ಸಚಿವರಿಗೆ ಕೊವಿಡ್‍-19 ಸೋಂಕು: ಜಾರ್ಖಂಡ್‍ ಮುಖ್ಯಮಂತ್ರಿಗೆ ಹೋಮ್‍ ಕ್ವಾರಂಟೈನ್‍

ಸಂಪುಟದ ಸಹೋದ್ಯೋಗಿ ಸಚಿವರಿಗೆ ಕೊರೋನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ರನ್ನು ಹೋಮ್‍ ಕ್ವಾರಂಟೈನ್‍ ಮಾಡಲಾಗಿದೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್

ರಾಂಚಿ: ಸಂಪುಟದ ಸಹೋದ್ಯೋಗಿ ಸಚಿವರಿಗೆ ಕೊರೋನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ರನ್ನು ಹೋಮ್‍ ಕ್ವಾರಂಟೈನ್‍ ಮಾಡಲಾಗಿದೆ.

ಹೌದು.. ತಮ್ಮ ಸಂಪುಟ ಸಹೋದ್ಯೋಗಿ ಸಚಿವ ಮಿಥಿಲೇಶ್ ಠಾಕೂರ್ ಅವರಿಗೆ ಕೊರೊನಾವೈರಸ್‌ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬುಧವಾರ ಹೋಮ್‍ ಕ್ಯಾರೆಂಟೈನ್‌ (ಗೃಹ ಸಂಪರ್ಕತಡೆ)ನಲ್ಲಿರಲು ನಿರ್ಧರಿಸಿದ್ದಾರೆ.

ಅಲ್ಲದೆ, ಹೋಮ್‍ ಕ್ವಾರಂಟೈನ್‍ನಲ್ಲಿ ಇರುವಂತೆ ತಮ್ಮ ಕಚೇರಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅವರು ಕೋರಿದ್ದಾರೆ. ಅಂತೆಯೇ ರಾಂಚಿಯ ಕಾಂಕೆ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

ಪ್ರಸ್ತುತ ಹೇಮಂತ್ ಸೊರೇನ್ ರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲಾಗಿದ್ದು, ಇಂದು ಸಂಜೆ ವೇಳೆ ಅದರ ವರದಿ ಬರುವ ಸಾಧ್ಯತೆ ಇದೆ. 

ಇನ್ನು ಜಾರ್ಖಂಡ್ ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3 ಸಾವಿರ ಗಡಿ ದಾಟಿದ್ದು, ಈ ಪೈಕಿ 2100ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಾರ್ಖಂಡ್ ನಲ್ಲಿ 892 ಸಕ್ರಿಯ ಪ್ರಕರಣಗಳಿದ್ದು, ಈ ವರೆಗೂ 22 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com