ಸಿಬಿಎಸ್‌ಇ ಪಠ್ಯಕ್ರಮದ ಬಗ್ಗೆ ಅಜ್ಞಾತ ವ್ಯಾಖ್ಯಾನ: ಕೇಂದ್ರ ಸರ್ಕಾರ

ಸಿಬಿಎಸ್ಇ ಪಠ್ಯಕ್ರಮದಲ್ಲಿ ಕೆಲ ವಿಷಯಗಳನ್ನು ಕೈಬಿಟ್ಟಿರುವುದಕ್ಕೆ ವಿಪಕ್ಷಗಳು ಆರೋಪ ಮಾಡುತ್ತಿದ್ದು ಪಠ್ಯಕ್ರಮದ ಬಗ್ಗೆ ಅಜ್ಞಾತ ವ್ಯಾಖ್ಯಾನಗಳು ನಡೆಯುತ್ತಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.
ರಮೇಶ್ ಪೋಖ್ರಿಯಾಲ್
ರಮೇಶ್ ಪೋಖ್ರಿಯಾಲ್

ನವದೆಹಲಿ: ಸಿಬಿಎಸ್ಇ ಪಠ್ಯಕ್ರಮದಲ್ಲಿ ಕೆಲ ವಿಷಯಗಳನ್ನು ಕೈಬಿಟ್ಟಿರುವುದಕ್ಕೆ ವಿಪಕ್ಷಗಳು ಆರೋಪ ಮಾಡುತ್ತಿದ್ದು ಪಠ್ಯಕ್ರಮದ ಬಗ್ಗೆ ಅಜ್ಞಾತ ವ್ಯಾಖ್ಯಾನಗಳು ನಡೆಯುತ್ತಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ. 

ಕೊರೋನಾ ಸೋಂಕಿನ ಕಾರಣಕ್ಕಾಗಿ ಪಸಕ್ತ ವರ್ಷ ಸಿಬಿಎಸ್ಇ ಪಠ್ಯಕ್ರಮ ಕಡಿಮೆ ಮಾಡಿದ ಸರ್ಕಾರದ ಕ್ರಮವನ್ನು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್  ಸಮರ್ಥಿಸಿಕೊಂಡಿದ್ದಾರೆ. 

ಸರ್ಕಾರದ ಕ್ರಮದ ಬಗ್ಗೆ ಕೆಲವು ವಲಯದಿಂದ ಟೀಕೆ ವ್ಯಕ್ತವಾದ ನಂತರ ಈ  ಹೇಳಿಕೆ ನೀಡಿದ್ದಾರೆ. ಸಮಯದ ಅಭಾವದ ಕಾರಣ ಕಲ ಪಾಠಗಳನ್ನು ತೆಗೆದುಹಾಕಿರುವುದು ಈಗಿನ ಪರಿಸ್ಥಿತಿಯಲ್ಲಿ ತೆಗೆದುಕೊಂಡಿರುವ ಸದ್ಯದ ತಾತ್ಕಾಲಿಕ ಕ್ರಮ ಮಾತ್ರ ಎಂದರು. ಶಾಲಾ ಅವಧಿಯೂ ಕಡಿತವಾಗಿರುವುದರಿಂದ ವಿದ್ಯಾರ್ಥಿಗಳ ಮೇಲೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಇದಕ್ಕೆ ರಾಜಕೀಯ ಬೆರೆಸಬಾರದು ಎಂದರು.

ನಿರ್ದಿಷ್ಟ ಸಿದ್ದಾಂತವನ್ನು ಪ್ರಚಾರ ಮಾಡುವ ಸಲುವಾಗಿ ಜಾತ್ಯತೀತತೆ, ಪೌರತ್ವ, ರಾಷ್ಟ್ರೀಯತೆ, ಒಕ್ಕೂಟ ವ್ಯವಸ್ಥೆ, ಸ್ಥಳೀಯ ಸರ್ಕಾರಗಳ ಬೆಳವಣೆಗೆ ಮುಂತಾದ ವಿಷಯಗಳನ್ನು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) ಕೈಬಿಟ್ಟಿದೆ ಎಂದು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹಾರಿಹಾಯ್ದಿದ್ದವು. 

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಮೇಶ್ ಪೋಖ್ರಿಯಾಲ್ ಅವರು ಸಿಬಿಎಸ್ಇ ಪಠ್ಯಕ್ರಮದ ಬಗ್ಗೆ ಅಜ್ಞಾತ ವ್ಯಾಖ್ಯಾನಗಳನ್ನು ಮಾಡಲಾಗುತ್ತಿದೆ. ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ಶೈಕ್ಷಣಿಕ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್ಇ 9 ರಿಂದ 12ನೇ ತರಗತಿಗಳಿಗೆ ಪಠ್ಯಕ್ರಮವನ್ನು 9ರಿಂದ 12ರವರೆಗೆ ತರ್ಕಬದ್ಧಗೊಳಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. 

ವಾಸ್ತವವಾಗಿ ಪಠ್ಯಕ್ರಮವನ್ನು ಕಡಿಮೆ ಮಾಡಲು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಚಿವಾಲಯ ಸಿಬಿಎಸ್ಇ ಮಂಡಳಿಗೆ ಸಲಹೆ ನೀಡಿತ್ತು. ಪಠ್ಯಕ್ರಮದಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸುವಂತೆ ಸಚಿವಾಲಯ ಸೂಚಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com