ಪರೀಕ್ಷೆ ಬಗ್ಗೆ ಯುಜಿಸಿ ಮಾರ್ಗಸೂಚಿ ವಿದ್ಯಾರ್ಥಿಗಳ ಹಿತದೃಷ್ಟಿಗೆ ವಿರುದ್ಧವಾಗಿದೆ: ದೆಹಲಿ ವಿ.ವಿ ಶಿಕ್ಷಕರ ಸಂಘ ಆರೋಪ

ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕೇಂದ್ರ ಧನ ಸಹಾಯ ಆಯೋಗ(ಯುಜಿಸಿ) ಹೊರಡಿಸಿರುವ ಮಾರ್ಗಸೂಚಿಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಬೋಧಕರ ಸಂಘಟನೆ(ಡುಟಾ) ಆರೋಪಿಸಿದೆ.
ದೆಹಲಿ ವಿಶ್ವವಿದ್ಯಾಲಯ
ದೆಹಲಿ ವಿಶ್ವವಿದ್ಯಾಲಯ

ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕೇಂದ್ರ ಧನ ಸಹಾಯ ಆಯೋಗ(ಯುಜಿಸಿ) ಹೊರಡಿಸಿರುವ ಮಾರ್ಗಸೂಚಿಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಬೋಧಕರ ಸಂಘಟನೆ(ಡುಟಾ) ಆರೋಪಿಸಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಜುಲೈ ಬದಲಿಗೆ ಅಂತಿಮ ವರ್ಷದ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ನಡೆಸಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಆದೇಶ ಹೊರಡಿಸಿದೆ.ಸೆಪ್ಟೆಂಬರ್ ನಲ್ಲಿ ಅನಿವಾರ್ಯ ಕಾರಣಗಳಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗುತ್ತಿದ್ದು ವಿಶ್ವವಿದ್ಯಾಲಯಗಳು ಸಾಧ್ಯವಾದ ಸಮಯದಲ್ಲಿ ನಂತರ ವಿಶೇಷ ಪರೀಕ್ಷೆ ನಡೆಸಬಹುದು ಎಂದು ಯುಜಿಸಿಯ ಪರಿಷ್ಕೃತ ಮಾರ್ಗಸೂಚಿಯಲ್ಲಿ ನಿನ್ನೆ ತಿಳಿಸಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸುವ ಗುಣಮಟ್ಟ ಕಾರ್ಯವಿಧಾನ(ಎಸ್ಒಪಿ) ಪ್ರಕಾರ ಪರೀಕ್ಷೆಗಳನ್ನು ನಡೆಸಬಹುದು ಎಂದು ಗೃಹ ಸಚಿವಾಲಯದ ಅನುಮತಿ ಬಂದ ನಂತರ ಮಾನವ ಸಂಪನ್ಮೂಲ ಸಚಿವಾಲಯ ನಿನ್ನೆ ಹೇಳಿದೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವಿರೋಧದ ನಡುವೆ ಸಹ ದೆಹಲಿ ವಿಶ್ವವಿದ್ಯಾಲಯ ಆನ್ ಲೈನ್ ಮುಕ್ತ ಪುಸ್ತಕ ಪರೀಕ್ಷೆ ನಡೆಸುತ್ತಿದೆ.
ಶಿಕ್ಷಣದಲ್ಲಿ ವ್ಯಾಪಾರೀಕರಣ ಪ್ರವೃತ್ತಿ ಕಂಡುಬರುತ್ತಿದ್ದು ಅದರಂತೆ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆಯಲ್ಲಿ ಯಾವುದೇ ಶಿಸ್ತು, ಪಾವಿತ್ರ್ಯತೆ ಉಳಿದಿಲ್ಲ ಎಂದು ಡುಟಾ ಹೇಳಿದೆ.

ದೆಹಲಿ ವಿಶ್ವವಿದ್ಯಾಲಯ ಕಳೆದ ಬಾರಿ ಆನ್ ಲೈನ್ ನಲ್ಲಿ ನಡೆಸಿದ್ದ ಅಣಕು ಪರೀಕ್ಷೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ಪರೀಕ್ಷೆ ರದ್ದುಪಡಿಸಬೇಕೆಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒತ್ತಾಯಿಸುತ್ತಿದ್ದಾರೆ. ಇಲ್ಲಿ ಇದೇ 10ರಿಂದ ಪರೀಕ್ಷೆ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com