ಅಪರಾಧಿ ಸತ್ತ, ಆದರೆ, ಆತನ ರಕ್ಷಣೆಗೆ ನಿಂತಿದ್ದವರ ಕಥೆಯೇನು: ಪ್ರಿಯಾಂಕಾ ಗಾಂಧಿ ಪ್ರಶ್ನೆ

ಏಂಟು ಮಂದಿರ ಪೊಲೀಸರ ಹತ್ಯೆಗೆ ಕಾರಣವಾಗಿದ್ದ ರೌಡಿ ಶೀಟರ್ ವಿಕಾಸ್ ದುಬೆ ಎನ್‌ಕೌಂಟರ್‌ ಪ್ರಕರಣ ಉತ್ತರ ಪ್ರದೇಶದಲ್ಲಿ ರಾಜಕೀಯವಾಗಿ ತಿರುವು ಪಡೆದುಕೊಳ್ಳುತ್ತಿದೆ.
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ನವದೆಹಲಿ: ಏಂಟು ಮಂದಿರ ಪೊಲೀಸರ ಹತ್ಯೆಗೆ ಕಾರಣವಾಗಿದ್ದ ರೌಡಿ ಶೀಟರ್ ವಿಕಾಸ್ ದುಬೆ ಎನ್‌ಕೌಂಟರ್‌ ಪ್ರಕರಣ ಉತ್ತರ ಪ್ರದೇಶದಲ್ಲಿ ರಾಜಕೀಯವಾಗಿ ತಿರುವು ಪಡೆದುಕೊಳ್ಳುತ್ತಿದೆ.

ವಿಕಾಸ್ ದುಬೆ ಎನ್‌ಕೌಂಟರ್ ಕುರಿತು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ''ಅಪರಾಧಿ ಸತ್ತ, ಆದರೆ, ಅಪರಾಧಿಯ ರಕ್ಷಣೆಗೆ ನಿಂತಿದ್ದವರ ಕಥೆಯೇನು?'' ಎಂದು ಪ್ರಶ್ನಿಸಿದ್ದಾರೆ.

ವಿಕಾಸ್ ದುಬೆ ಬಂಧನದ ಬಗ್ಗೆ ಗುರುವಾರ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, ''ವಿಕಾಸ್ ದುಬೆಗೆ ರಕ್ಷಣೆ ನೀಡುತ್ತಿರುವವರ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಸಿಬಿಐ ತನಿಖೆ ವಹಿಸಬೇಕು'' ಎಂದು ಒತ್ತಾಯಿಸಿದ್ದರು. ಮರುದಿನವೇ ದುಬೆ ಎನ್‌ಕೌಂಟರ್ ಆಗಿದ್ದು, ಆತನನ್ನು ರಕ್ಷಿಸುತ್ತಿದ್ದವರ ಬಗ್ಗೆ ಮತ್ತೊಮ್ಮೆ ಪ್ರಿಯಾಂಕಾ ಪ್ರಶ್ನೆ ಎತ್ತಿದ್ದಾರೆ.

ಕಾನ್ಪುರ ಪೊಲೀಸರ ಹತ್ಯೆ ಪ್ರಕರಣವನ್ನು ನಿಭಾಯಿಸುವಲ್ಲಿ ಮತ್ತು ದುಬೆಯನ್ನು ಬಂಧಿಸುವಲ್ಲಿ ಉತ್ತರಪ್ರದೇಶದ ಬಿಜೆಪಿ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದನ್ನು ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com