ತಿಂಗಳಾಂತ್ಯದವರೆಗೆ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ ಶೇ.70 ರಷ್ಟು ಬಂದಿದ್ದು 5 ರಾಜ್ಯಗಳಿಂದ!

ಲಾಕ್ ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿ ಅನ್ ಲಾಕ್ 1.0 ಘೋಷಣೆ ಮಾಡಿದ ಬಳಿಕ ಜೂನ್ ತಿಂಗಳಾಂತ್ಯದವರೆಗೆ ಪತ್ತೆಯಾದ ಒಟ್ಟಾರೆ ಕೋವಿಡ್-19 ಪ್ರಕರಣಗಳ ಪೈಕಿ 5 ರಾಜ್ಯಗಳದ್ದು ಸಿಂಹಪಾಲು ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ತಿಂಗಳಾಂತ್ಯದವರೆಗೆ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ ಶೇ.70 ರಷ್ಟು ಬಂದಿದ್ದು 5 ರಾಜ್ಯಗಳಿಂದ!
ತಿಂಗಳಾಂತ್ಯದವರೆಗೆ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ ಶೇ.70 ರಷ್ಟು ಬಂದಿದ್ದು 5 ರಾಜ್ಯಗಳಿಂದ!

ನವದೆಹಲಿ: ಲಾಕ್ ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿ ಅನ್ ಲಾಕ್ 1.0 ಘೋಷಣೆ ಮಾಡಿದ ಬಳಿಕ ಜೂನ್ ತಿಂಗಳಾಂತ್ಯದವರೆಗೆ ಪತ್ತೆಯಾದ ಒಟ್ಟಾರೆ ಕೋವಿಡ್-19 ಪ್ರಕರಣಗಳ ಪೈಕಿ 5 ರಾಜ್ಯಗಳದ್ದು ಸಿಂಹಪಾಲು ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಡಾಟಾ ವಿಶ್ಲೇಷಣೆಯ ಪ್ರಕಾರವಾಗಿ ಅನ್ ಲಾಕ್ 1.0 ಘೋಷಣೆಯಾದ ಬಳಿಕ ಜೂನ್ ತಿಂಗಳ 1 ರಂದು ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ದೇಶದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.63 ರಷ್ಟು ಸಕ್ರಿಯ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದವು. ಅನ್ ಲಾಕ್-1 ರ ಅಂತ್ಯದ ವೇಳೆಗೆ ಈ ಪ್ರಮಾಣ ಶೇ.70ಕ್ಕೆ ಏರಿಕೆಯಾಗಿತ್ತು. ಜೂನ್ ತಿಂಗಳ ಅವಧಿಯಲ್ಲಿ ಈ 5 ರಾಜ್ಯಗಳಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚಾಗಿದೆ.

ಕಳೆದ ತಿಂಗಳು ತೆಲಂಗಾಣ- ಆಂಧ್ರಪ್ರದೇಶಗಳಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳು 7 ಪಟ್ಟು ಹೆಚ್ಚಾಗಿದ್ದರೆ, ತಮಿಳುನಾಡಿನಲ್ಲಿ 4 ಪಟ್ಟು ಹೆಚ್ಚಾಗಿದೆ. ಮತ್ತೊಂದು ಮಾದರಿಯ ಅಂಕಿ-ಅಂಶಗಳ ಪ್ರಕಾರ ತಿಂಗಳ ಎರಡನೇ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ದೆಹಲಿ ಹಾಗೂ ಆಂಧ್ರಪ್ರದೇಶಗಳಲ್ಲಿ ಸೋಂಕು ಪರೀಕ್ಷೆ ಹೆಚ್ಚು ಮಾಡಿಸಿದ್ದರಿಂದ ಹೆಚ್ಚಿನ ಪ್ರಕರಣಗಳು ವರದಿಯಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಜೂ.08 ರ ಅನ್-ಲಾಕ್ 1.0 ರ ನಂತರ ಅಲ್ಲಿ ದೇವಾಲಯಗಳು, ಶಾಪಿಂಗ್ ಮಾಲ್ ಗಳು, ರೆಸ್ಟೋರೆಂಟ್ ಗಳು, ಹೊಟೆಲ್ ಗಳನ್ನು ಪುನಃ ಪ್ರಾರಂಭಿಸಿದರ ನಂತರ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com