ಬಿಜೆಪಿ ಮುಖಂಡನ ಹತ್ಯೆಯಲ್ಲಿ ಭಾಗಿಯಾದ ಇಬ್ಬರು ಎಲ್‌ಇಟಿ ಉಗ್ರರ ಗುರುತು ಪತ್ತೆ: ಕಾಶ್ಮೀರ ಐಜಿಪಿ

ಉತ್ತರ ಕಾಶ್ಮೀರ ಜಿಲ್ಲೆಯ ಬಂಡಿಪೋರದಲ್ಲಿ ಬಿಜೆಪಿ ನಾಯಕ, ಆತನ ತಂದೆ ಮತ್ತು ಸಹೋದರನ ಹತ್ಯೆಯಲ್ಲಿ ಭಾಗಿಯಾದ ಪಾಕಿಸ್ತಾನ ಪ್ರಜೆ ಸೇರಿದಂತೆ ಇಬ್ಬರು ಲಷ್ಕರ್‍ ಎ ತೊಯ್ಬಾ(ಎಲ್ ಇಟಿ) ಉಗ್ರರನ್ನು ಗುರುತಿಸಲಾಗಿದೆ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ಗುರುವಾರ ತಿಳಿಸಿದ್ದಾರೆ.
ಐಜಿಪಿ ವಿಜಯ್ ಕುಮಾರ್
ಐಜಿಪಿ ವಿಜಯ್ ಕುಮಾರ್

ಶ್ರೀನಗರ: ಉತ್ತರ ಕಾಶ್ಮೀರ ಜಿಲ್ಲೆಯ ಬಂಡಿಪೋರದಲ್ಲಿ ಬಿಜೆಪಿ ನಾಯಕ, ಆತನ ತಂದೆ ಮತ್ತು ಸಹೋದರನ ಹತ್ಯೆಯಲ್ಲಿ ಭಾಗಿಯಾದ ಪಾಕಿಸ್ತಾನ ಪ್ರಜೆ ಸೇರಿದಂತೆ ಇಬ್ಬರು ಲಷ್ಕರ್‍ ಎ ತೊಯ್ಬಾ(ಎಲ್ ಇಟಿ) ಉಗ್ರರನ್ನು ಗುರುತಿಸಲಾಗಿದೆ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ಗುರುವಾರ ತಿಳಿಸಿದ್ದಾರೆ.

ಬುಧವಾರ ರಾತ್ರಿ ಉಗ್ರರು ಬಿಜೆಪಿ ನಾಯಕ ವಾಸಿಮ್ ಬ್ಯಾರಿ, ಅವರ ತಂದೆ ಬಶೀರ್ ಅಹ್ಮದ್ ಮತ್ತು ಸಹೋದರ ಉಮರ್ ಬಶೀರ್ ಅವರನ್ನು ಅವರ ಅಂಗಡಿಯಲ್ಲೇ ಹತ್ಯೆಗೈದಿದ್ದರು. ಅಂಗಡಿಯು ಮನೆಯ ಪಕ್ಕದಲ್ಲಿ ಮತ್ತು ಪೊಲೀಸ್ ಠಾಣೆಯ ಎದುರಿನಲ್ಲೇ ಇದೆ.

ಭದ್ರತಾ ಲೋಪವಿದೆ ಎಂದು ಒಪ್ಪಿಕೊಂಡ ಐಜಿಪಿ, ಬಿಜೆಪಿ ನಾಯಕ ವಾಸಿಮ್‍ ಬ್ಯಾರಿ ರಕ್ಷಣೆಗಿದ್ದ ಎಲ್ಲಾ ಹತ್ತು ಭದ್ರತಾ ಅಧಿಕಾರಿಗಳನ್ನು(ಪಿಎಸ್‌ಒ) ವಜಾಗೊಳಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಬಂಡಿಪೋರಾದಲ್ಲಿ ದಾಳಿ ನಡೆದ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ವಿಜಯ್‍ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಪೂರ್ವ ಯೋಜಿತ ದಾಳಿಯಾಗಿದ್ದು, ಭದ್ರತಾ ಸಿಬ್ಬಂದಿ ಎಚ್ಚರದಿಂದ ಇದ್ದಿದ್ದರೆ ಹತ್ಯೆಯನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ. 

‘ವಿದೇಶೀಯ ಮತ್ತು ಸ್ಥಳೀಯನೆಂದು ಗುರುತಿಸಲ್ಪಟ್ಟ ಅಬಿದ್‍ ಸೇರಿದಂತೆ ಇಬ್ಬರು ಎಲ್ಇಟಿ ಉಗ್ರರು ಈ ದಾಳಿಯನ್ನು ನಡೆಸಿದ್ದಾರೆ. ಉಗ್ರರು ಬಿಜೆಪಿ ನಾಯಕ ಮತ್ತು ಅವರ ಸಹೋದರ ಮತ್ತು ತಂದೆಗೆ ಹತ್ತಿರದಿಂದ ಗುಂಡು ಹಾರಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. 

‘ಸೇನೆಯ ಅಧಿಕಾರಿಗಳೊಂದಿಗೆ ಮತ್ತು ಸಿಆರ್‍ ಪಿಎಫ್ ಪೊಲೀಸ್ ಠಾಣೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗಿದೆ. ಭದ್ರತೆಗೆ ಯಾವುದೇ ಕೊರತೆಯಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಭದ್ರತಾ ವಿಭಾಗದ ಇಬ್ಬರು ಮತ್ತು ಜಿಲ್ಲಾ ಪೊಲೀಸ್‍ನ ಎಂಟು ಮಂದಿ ಸೇರಿದಂತೆ 10 ಸಿಬ್ಬಂದಿ ಭದ್ರತೆಗೆ ಇದ್ದರು’ ಎಂದು ಐಜಿಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com