ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣ: ಎಲ್ ಜಿ ಪಾಲಿಮರ್ಸ್ ಎಂಡಿ ಸೇರಿ 11 ಮಂದಿಯ ಬಂಧನ!

12 ಮಂದಿಯ ಸಾವಿಗೆ ಕಾರಣವಾಗಿದ್ದ ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣದಲ್ಲಿ ಎಲ್ ಜಿ ಪಾಲಮರ್ಸ್ ನ ಎಂ.ಡಿ, ಸಿಇಒ ಸೇರಿದಂತೆ ಒಟ್ಟು 12 ಮಂದಿಯನ್ನು ಜು.06 ರಂದು ರಾತ್ರಿ ಬಂಧಿಸಲಾಗಿದೆ.
ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣ: ಎಲ್ ಜಿ ಪಾಲಿಮರ್ಸ್ ಎಂ.ಡಿ ಸೇರಿ 11 ಮಂದಿಯ ಬಂಧನ!
ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣ: ಎಲ್ ಜಿ ಪಾಲಿಮರ್ಸ್ ಎಂ.ಡಿ ಸೇರಿ 11 ಮಂದಿಯ ಬಂಧನ!

ವಿಶಾಖಪಟ್ಟಣಂ: 12 ಮಂದಿಯ ಸಾವಿಗೆ ಕಾರಣವಾಗಿದ್ದ ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣದಲ್ಲಿ ಎಲ್ ಜಿ ಪಾಲಮರ್ಸ್ ನ ಎಂ.ಡಿ, ಸಿಇಒ ಸೇರಿದಂತೆ ಒಟ್ಟು 12 ಮಂದಿಯನ್ನು ಜು.06 ರಂದು ರಾತ್ರಿ ಬಂಧಿಸಲಾಗಿದೆ.

ವಿಷಕಾರಿ ಅನಿಲಕ್ಕೆ ಸಂಬಂಧಪಟ್ಟ ಅಂಶಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಕರ್ತವ್ಯ ಲೋಪ ಎಸಗಿದ್ದ ಆರೋಪದ ಅಡಿಯಲ್ಲಿ 12 ಮಂದಿಯನ್ನು ಬಂಧಿಸಲಾಗಿದ್ದು,  ಆಂಧ್ರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಫ್ಯಾಕ್ಟರಿ ಇಲಾಖೆಗಳ ಅಧಿಕಾರಗಳನ್ನೂ ಬಂಧಿಸಲಾಗಿದೆ. ಎಲ್ ಜಿ ಪಾಲಿಮರ್ಸ್ ನ ತಾಂತ್ರಿಕ ನಿರ್ದೇಶಕ ಡಿಎಸ್ ಕಿಮ್, ಪಿಟ್ಚುಕ ಪೂರ್ಣ ಚಂದ್ರ ಮೋಹನ್ ರಾವ್, ಸಂಸ್ಥೆಯ ಹೆಚ್ಚುವರಿ ನಿರ್ದೇಶಕರನ್ನೂ ಬಂಧಿಸಲಾಗಿದೆ.

ತಮ್ಮ ನಡೆ ಇತರರ ಜೀವಕ್ಕೇ ಹಾನಿಯಾಗಬಹುದೆಂದು ಗೊತ್ತಿದ್ದರೂ ಸಹ ಈ ಎಲ್ಲಾ ಆರೋಪಿಗಳ ಬೇಜವಾಬ್ದಾರಿತನದಿಂದ ಎಂ 6 ಸ್ಟೈರೀನ್ ಶೇಖರಣಾ ಟ್ಯಾಂಕ್ ನಲ್ಲಿ ಈ ಅವಗಢ ಸಂಭವಿಸಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ಆರ್ ಕೆ ಮೀನಾ ಹೇಳಿದ್ದಾರೆ. ಸಮರ್ಪಕ ಕೂಲಿಂಗ್ ವ್ಯವಸ್ಥೆ ಇಲ್ಲದ, ಸರ್ಕ್ಯುಲೇಷನ್ ಸಿಸ್ಟಮ್ ರಹಿತ, ಅಸಮರ್ಪಕ ಅಳತೆ ನಿಯತಾಂಕಗಳು, ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಹೊಂದಿಲ್ಲದ M6 tankನ್ನು  ಕಳಪೆಯಾಗಿರಿಸಿದ್ದೇ ಈ ಅವಗಢಕ್ಕೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.

ಹೆಚ್ಒಡಿ, ಎಸ್ಎಂಹೆಚ್ ಇನ್ ಚಾರ್ಜ್ ಶ್ರೀನಿವಾಸ್ ಕಿರಣ್ ಕುಮಾರ್,  ಟೀಮ್ ಲೀಡರ್ (ಪ್ರೊಡಕ್ಷನ್)  ರಾಜು ಸತ್ಯನಾರಾಣ, ಇಂಜಿನಿಯರ್ ಗಳಾದ ಚೆಡುಂಪುಪತಿ ಚಂದ್ರಶೇಖರ್, ಕೆ ಚಕ್ರಪಾಣಿ, ಕೆ ಗೌರಿ ಶಂಕರ, ನಾಗೇಂದ್ರ ರಾಮು, ಆಪರೇಟರ್ ಮುದ್ದು ರಾಜೇಶ್, ಪಿ.ಬಾಲಾಜಿ, ನೈಟ್ ಡ್ಯೂಟಿ ಆಫೀಸರ್, ಆಪರೇಷನ್ಸ್, ಜಿಪಿಪಿಎಸ್ ನ ಎಸ್ ಅಚ್ಯುತ್, ನೈಟ್ ಶಿಫ್ಟ್ ನ ಸೇಫ್ಟಿ ಆಫೀಸರ್ ಕೆ ವೆಂಕಟ ನರಸಿಂಹ ರಮೇಶ್ ಪಟ್ನಾಯಕ್ ಬಂಧನಕ್ಕೊಳಗಾದ ಸಂಸ್ಥೆಯ ಇತರ ಉದ್ಯೋಗಿಗಳಾಗಿದ್ದು, ಕೋರ್ಟ್ ಎದುರು ಹಾಜರುಪಡಿಸಲಾಗುತ್ತದೆ. ಸೆಕ್ಷನ್ 278 (ವಾತಾವರಣವನ್ನು ಆರೋಗ್ಯಕ್ಕೆ ಹಾನಿಕಾರಕ ಮಾಡುವುದು) 284 (ವಿಷಕಾರಿ ಅಂಶಗಳೆಡೆಗೆ ಬೇಜವಾಬ್ದಾರಿ ನಿರ್ವಹಣೆ) 285 (ಅಗ್ನಿ ಅಥವಾ ದಹನಕಾರಿ ಅಂಶಗಳೆಡೆಗೆ ಬೇಜವಾಬ್ದಾರಿ ವರ್ತನೆ) 377 ( ಸಿಬ್ಬಂದಿಗಳ ಜೀವಕ್ಕೆ ಕುತ್ತು ತರುವುದು) ಆರೋಪಗಳ ಅಡಿಯಲ್ಲಿ ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com