾಗಿದೆ.  

ಇದನ್ನು ನೋಡಿದ ಸುತ್ತಮುತ್ತಲಿನವರು ಕಾರಿನಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ  ಎಡಗಡೆಗೆ ತಿರುವು ಪಡೆದುಕೊಂಡ  ಕಾರು ಮತ್ತೆ ಆಕೆಯ ಮೇಲೆ ಹತ್ತಿ ಕೆಲ ಮೀಟರ್ ವರೆಗೂ ಮಹಿಳೆಯನ್ನು ಎಳೆದುಕೊಂಡು ಹೋಗುತ್ತದೆ. ನಂತರ ಅಲ್ಲಿದ್ದ ಜನರು ಕಾರು ಸುತ್ತ ಸುತ್ತುವರೆಯುತ್ತಾರೆ.

ಆರೋಪಿಯನ್ನು ಭಾನು ಎಂದು ಪೊಲೀಸರು ಗುರುತಿಸಿದ್ದಾರೆ. ಘಟನೆ ನಡೆದಾಗ ಆತ ಕುಡಿದಿರುವುದು ದೃಢಪಟ್ಟಿದೆ. ಆತನ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ಬಂಧಿಸಿರುವುದಾಗಿ ಉಪ ಪೋಲಿಸ್ ಆಯುಕ್ತ ಜಮೀತ್ ಸಿಂಗ್ ತಿಳಿಸಿದ್ದಾರೆ.

ಗಾಯಗೊಂಡ ಮಹಿಳೆಯನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಆಕೆಯ ಸೊಸೆ ಮಾಹಿತಿ ನೀಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp