ಚಿನ್ನ ಕಳ್ಳಸಾಗಣೆ ಪ್ರಕರಣ: ಕೇರಳ ಸಿಎಂ ಕಾರ್ಯದರ್ಶಿ ಎಂ ಶಿವಶಂಕರ್ ವಜಾ

ಯುಎಇ ರಾಯಭಾರಿ ಕಚೇರಿ ಹೆಸರಿಗೆ ಬಂದ ಪಾರ್ಸೆಲ್‍ ಮೂಲಕ ಚಿನ್ನಕಳ್ಳಸಾಗಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್‍ನೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ ಅವರ ಕಾರ್ಯದರ್ಶಿ ಎಂ ಶಿವಶಂಕರ್‍ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಶಿವಶಂಕರ್
ಶಿವಶಂಕರ್

ತಿರುವನಂತಪುರಂ: ಯುಎಇ ರಾಯಭಾರಿ ಕಚೇರಿ ಹೆಸರಿಗೆ ಬಂದ ಪಾರ್ಸೆಲ್‍ ಮೂಲಕ ಚಿನ್ನಕಳ್ಳಸಾಗಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್‍ನೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ ಅವರ ಕಾರ್ಯದರ್ಶಿ ಎಂ ಶಿವಶಂಕರ್‍ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

ಶಿವಶಂಕರ್ ಅವರ ಸ್ಥಾನಕ್ಕೆ ಐಎಎಸ್‍ ಅಧಿಕಾರಿ ಮಿರ್ ಮೊಹಮ್ಮದ್ ಅವರನ್ನು ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮಧ್ಯೆ ಶಿವಶಂಕರ್ ಅವರು ಕೇರಳ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದು, ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿದ ನಂತ ದೀರ್ಘ ಕಾಲದ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣ ಕುರಿತು ಸರ್ಕಾರ ಶಿವಶಂಕರ್ ಅವರಿಂದ ವಿವರಣೆ ಕೋರಿದೆ. ಶಿವಶಂಕರ್‍ ಹೆಸರನ್ನು ಪ್ರತಿಪಕ್ಷಗಳು ವಿವಾದಾತ್ಮಕ ಸ್ಪ್ರಿಂಕ್ಲರ್ ಪ್ರಕರಣಕ್ಕೆ ಎಳೆದೊಯ್ದಿವೆ.

ಕೊವಿಡ್‍ ರೋಗಿಗಳು ಮತ್ತು ಶಂಕಿತರ ಮಾಹಿತಿ(ದತ್ತಾಂಶ) ಒದಗಿಸುವ ಕುರಿತು ಶಿವಶಂಕರ್ ಅಮೆರಿಕದ ಸ್ಪ್ರಿಂಕ್ಲರ್ ಸಂಸ್ಥೆಯೊಂದಿಗೆ ಒಪ್ಪಂದ ಆರಂಭಿಸಿದ್ದರು ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಚಿನ್ನ ಕಳ್ಳಸಾಗಣೆ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸುವಂತೆ ಪ್ರತಿಪಕ್ಷ ನಾಯಕ ರಮೇಶ್‍ ಚೆನ್ನಿತಾಲ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಯವರ ಕಚೇರಿ ಕ್ರಿಮಿನಲ್‍ಗಳ ಅಡ್ಡೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com