ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19ನಿಂದ ಅಸುನೀಗಿದ ರೋಗಿಗಳ ಮೃತದೇಹ ಅದಲು ಬದಲು!

ಕೋವಿಡ್-19 ಸಂಕಷ್ಟದ ನಡುವೆಯೂ ಬೇಜವಾಬ್ದಾರಿ, ನಿರ್ಲಕ್ಷ್ಯತನ, ಭ್ರಷ್ಟಾಚಾರ ಯಾವ ರೀತಿ ತಾಂಡವವಾಡುತ್ತಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಿದು. ಕೋವಿಡ್-19 ರೋಗದಿಂದ ಮೃತಪಟ್ಟ ಎರಡು ಮೃತದೇಹಗಳನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸುವ ಸಂದರ್ಭದಲ್ಲಿ ಅದಲು ಬದಲು ಮಾಡಿದ ಘಟನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ಸಂಕಷ್ಟದ ನಡುವೆಯೂ ಬೇಜವಾಬ್ದಾರಿ, ನಿರ್ಲಕ್ಷ್ಯತನ, ಭ್ರಷ್ಟಾಚಾರ ಯಾವ ರೀತಿ ತಾಂಡವವಾಡುತ್ತಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಿದು. ಕೋವಿಡ್-19 ರೋಗದಿಂದ ಮೃತಪಟ್ಟ ಎರಡು ಮೃತದೇಹಗಳನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸುವ ಸಂದರ್ಭದಲ್ಲಿ ಅದಲು ಬದಲು ಮಾಡಿದ ಘಟನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಮುಸ್ಲಿಂ ಕುಟುಂಬಕ್ಕೆ ಹಿಂದೂ ಮಹಿಳೆಯ ಮೃತದೇಹವನ್ನು ಕೊಟ್ಟ ನಂತರ ಕುಟುಂಬದವರಿಗೆ ದಹನ ಮಾಡುವಾಗಲೇ ಪ್ರಮಾದ ಗೊತ್ತಾಗಿದ್ದು. ಹಿಂದೂ ಕುಟುಂಬಕ್ಕೆ ಸಂಪರ್ಕಿಸಿ ಕೇಳುವಾಗ ಅವರು ಅದಾಗಲೇ ತಮಗೆ ಸಿಕ್ಕಿದ ಮೃತದೇಹವನ್ನು ದಹನ ಮಾಡಿಯಾಗಿತ್ತು.

ನಡೆದ ಘಟನೆಯೇನು?: ಶರೀಪ್ ಖಾನ್ ಅವರ 35 ವರ್ಷದ ಸೋದರಿ ಕಳೆದ ಜುಲೈ 4ರಂದು ಕೋವಿಡ್-19ಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು,  ಈ ಬಗ್ಗೆ ವಿವರಿಸಿದ ಶರೀಪ್ ಖಾನ್, ಮರುದಿನ ನಮ್ಮ ಸೋದರಿಗೆ ಮೂರು ಜನರ ರಕ್ತ ಅಗತ್ಯವಿದೆ ಎಂದು ಕರೆ ಮಾಡಿ ಆಸ್ಪತ್ರೆಗೆ ಬರಲು ಹೇಳಿದರು. ರಕ್ತ ಯಾಕೆ ಬೇಕು ಎಂದು ಅರ್ಥವಾಗಲಿಲ್ಲ, ಈ ಸಂದರ್ಭದಲ್ಲಿ ಪ್ರಶ್ನೆ ಮಾಡುವುದು ಬೇಡವೆಂದು ನೇರವಾಗಿ ಆಸ್ಪತ್ರೆಗೆ ಹೋದವು. ಅಲ್ಲಿಗೆ ಹೋಗಿ ಸ್ವಲ್ಪ ಹೊತ್ತಾದ ಬಳಿಕ ನಿಮ್ಮ ಸೋದರಿಯ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದರು. ನಂತರ ಜುಲೈ 6ರಂದು ಮತ್ತೆ ಕರೆಬಂದು ಮತ್ತಷ್ಟು ಆರೋಗ್ಯ ಹದಗೆಟ್ಟಿದೆ ಬನ್ನಿ ಎಂದರು. ಮರುದಿನ ಮಧ್ಯರಾತ್ರಿ 2 ಗಂಟೆಗೆ ಸೋದರಿ ತೀರಿಹೋಗಿದ್ದಾಳೆ ಎಂದು ತಿಳಿಸಿದರು.

ಮರುದಿನ ಬೆಳಗ್ಗೆ ಮೃತದೇಹವನ್ನು ಪಡೆಯಲೆಂದು ನಾವು ಹೋದಾಗ ನಮಗೆ ನಾಲ್ಕು ಕಿಟ್ ಕೊಟ್ಟು ಐಟಿಒ ದಹನ ಮೈದಾನದಲ್ಲಿ ಮೃತದೇಹಕ್ಕೆ ಕಾಯುತ್ತಿರಿ ಎಂದರು. ನನ್ನ ಸೋದರಿಯ ಮುಖ ಒಮ್ಮೆ ತೋರಿಸಿ ಎಂದು ಕೇಳಿದಾಗ ಅಲ್ಲಿನ ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಆಗುವುದಿಲ್ಲವೆಂದು  ನಿರಾಕರಿಸಿದರು. 500 ರೂಪಾಯಿ ಕೊಟ್ಟರೆ ನಿಮ್ಮ ಸೋದರಿಯ ಮುಖ ತೋರಿಸುತ್ತೇವೆ ಎಂದು ಮತ್ತೊಬ್ಬ ಸಿಬ್ಬಂದಿ ಹೇಳಿದರು. ನಾನು ಒಪ್ಪಿದೆ, ಆದರೆ ಇಲ್ಲಲ್ಲ, ದಹನ ಸ್ಥಳದಲ್ಲಿ ತೋರಿಸುವುದು ಎಂದರು. ದಹನ ಮೈದಾನಕ್ಕೆ ಹೋಗಿ ನೋಡಿದಾದ ಅದು ನಮ್ಮ ಸೋದರಿಯ ಮುಖವಾಗಿರಲಿಲ್ಲ.

ನಮಗೆ ಆಘಾತವಾಯಿತು. ಆರಂಭದಲ್ಲಿ ಇಲ್ಲ, ನಿಮಗೆ ನಿಮ್ಮ ಸೋದರಿಯ ಮುಖ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಜಗಳವಾಡಿದರು, ನಂತರ ಒಪ್ಪಿ ಮತ್ತೆ ಆಸ್ಪತ್ರೆಗೆ ಹೋಗಿ ನಮ್ಮ ಸೋದರಿಯ ಮೃತದೇಹ ತರಲು ಹೋದವರು ನಾಲ್ಕು ಗಂಟೆಯಾದರೂ ಬರಲಿಲ್ಲ. ಏನೋ ಎಡವಟ್ಟಾಗಿದೆ ಎಂದು ಗೊತ್ತಾಯಿತು. ನಾವು ಏಮ್ಸ್ ಆಸ್ಪತ್ರೆಗೆ ಹೋದೆವು. ಅಲ್ಲಿ ಹಿಂದೂ ಮಹಿಳೆಯ ಮೃತದೇಹದ ಜೊತೆಗೆ ನಮ್ಮ ಸೋದರಿಯ ಮೃತದೇಹ ಅದಲು ಬದಲಾಗಿತ್ತು. ಹಿಂದೂ ಕುಟುಂಬದವರಿಗೆ ಇದು ಗೊತ್ತಾಗದೇ ನಮ್ಮ ಸೋದರಿಯ ಶವವನ್ನು ಅದಾಗಲೇ ದಹಿಸಿದ್ದರು. ಹಿಂದೂ ಕುಟುಂಬದವರಿಗೆ ಈ ಬಗ್ಗೆ ಹೇಳಿದಾಗ ಅವರಿಂದ ಹೆಚ್ಚಿನ ಸಹಕಾರ ಸಿಗಲಿಲ್ಲ. ಆಸ್ಪತ್ರೆ ಸಿಬ್ಬಂದಿ ಕೂಡ ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಸಫ್ದರ್ ಜಂಗ್ ಪೊಲೀಸ್ ಠಾಣೆಗೆ ದೂರು ನೀಡೋಣವೆಂದು ಹೋದರೆ ಅಲ್ಲಿ ಎಫ್ ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದರು. ಪರಸ್ಪರ ಬಗೆಹರಿಸಿಕೊಳ್ಳಿ ಎಂದು ಹೇಳಿದರು. ನನಗಂತೂ ತೀರ ಬೇಸರವಾಯಿತು ಎಂದು ಶರೀಪ್ ಹೇಳುತ್ತಾರೆ.

ಘಟನೆ ಸಂಬಂಧ ಲ್ಯಾಬ್ ಟೆಕ್ನಿಷಿಯನ್ ಮತ್ತು ಪ್ರಾಜೆಕ್ಟ್ ಉದ್ಯೋಗಿಯನ್ನು ಸೇವೆಯಿಂದ ವಜಾ ಮಾಡಲಾಗಿದ್ದು ಎಫ್ಐಆರ್ ದಾಖಲಾಗಿಲ್ಲ. ಪ್ರಕರಣ ಬಗ್ಗೆ ಸಮಿತಿ ರಚಿಸಿ ಅದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅಂಗರಚನಾ ಶಾಸ್ತ್ರ ವಿಭಾಗದ ಡಾ ಟಿಎಸ್ ರಾಯ್ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಗೆ ಈ ಪ್ರಕರಣ ಒಳಪಡುವುದರಿಂದ ಮೃತರ ಕುಟುಂಬಸ್ಥರು ದೂರು ನೀಡದೆ ನಾವು ಎಫ್ಐಆರ್ ದಾಖಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com