ಭಾರತೀಯ ಸೈನಿಕರ ಮನೋಸ್ಥೈರ್ಯ ಅಧಿಕವಾಗಿದೆ:ಇಂಡೊ-ಟಿಬೆಟನ್ ಗಡಿ ಮುಖ್ಯಸ್ಥ ಎಸ್ ಎಸ್ ದೆಸ್ವಲ್

ಭಾರತೀಯ ಸಶಸ್ತ್ರ ಪಡೆಗಳ ಮನೋಸ್ಥೈರ್ಯ ಹೆಚ್ಚಾಗಿದ್ದು, ಸೈನ್ಯವು ಈ ಹಿಂದಿನಂತೆ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧವಾಗಿದೆ ಎಂದು ಭಾರತ-ಟಿಬೆಟಿಯನ್ ಗಡಿ ಭಾಗದ ಪೊಲೀಸ್ ಪಡೆ ಮುಖ್ಯಸ್ಥ ಎಸ್ ಎಸ್ ದೆಸ್ವಾಲ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:ಭಾರತೀಯ ಸಶಸ್ತ್ರ ಪಡೆಗಳ ಮನೋಸ್ಥೈರ್ಯ ಹೆಚ್ಚಾಗಿದ್ದು, ಸೈನ್ಯವು ಈ ಹಿಂದಿನಂತೆ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧವಾಗಿದೆ ಎಂದು ಭಾರತ-ಟಿಬೆಟಿಯನ್ ಗಡಿ ಭಾಗದ ಪೊಲೀಸ್ ಪಡೆ ಮುಖ್ಯಸ್ಥ ಎಸ್ ಎಸ್ ದೆಸ್ವಾಲ್ ಹೇಳಿದ್ದಾರೆ.

ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ದೇಶಗಳ ಸೇನಾ ನಿಲುಗಡೆ, ಅಲ್ಲಿನ ಘರ್ಷಣೆ, ಭಾರತೀಯ ಸೈನಿಕರು ತೋರಿಸುತ್ತಿರುವ ಮನೋಸ್ಥೈರ್ಯಗಳ ಬಗ್ಗೆ ಮಾತನಾಡಿದ್ದಾರೆ.

ಮೊನ್ನೆ ಪ್ರಧಾನಿ ಮೋದಿಯವರು ಲಡಾಕ್ ಗೆ ಭೇಟಿ ನೀಡಿ ನಿಮುವಿನಲ್ಲಿ ಸೇನಾಪಡೆಗಳನ್ನು ಉದ್ದೇಶಿಸಿ ಮಾತನಾಡಿದ್ದು ಗಡಿಯಲ್ಲಿ ಕಾವಲು ಕಾಯುತ್ತಿರುವ ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ರಾಷ್ಟ್ರದ ನಾಯಕತ್ವ, ರಾಜಕೀಯ ನಾಯಕತ್ವ ಮತ್ತು ಸೈನಿಕರು, ಸೇನಾಪಡೆ ಇವೆಲ್ಲವೂ ದೇಶಕ್ಕೆ ಸಮರ್ಪಣೆಯಾಗುತ್ತಿದೆ ಎಂದಿದ್ದಾರೆ.

ಭಾರತೀಯ ಯೋಧರು ಸೇನಾಪಡೆಯಲ್ಲಿರಲಿ, ವಾಯುಪಡೆಯಲ್ಲಿರಲಿ ಅಥವಾ ಇಂಡೊ-ಟಿಬೆಟಿಯನ್ ಪಡೆಯಲ್ಲಿರಲಿ ಯೋಧರ ಗುರಿ ಮತ್ತು ಉದ್ದೇಶ ಒಂದೇ ದೇಶಕ್ಕಾಗಿ ಹೋರಾಡುವುದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡುವುದು ಎಂದರು.

ಅವರು ಇಂದು ದೆಹಲಿಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಗೆ ಸಿದ್ಧವಾಗಿರುವ 10 ಸಾವಿರ ಬೆಡ್ ಗಳ ಸೌಕರ್ಯ ಕೇಂದ್ರದ ಉದ್ಘಾಟನೆ ಸಮಾರಂಭದ ಹೊರಗೆ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com