ಈ ಶ್ರಾವಣ ಮಾಸದಲ್ಲಿ ಮನೆಬಾಗಿಲಿಗೇ ಬರತ್ತೆ ಕಾಶಿ ವಿಶ್ವನಾಥ ಪ್ರಸಾದ!

ಪವಿತ್ರ ಶ್ರಾವಣ ಮಾಸದಲ್ಲಿ ಲಕ್ಷಾಂತರ ಶಿವಭಕ್ತರು ಕಾಶಿಯಾತ್ರೆ ಮಾಡಿ ವಿಶ್ವನಾಥನ ದರ್ಶನ ಪಡೆಯಲು ಬಯಸುತ್ತಾರೆ. ಆದರೆ ಈ ಬಾರಿ ದೇಶಾದ್ಯಂತ ಕೊರೋನಾ ಹಾವಳಿ ಇರುವ ಕಾರಣ ಅಂತಹಾ ಯಾತ್ರೆಗೆ ಅವಕಾಶವಿರುವುದಿಲ್ಲ.
ಈ ಶ್ರಾವಣ ಮಾಸದಲ್ಲಿ ಮನೆಬಾಗಿಲಿಗೇ ಬರತ್ತೆ ಕಾಶಿ ವಿಶ್ವನಾಥ ಪ್ರಸಾದ!

ವಾರಣಾಸಿ: ಪವಿತ್ರ ಶ್ರಾವಣ ಮಾಸದಲ್ಲಿ ಲಕ್ಷಾಂತರ ಶಿವಭಕ್ತರು ಕಾಶಿಯಾತ್ರೆ ಮಾಡಿ ವಿಶ್ವನಾಥನ ದರ್ಶನ ಪಡೆಯಲು ಬಯಸುತ್ತಾರೆ. ಆದರೆ ಈ ಬಾರಿ ದೇಶಾದ್ಯಂತ ಕೊರೋನಾ ಹಾವಳಿ ಇರುವ ಕಾರಣ ಅಂತಹಾ ಯಾತ್ರೆಗೆ ಅವಕಾಶವಿರುವುದಿಲ್ಲ.

ಆದರೆ ಇದಕ್ಕಾಗಿ ಯಾರೂ ನಿರಾಶರಾಗಬೇಕಾಗಿಲ್ಲ. ಭಕ್ತರಿಗೆ ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೂ, ಸೋಮವಾರದಿಂದ ಪ್ರಾರಂಭವಾಗುವ ಹಿಂದೂ ಕ್ಯಾಲೆಂಡರ್ ನ ಶ್ರಾವಣ ಮಾಸದಲ್ಲಿ ವಿಶ್ವನಾಥನ "ಪ್ರಸಾದ"ವನ್ನು ನಿಮ್ಮ ನಿಮ್ಮ ಮನೆಗೇ ತರಿಸಿಕೊಳ್ಳಬಹುದು. ಇದಕ್ಕಾಗಿ ವಿಶ್ವನಾಥ ದೇವಾಲಯ ಹಾಗೂ ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡಿವೆ.

"ಅಂಚೆ ಇಲಾಖೆ ಮತ್ತು ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಶ್ರಾವಣ ಮಾಸದಲ್ಲಿ  ಪ್ರಸಾದವನ್ನು ತಲುಪಿಸಲು ಒಪ್ಪಂದ ಮಾಡಿಕೊಂಡಿದೆ. 'ಪ್ರಸಾದವನ್ನು ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಲಾಗುವುದು" ಎಂದು ಲಕ್ನೋ ವೃತ್ತದ ಅಂಚೆ ವಿಭಾಗದ ನಿರ್ದೇಶಕ ಕೃಷ್ಣ ಕುಮಾರ್ ಯಾದವ್ ತಿಳಿಸಿದ್ದಾರೆ.

ವಿಶ್ವನಾಥನ ಪ್ರಸಾದಕ್ಕಾಗಿ ಯಾವುದೇ ಅಂಚೆ ಕಚೇರಿಯಿಂದ 251 ರೂ.ಗಳ ಎಲೆಕ್ಟ್ರಾನಿಕ್ ಮನಿ ಆರ್ಡರ್ (ಇಎಂಒ) ವನ್ನುವಾರಣಾಸಿ ಪೂರ್ವ ವಿಭಾಗದ ಸೂಪರಿಟೆಂಡೆಂಟ್ ಅಂಚೆ ಕಚೇರಿಗಳಿಗೆ ಕಳುಹಿಸಬೇಕು ಮತ್ತು ಮೂರನೇ ದಿನ ಕಾಶಿ ವಿಶ್ವನಾಥ ದೇವಸ್ಥಾನದಿಂದ 'ಪ್ರಸಾದ' ವನ್ನು ಸ್ಪೀಡ್ ಪೋಸ್ಟ್ ಮುಖಾಂತರ ತಲುಪಿಸಲಾಗುತ್ತದೆ.

ಈ ಪಾರ್ಸಲ್‌ನಲ್ಲಿ ಕಾಶಿ ವಿಶ್ವನಾಥ ದೇವಾಲಯದ ಜ್ಯೋತಿರ್ಲಿಂಗ, ಮಹಾ ಮೃತುಂಜಯ ಮಹಾ ಯಂತ್ರ, ಶಿವ ಚಾಲೀಸಾ, ರುದ್ರಾಕ್ಷಿ, ಡ್ರೈ ಫ್ರೂಟ್ಸ್, ವಿಭೂತಿಮತ್ತು ಒಂದು ಪ್ಯಾಕೆಟ್ ಸಿಹಿತಿಂಡಿ ಹಾಗೂ ದೇವರ ಫೋಟೋಗಳಿರಲಿದೆ ಎಂದು ಯಾದವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com