ರಾಷ್ಟ್ರೀಯತೆ, ಪೌರತ್ವ, ನೋಟು ನಿಷೇಧದ ಪಾಠಗಳನ್ನು ಪಠ್ಯಕ್ರಮದಿಂದ ಕೈಬಿಟ್ಟ ಸಿಬಿಎಸ್ಇ
ಮುಂದಿನ ವರ್ಷ ಸಿಬಿಎಸ್ಇ ಬೋರ್ಡ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಜಾತ್ಯತೀತತೆ, ಪೌರತ್ವ, ರಾಷ್ಟ್ರೀಯತೆ, ನೋಟು ನಿಷೇಧ, ಪ್ರಜಾಪ್ರಭುತ್ವದ ಹಕ್ಕುಗಳ ಬಗ್ಗೆ ಪರೀಕ್ಷೆಗಾಗಿ ಓದಬೇಕಿಲ್ಲ.
Published: 08th July 2020 03:42 PM | Last Updated: 08th July 2020 03:42 PM | A+A A-

ರಾಷ್ಟ್ರೀಯತೆ, ಪೌರತ್ವ, ನೋಟು ನಿಷೇಧದ ಪಾಠಗಳನ್ನು ಪಠ್ಯಕ್ರಮದಿಂದ ಕೈಬಿಟ್ಟ ಸಿಬಿಎಸ್ಇ
ನವದೆಹಲಿ: ಮುಂದಿನ ವರ್ಷ ಸಿಬಿಎಸ್ಇ ಬೋರ್ಡ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಜಾತ್ಯತೀತತೆ, ಪೌರತ್ವ, ರಾಷ್ಟ್ರೀಯತೆ, ನೋಟು ನಿಷೇಧ, ಪ್ರಜಾಪ್ರಭುತ್ವದ ಹಕ್ಕುಗಳ ಬಗ್ಗೆ ಪರೀಕ್ಷೆಗಾಗಿ ಓದಬೇಕಿಲ್ಲ.
ಹೌದು, ಕೊರೋನಾದ ಹಿನ್ನೆಲೆ ಪಠ್ಯ ಕ್ರಮಗಳನ್ನು ಕಡಿತಗೊಳಿಸುತ್ತಿರುವುದರಿಂದ ಈ ಎಲ್ಲಾ ಅಂಶಗಳ ಬಗ್ಗೆ ವಿವರಣೆ ನೀಡುವ ಪಾಠಗಳನ್ನು ಪಠ್ಯಕ್ರಮದಿಂದ ಹೊರಗಿಡಲು ಸಿಬಿಎಸ್ಇ ನಿರ್ಧರಿಸಿದ್ದು ವಿದ್ಯಾರ್ಥಿಗಳು ಇದರ ಕುರಿತು ಪರೀಕ್ಷೆಗಳಿಗಾಗಿ ತಯಾರಿ ನಡೆಸಬೇಕಿಲ್ಲ ಎಂದು ಅಧಿಸೂಚನೆ ಹೊರಡಿಸಲಾಗಿದೆ.
2020-21 ರ ಶೈಕ್ಷಣಿಕ ವರ್ಷಕ್ಕೆ 9-12 ತರಗತಿಗಳಿಗೆ ಸಿಬಿಎಸ್ ಇ ಜು.8 ರಂದು ಹೊಸ ಪಠ್ಯಕ್ರಮವನ್ನು ಘೋಷಿಸಿದ್ದು, ಶೇ.30 ರಷ್ಟು ಪಠ್ಯವನ್ನು ಕಡಿತಗೊಳಿಸಿದೆ.
10 ನೇ ತರಗತಿಯಲ್ಲಿ ಪ್ರಜಾಪ್ರಭುತ್ವ, ವೈವಿಧ್ಯತೆ, ಲಿಂಗ, ಧರ್ಮ, ಜಾತಿ ಹಾಗೂ ಖ್ಯಾತ ಹೋರಾಟ, ಚಳುವಳಿ, ಪ್ರಜಾಪ್ರಭುತ್ವದ ಸವಾಲುಗಳಿಗೆ ಸಂಬಂಧಪಟ್ಟ ಪಠ್ಯಗಳನ್ನು ಕೈಬಿಡಲಾಗಿದೆ. 11 ನೇ ತರಗತಿಯಿಂದ ಪೌರತ್ವ, ರಾಷ್ಟ್ರೀಯತೆ, ಜಾತ್ಯಾತೀತತೆ, ಫೆಡರಲಿಸಮ್, ಭಾರತದಲ್ಲಿ ಸ್ಥಳೀಯ ಸರ್ಕಾರಗಳ ಬೆಳವಣಿಗೆಯ ಅಂಶಗಳನ್ನು ಪಠ್ಯದಿಂದ ಕೈಬಿಡಲಾಗಿದೆ.