ನಿರಾಸೆಯ ನಡುವೆ ಭರವಸೆಯ ಆಶಾಕಿರಣ: ಕೋವಿಡ್ ಗೆದ್ದ ದೆಹಲಿಯ ವೃದ್ದ ದಂಪತಿ

ಕೊರೋನಾವೈರಸ್ ನ ಈ ನಿರಾಶಾದಾಯಕ ಕಾಲಘಟ್ಟದಲ್ಲಿ ದೆಹಲಿಯ ವೃದ್ದ ದಂಪತಿಗಳಿಂದ ಒಂದು ಆಶಾದಾಯಕ ಭರವಸೆ ಮೂಡಿದೆ. ದೆಹಲಿಯ ಆಕ್ಟೋಜೆನೇರಿಯನ್ ಮಹಿಳೆ ಮತ್ತು ಆಕೆಯ 90 ವರ್ಷದ ಅಲ್ಜೀಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ಪತಿ ಕೊರೋನಾದಿಂದ  ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ನಿರಾಸೆಯ ನಡುವೆ ಭರವಸೆಯ ಆಶಾಕಿರಣ: ಕೋವಿಡ್ ಗೆದ್ದ ದೆಹಲಿಯ ವೃದ್ದ ದಂಪತಿ

ನವದೆಹಲಿ:  ಕೊರೋನಾವೈರಸ್ ನ ಈ ನಿರಾಶಾದಾಯಕ ಕಾಲಘಟ್ಟದಲ್ಲಿ ದೆಹಲಿಯ ವೃದ್ದ ದಂಪತಿಗಳಿಂದ ಒಂದು ಆಶಾದಾಯಕ ಭರವಸೆ ಮೂಡಿದೆ. ದೆಹಲಿಯ ಆಕ್ಟೋಜೆನೇರಿಯನ್ ಮಹಿಳೆ ಮತ್ತು ಆಕೆಯ 90 ವರ್ಷದ ಅಲ್ಜೀಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ಪತಿ ಕೊರೋನಾದಿಂದ  ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ವೃದ್ದ ದಂಪತಿಗಳಿಗೆ ಚಿಕಿತ್ಸೆ ನೀಡಿದ ನಗರ ಆಸ್ಪತ್ರೆಯ ವೈದ್ಯರು, ಸೋಂಕಿನಿಂದಾಗಿ ಹೆಚ್ಚಿನ ಸಂಖ್ಯೆಯ ವೃದ್ದರು ಸಾವನ್ನಪ್ಪುತ್ತಿರುವ ಸಂದರ್ಭದಲ್ಲಿ ಈ ದಂಪತಿಗಳು ಕೋವಿಡ್ 19 ನಿಂದ ಚೇತರಿಸಿಕೊಳ್ಳುವುದು ಇತರ ರೋಗಿಗಳಿಗೆ ಭರವಸೆಯ ಕಿರಣವಾಗಿದೆ ಎಂದು ಹೇಳಿದರು.

ಮೇ 25 ರಂದು, 87 ವರ್ಷದ ಮಹಿಳೆ ಸೊಂಟ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ತಕ್ಷಣ  ಅವರಿಗೆ ಬದಲಿ ಸೊಂಟ (ಹಿಪ್ ರಿಪ್ಲೆಸ್ ಮೆಂಟ್) ಶಸ್ತ್ರಚಿಕಿತ್ಸೆಗೆ ಸೂಚಿಸಲಾಯಿತು. ಶಸ್ತ್ರಚಿಕಿತ್ಸೆಗೆ ಮುನ್ನ, ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿ ವರದಿ ಪಾಸಿಟಿವ್ ಆಗಿತ್ತು, . ಇದನ್ನು ಅನುಸರಿಸಿ, ಅವರ ಕುಟುಂಬವೂ ಪರೀಕ್ಷೆಗಳಿಗೆ ಒಳಗಾಯಿತು ಮತ್ತು ಅವರ ಪತಿಗೆ ವೈರಲ್ ಕಾಯಿಲೆ ಇದೆ ಎಂದು ಕಂಡುಬಂದಿದೆ. ಈ ದಂಪತಿಯನ್ನು ಆರಂಭದಲ್ಲಿ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಲಾಯಿತು, ಅವರ ಉಸಿರಾಟದ, ವಿಮರ್ಶಾತ್ಮಕ ಆರೈಕೆಯನ್ನು ಹಿರಿಯ ಸಲಹೆಗಾರ ಡಾ. ನಿಖಿಲ್ ಮೋದಿ ಅವರ ಮೇಲ್ವಿಚಾರಣೆಯಲ್ಲಿ.ನಡೆಸಲಾಗಿದೆ.  ಜೀವಕೋಶಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಯಿತು, ಅಗತ್ಯವಾದ ಚಿಕಿತ್ಸೆಯನ್ನು ಒದಗಿಸಲಾಯಿತು ಮತ್ತು ಮೊದಲ 10 ದಿನಗಳಲ್ಲಿ ಅವರು ಗಮನಾರ್ಹ ಸುಧಾರಣೆಯನ್ನು  ಕಂಡರು.

ಮಹಿಳೆ ಕೊರೋನಾಗೆ ನೆಗೆಟಿವ್ ವರದಿ ಪಡೆದ ನಂತರ  ಹಿರಿಯ ಸಲಹೆಗಾರ ಮತ್ತು ಮೂಳೆ ಶಸ್ತ್ರಚಿಕಿತ್ಸಕ ಡಾ.ಯತಿಂದರ್ ಖರ್ಬಂದಾ ಒಟ್ಟು ಹಿಪ್ ರುಪ್ಲೆಸ್ ಮೆಂಟ್  ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದರು. "ವೃದ್ದಾಪ್ಯದಲ್ಲಿ  ಮತ್ತು ಮಲ್ಟಿಕೊಮೊರ್ಬಿಡಿಟಿಗಳನ್ನು ಹೊಂದಿರುವ ಜನರು ಕೋವಿಡ್  ನ ಗರಿಷ್ಠ ಅಪಾಯಕ್ಕೆ ಒಳಗಾಗುತ್ತಾರೆ. ಅವರ ರೋಗ ನಿರೋಧಕ ಶಕ್ತಿ ಕುಸಿಯುತ್ತದೆ ಮತ್ತು ಅವರು ಸಾಂಕ್ರಾಮಿಕ ಕಾಯಿಲೆಗಳಿಗೆ ಹೆಚ್ಚು ಗುರಿಯಾಗುತ್ತಾರೆ" ಎಂದು ಅವರು ಹೇಳಿದರು. ಅಲ್ಲದೆ, ಮೊದಲೇ ಅಸ್ತಿತ್ವದಲ್ಲಿರುವ ಹೃದ್ರೋಗ, ಜೆರಿಯಾಟ್ರಿಕ್ ಸಿಂಡ್ರೋಮ್) ಶ್ವಾಸಕೋಶದ ಕಾಯಿಲೆಗಳು, ಮಧುಮೇಹ ಅಥವಾ ಮೂತ್ರಪಿಂಡದ ಕಾಯಿಲೆಗಳಿಂದಾಗಿ ಸಾಂಕ್ರಾಮಿಕ ಕಾಯಿಲೆಗಳ ವಿರುದ್ಧ ಹೋರಾಡುವ ಅವರ ದೇಹದ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ.

"ಈ ಸಂದರ್ಭದಲ್ಲಿ, ವಯಸ್ಸಾದ ಮಹಿಳೆ ಸೊಂಟ ಮುರಿತದಿಂದಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಳು. ಭಾರೀ ಕೆಮ್ಮು ಮತ್ತು ಗಂಟಲು ನೋವು ಇದ್ದ ಕಾರಣ ನಾವು ಅವರಿಗೆ ವಿಶೇಷ ಗಮನ ಕೊಟ್ಟಿದ್ದೆವು, ದ್ಯರು ಮತ್ತು ದಾದಿಯರ ತಂಡವು ವೈದ್ಯಕೀಯ ಆರೈಕೆ ನೀಡಲು ಶ್ರಮಿಸಿದೆ" ಎಂದು ಡಾ ಮೋದಿ ಹೇಳಿದರು. ಯಾವುದೇ ತೊಡಕುಗಳು ಎದುರಾಗದಂತೆ ಸದಾಕಾಲ ನಿರ್ಣಾಯಕ ಆರೈಕೆ ಘಟಕದಲ್ಲಿನ ತಂಡವನ್ನು ಎಚ್ಚರದಲ್ಲಿ ಇರಿಸಲಾಗಿತ್ತು. 

"ಅದೇ ಸಮಯದಲ್ಲಿ ಆಕೆಯ ಪತಿಗೆ ಸಹ ರೋಗಕಕ್ಷಣವಿತ್ತು, ಆದರೆ ಅವರ ವಯಸ್ಸು ಹಾಗೂ ರೋಗಲಕ್ಷಣದಿಂದ ಆತನ ಪ್ರತಿ ನಿಮಿಷದ ಗಮನಿಸುವಿಕೆ ನಮಗೆ ಮುಖ್ಯವಾಗಿತ್ತು. "

ಆದರೆ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತು ಗುಣಮುಖರಾದ ದಂಪತಿಯನ್ನು ಜೂನ್ 22 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com