20 ಯೋಧರ ಹತ್ಯೆಯನ್ನು ಚೀನಾ ಏಕೆ ಸಮರ್ಥಿಸಿಕೊಳ್ಳುತ್ತಿದೆ?: ರಾಹುಲ್ ಗಾಂಧಿ

ಗಲ್ವಾನ್ ಕಣಿವೆಯ ಎಲ್ಎಸಿಯಿಂದ ಭಾರತ-ಚೀನಾ ತಮ್ಮ ಸೇನಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಪ್ರಾರಂಭಿಸಿರುವ ಬೆನ್ನಲ್ಲೇ ಕಾಂಗ್ರೆಸ್ ನ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದ್ದಾರೆ. 
ರಾಹುಲ್ ಗಾಂಧಿ, ಪ್ರಧಾನಿ ಮೋದಿ
ರಾಹುಲ್ ಗಾಂಧಿ, ಪ್ರಧಾನಿ ಮೋದಿ

ಗಲ್ವಾನ್ ಕಣಿವೆಯ ಎಲ್ಎಸಿಯಿಂದ ಭಾರತ-ಚೀನಾ ತಮ್ಮ ಸೇನಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಪ್ರಾರಂಭಿಸಿರುವ ಬೆನ್ನಲ್ಲೇ ಕಾಂಗ್ರೆಸ್ ನ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದ್ದಾರೆ. 

ಸರ್ಕಾರ ಏಕೆ ಯಥಾಸ್ಥಿತಿ ಕಾಯ್ದುಕೊಳ್ಳಲು ಒತ್ತಾಯಿಸಲಿಲ್ಲ? ಸರ್ಕಾರದ ಹೇಳಿಕೆಗಳಲ್ಲಿ ಏಕೆ ಗಲ್ವಾನ್ ಕಣಿವೆಯ ಪ್ರಾದೇಶಿಕ ಸಾರ್ವಭೌಮತ್ವ ಉಲ್ಲೇಖವಾಗಲಿಲ್ಲ? ರಾಷ್ಟ್ರೀಯ ಹಿತಾಸಕ್ತಿ ಎಲ್ಲಕ್ಕಿಂತಲೂ ಮಿಗಿಲಾದದ್ದು. ಅದನ್ನು ಭಾರತ ಸರ್ಕಾರ ರಕ್ಷಿಸಬೇಕು ಎಂದು ಟ್ವಿಟರ್ ನಲ್ಲಿ ರಾಹುಲ್ ಗಾಂಧಿ ಬರೆದಿದ್ದಾರೆ.
 

ಭಾರತ ಸರ್ಕಾರವೇಕೆ ಯಥಾಸ್ಥಿತಿ ಕಾಯ್ದುಕೊಳ್ಳುವುದಕ್ಕೆ ಒತ್ತಾಯಿಸುತ್ತಿಲ್ಲ? ಚೀನಾ ಏಕೆ ನಮ್ಮ ಪ್ರದೇಶದಲ್ಲಿ 20 ಯೋಧರ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿದೆ? ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ನಡೆದ ಮಾತುಕತೆಯ ಸಾರಾಂಶವನ್ನು ಪ್ರಕಟಿಸಿರುವ ಚೀನಾದ ವಿದೇಶಾಂಗ ಇಲಾಖೆ ಹೇಳಿಕೆಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ ಕೇಳಿದ್ದಾರೆ?

ಚೀನಾದ ವಿದೇಶಾಂಗ ಇಲಾಖೆ ಗಲ್ವಾನ್ ಕಣಿವೆಯ ಬಗ್ಗೆ ಉಲ್ಲೇಖಿಸುತ್ತದೆ. ಆದರೆ ಭಾರತದ ವಿದೇಶಾಂಗ ಇಲಾಖೆ ಗಲ್ವಾನ್ ಕುರಿತು ಉಲ್ಲೇಖವನ್ನೇ ಮಾಡುವುದಿಲ್ಲ ಎಂಬುದನ್ನು ರಾಹುಲ್ ಗಾಂಧಿ ಪ್ರಮುಖವಾಗಿ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com