ಕೋವಿಡ್-19 ಸಾವಿನ ಪ್ರಮಾಣ ತಗ್ಗಿಸಲು 50 ಸಾವಿರಕ್ಕೂ ಹೆಚ್ಚು ವೈದ್ಯರು, 2 ಲಕ್ಷದಷ್ಟು ದಾದಿಯರ ಅವಶ್ಯಕತೆಯಿದೆ: ಡಾ. ದೇವಿ ಶೆಟ್ಟಿ

ಸಮಯಕ್ಕೆ ಸರಿಯಾಗಿ ಲಾಕ್ ಡೌನ್ ಘೋಷಣೆ ಮಾಡಿ ಜಾರಿಗೆ ತಂದಿದ್ದರಿಂದ ಕೋವಿಡ್-19 ಪ್ರಕರಣಗಳನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಿದ್ಧತೆ ಮಾಡಿಕೊಳ್ಳಲು ಸಹಾಯವಾದರೂ ಕೂಡ ಆರೋಗ್ಯ ವಲಯದಲ್ಲಿ ಸಾಕಷ್ಟು ಕಾರ್ಯಪಡೆಯನ್ನು ಹೊಂದಿರುವುದು ಮುಖ್ಯ ಎನ್ನುತ್ತಾರೆ ಬೆಂಗಳೂರಿನ ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ ದೇವಿ ಶೆಟ್ಟಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಮಯಕ್ಕೆ ಸರಿಯಾಗಿ ಲಾಕ್ ಡೌನ್ ಘೋಷಣೆ ಮಾಡಿ ಜಾರಿಗೆ ತಂದಿದ್ದರಿಂದ ಕೋವಿಡ್-19 ಪ್ರಕರಣಗಳನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಿದ್ಧತೆ ಮಾಡಿಕೊಳ್ಳಲು ಸಹಾಯವಾದರೂ ಕೂಡ ಆರೋಗ್ಯ ವಲಯದಲ್ಲಿ ಸಾಕಷ್ಟು ಕಾರ್ಯಪಡೆಯನ್ನು ಹೊಂದಿರುವುದು ಮುಖ್ಯ ಎನ್ನುತ್ತಾರೆ ಬೆಂಗಳೂರಿನ ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ ದೇವಿ ಶೆಟ್ಟಿ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಮತ್ತು ಹಿರಿಯ ಪತ್ರಕರ್ತೆ ಕಾವೇರಿ ಬಮ್ಜೈ ಜೊತೆ ನಡೆಸಿದ ವೆಬಿನಾರ್ ಲೈವ್ ಸರಣಿ ಕಾರ್ಯಕ್ರಮದಲ್ಲಿ ನಡೆಸಿದ ಚಿಟ್ ಚಾಟ್ ನ ಆಯ್ದ ಭಾಗ ಇಲ್ಲಿದೆ:

ಭಾರತದಲ್ಲಿ ಕೊರೋನಾ ಸೋಂಕಿನಿಂದ ಸಾಯುವವರ ಸಂಖ್ಯೆ ಕಡಿಮೆಯಿದ್ದರೂ ಜನರಲ್ಲಿ ಆತಂಕ, ಭಯ ಹೆಚ್ಚಾಗುತ್ತಿದೆ. ಲಾಕ್ ಡೌನ್ ಹೇಗೆ ಸಹಾಯವಾಯಿತೇ? ಲಾಕ್ ಡೌನ್ ಸಮಯವನ್ನು ನಾವು ಸದುಪಯೋಗಪಡಿಸಿಕೊಂಡಿದ್ದೇವೆಯೇ?
-ಆರಂಭದಲ್ಲಿಯೇ ಲಾಕ್ ಡೌನ್ ಘೋಷಣೆ ಮಾಡುವ ಮೂಲಕ ಭಾರತ ಸರ್ಕಾರ ಉತ್ತಮ ಕ್ರಮ ಕೈಗೊಂಡಿತು. ನಂತರ ಅದನ್ನು ವಿಸ್ತರಿಸಿದ್ದು ಇನ್ನೂ ಒಳ್ಳೆ ನಿರ್ಧಾರ. ಭಾರತಕ್ಕೆ ಕೋವಿಡ್-19 ಪ್ರವೇಶಿಸಿದಾಗ ಅದು ಹರಡುತ್ತದೆ, ಅದಕ್ಕೆ ಸಿದ್ದತೆ ಮುಖ್ಯ ಎಂಬುದು ಗೊತ್ತಿತ್ತು. ಆ ಸಮಯದಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರು,ಪಿಪಿಇ ಕಿಟ್ ಗಳನ್ನು ಸಿದ್ದಪಡಿಸುವುದು ಮುಖ್ಯವಾಗಿತ್ತು. ಆದರೆ ಆ ಸಮಯದಲ್ಲಿ ಭಾರತದಲ್ಲಿದ್ದಿದ್ದು ಮೂರೇ ಮೂರು ಸ್ಥಳೀಯ ಪಿಪಿಇ ಉತ್ಪಾದಕರು. 1.3 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಅದು ಎಲ್ಲಿಗೂ ಸಾಕಾಗುವುದಿಲ್ಲ.

ಲಾಕ್ ಡೌನ್ ನ 2 ತಿಂಗಳಲ್ಲಿ ಸರ್ಕಾರದ ಮಧ್ಯಪ್ರವೇಶ ಮೂಲಕ ನಮ್ಮಲ್ಲಿ 100 ಪಿಪಿಇ ಉತ್ಪಾದಕರಾದರು. ಸಮಯಕ್ಕೆ ಸರಿಯಾಗಿ ಲಾಕ್ ಡೌನ್ ಮಾಡದಿದ್ದಿದ್ದರೆ ಶೇಕಡಾ 50ರಷ್ಟು ಆರೋಗ್ಯ ವಲಯ ಕಾರ್ಯಕರ್ತರು ಇಂದು ಸೋಂಕಿಗೆ ತುತ್ತಾಗುತ್ತಿದ್ದರು.

ಆರೋಗ್ಯ ವಲಯ ಕಾರ್ಯಕರ್ತರಿಗೆ ತರಬೇತಿ ಕೊಟ್ಟು ಪ್ರಕರಣಗಳ ನಿರ್ವಹಣೆಗೆ ಅನುವು ಮಾಡಿಕೊಡಬೇಕು, ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಗೆ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಹೇಳುತ್ತೀರಿ, ಅದು ಆಗಿದೆಯೇ?
-ಕರ್ನಾಟಕದಲ್ಲಿ ಆರಂಭದ ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಿದ್ದಾಗ ಒಂದೆರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಹೆಚ್ಚಾಗಿದೆ. ಆರೋಗ್ಯ ವಲಯ ವೃತ್ತಿಪರರ ನಿಯಮಗಳನ್ನು ಸಡಿಲಿಸುವ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ. ಕೊರೋನಾ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂದರೆ ಇನ್ನೂ 50 ಸಾವಿರಕ್ಕೂ ಅಧಿಕ ವೈದ್ಯರ ಅಗತ್ಯವಿದ್ದು 1.5ರಿಂದ 2 ಲಕ್ಷದಷ್ಟು ನರ್ಸ್ ಗಳನ್ನು ನೇಮಕ ಮಾಡಿಕೊಳ್ಳಬೇಕು.

ನಮ್ಮಲ್ಲಿ ಸುಮಾರು 25 ಸಾವಿರ ವೈದ್ಯರು ವಿಶೇಷ ಪದವಿಗಳನ್ನು ಪಡೆಯುತ್ತಿದ್ದಾರೆ, ಅವರನ್ನು ಜಿಲ್ಲಾಸ್ಪತ್ರೆಗಳಿಗೆ ಈ ತುರ್ತು ಸಂದರ್ಭದಲ್ಲಿ ಕಳುಹಿಸಬೇಕು.

ವರ್ಷಗಳು ಕಳೆದಂತೆ ಭಾರತದ ಗಮನ ಸೋಂಕು ರೋಗಗಳಿಂದ ಜೀವನಶೈಲಿ ರೋಗಗಳತ್ತ ಬದಲಾಗುತ್ತಿದೆ. ಇದು ಕೋವಿಡ್-19 ನಿರ್ವಹಣೆ ಮೇಲೆ ಪರಿಣಾಮ ಬೀರುತ್ತಿದೆ. ವೈದ್ಯಕೀಯ ವ್ಯವಸ್ಥೆಯನ್ನು ಮರು ಸಕ್ರಿಯಗೊಳಿಸಬೇಕು, ಬದಲಾಯಿಸಬೇಕು ಎಂದು ನಿಮಗೆ ಅನಿಸುತ್ತಿದೆಯೇ?
-ಜನರ ರಕ್ಷಣೆಗೆ ಸರ್ಕಾರಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದು ಮುಖ್ಯವಾಗುತ್ತದೆ. ಉದಾಹರಣೆಗೆ ಅಭಿವೃದ್ಧಿಶೀಲ ದೇಶಗಳಲ್ಲಿ ಮಲೇರಿಯಾ, ಹೆಚ್ ಐವಿ, ಕ್ಷಯರೋಗ ಇತ್ಯಾದಿಗಳ ಮೇಲೆ ಸಾಕಷ್ಟು ಗಮನ ನೀಡುತ್ತಾರೆ. ಈ ಮೂರು ರೋಗಗಳು ಪ್ರತಿವರ್ಷ ಸುಮಾರು 30 ಲಕ್ಷ ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ಮತ್ತೊಂದೆಡೆ ಸರ್ಜರಿಗಳು ಸರಿಯಾಗದೆ ಅದಕ್ಕೆ ಸರಿಯಾದ ವೈದ್ಯಕೀಯ ಸೌಲಭ್ಯಗಳು ಸಿಗದೆ ವರ್ಷಕ್ಕೆ ಸುಮಾರು 17 ಮಿಲಿಯನ್ ಜನರು ಸಾಯುತ್ತಿದ್ದಾರೆ.

ರೋಗಗಳನ್ನು ನಿರ್ವಹಣೆ ಮಾಡುವ ಬದಲಿಗೆ ಸರ್ಜರಿಗಳಲ್ಲಿ ಆರೋಗ್ಯ ವ್ಯವಸ್ಥೆಗಳನ್ನು ಹೆಚ್ಚು ಸುಧಾರಿಸಿದರೆ ಉತ್ತಮ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗುಣಮಟ್ಟ ಹೆಚ್ಚಾಗಿ ಅವು ಉತ್ತಮ ಆರೋಗ್ಯ ವ್ಯವಸ್ಥೆ ನೀಡುವಂತಾಗಬೇಕು. ನಮ್ಮ ಆರೋಗ್ಯ ವಲಯಗಳಲ್ಲಿ ವೈದ್ಯಕೀಯ ಮೂಲ ಸೌಕರ್ಯ ಬದಲಾಗಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com