ಅಪಘಾತವನ್ನೇ ಲಾಭವಾಗಿ ಬಳಸಿಕೊಂಡ ವಿಕಾಸ್ ದುಬೆ ಮತ್ತೆ ಗನ್ ಹಿಡಿದ, ಹಾಗಾಗಿ ಎನ್ಕೌಂಟರ್ ಮಾಡಲಾಯಿತು: ಪೊಲೀಸರ ಸ್ಪಷ್ಟನೆ

ಕಾರು ಅಪಘಾತವನ್ನೇ ತನ್ನ ಲಾಭವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆ ಮತ್ತೆ ಪೊಲೀಸರ ವಿರುದ್ಧ ಗನ್ ಹಿಡಿದಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ನಾವು ಎನ್'ಕೌಂಟರ್ ಮಾಡಿದೆವು ಎಂದು ಪೊಲೀಸರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ಎನ್ಕೌಂಟರ್ ನಡೆದ ಸ್ಥಳದಲ್ಲಿ ನೆರೆದಿರುವ ಸಾರ್ವಜನಿಕರು
ಎನ್ಕೌಂಟರ್ ನಡೆದ ಸ್ಥಳದಲ್ಲಿ ನೆರೆದಿರುವ ಸಾರ್ವಜನಿಕರು

ಕಾನ್ಪುರ: ಕಾರು ಅಪಘಾತವನ್ನೇ ತನ್ನ ಲಾಭವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆ ಮತ್ತೆ ಪೊಲೀಸರ ವಿರುದ್ಧ ಗನ್ ಹಿಡಿದಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ನಾವು ಎನ್'ಕೌಂಟರ್ ಮಾಡಿದೆವು ಎಂದು ಪೊಲೀಸರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. 

ಈ ಕುರಿತು ಮಾಹಿತಿ ನೀಡಿರುವ ಕಾನ್ಪುರ ಐಜಿ ಮೋಹಿತ್ ಅಗರ್ವಾಲ್ ಅವರು, ಭಾರೀ ಮಳೆ ಹಿನ್ನೆಲೆಯಲ್ಲಿ ಕಾರು ಮಗುಚಿ ಬಿದ್ದಿತ್ತು. ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದ ಆರೋಪಿ ವಿಕಾಸ್ ದುಬೆ, ಗಾಯಗೊಂಡಿದ್ದ ಪೊಲೀಸರ ಬಳಿಯಿದ್ದ ಪಿಸ್ತೂಲನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಹಿಂದಿನ ಕಾರಿನಲ್ಲಿದ್ದ ಪೊಲೀಸರು ಸುತ್ತುವರೆದು ಶರಣಾಗುವಂತೆ ತಿಳಿಸಿದರು. ಇದಕ್ಕೆ ಒಪ್ಪದ ವಿಕಾಸ್ ದುಬೆ ಪೊಲೀಸರ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದ. ಬೇರೆ ದಾರಿಯಿಲ್ಲದೆ ಆತ್ಮ ರಕ್ಷಣೆಗಾಗಿ ನಾವು ಗುಂಡು ಹಾರಿಸಲೇಬೇಕಾಯಿತು ಎಂದು ಹೇಳಿದ್ದಾರೆ. 

ಗಾಯಗೊಂಡಿದ್ದ ವಿಕಾಸ್ ದುಬೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ನೀಡುವ ಸಂದರ್ಭದಲ್ಲಿಯೇ ಆತ ಸಾವನ್ನಪ್ಪಿದ್ದ ಎಂದು ತಿಳಿಸಿದ್ದಾರೆ. 

ಕಳೆದ ವಾರ ವಿಕಾಸ್ ದುಬೆ 8 ಮಂದಿ ಪೊಲೀಸರ ಹತ್ಯೆ ಮಾಡಿದ್ದ. ಬಳಿಕ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಸುದೀರ್ಘ ಕಾರ್ಯಾಚರಣೆ ಬಳಿಕ ನಿನ್ನೆಯಷ್ಟೇ ಮಧ್ಯಪ್ರದೇಶದ ದೇವಾಲಯವೊಂದರಲ್ಲಿ ಸಿಕ್ಕಿಬಿದ್ದಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com