ತೆಲಂಗಾಣ ಸಚಿವಾಲಯ ಕಟ್ಟಡ ನೆಲಸಮಕ್ಕೆ ಹೈಕೋರ್ಟ್ ತಡೆ 

ಸಚಿವಾಲಯ ಕಟ್ಟಡ ನೆಲಸಮಗೊಳಿಸಿ ಅಲ್ಲಿ ನೂತನ ಕಟ್ಟಣ ನಿರ್ಮಾಣಕ್ಕೆ ಮುಂದಾಗಿರುವ ತೆಲಂಗಾಣ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.

Published: 10th July 2020 04:31 PM  |   Last Updated: 10th July 2020 04:31 PM   |  A+A-


Telangana secretariat

ತೆಲಂಗಾಣ ಸಚಿವಾಲಯ ಕಟ್ಟಡ ನೆಲಸಮ

Posted By : Srinivasamurthy VN
Source : PTI

ಹೈದರಾಬಾದ್: ಸಚಿವಾಲಯ ಕಟ್ಟಡ ನೆಲಸಮಗೊಳಿಸಿ ಅಲ್ಲಿ ನೂತನ ಕಟ್ಟಣ ನಿರ್ಮಾಣಕ್ಕೆ ಮುಂದಾಗಿರುವ ತೆಲಂಗಾಣ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.

ತೆಲಂಗಾಣ ಸಚಿವಾಲಯ ಕಟ್ಟಡ ನೆಲಸಮ ಕಾರ್ಯಕ್ಕೆ ತೆಲಂಗಾಣ ಹೈಕೋರ್ಟ್ ಜುಲೈ 13ರವರೆಗೂ ತಡೆ ನೀಡಿದೆ. ಸುಮಾರು 10ಲಕ್ಷ ಅಡಿಗಳಲ್ಲಿ ಕಟ್ಟಲಾಗಿರುವ ಸಚಿವಾಲಯವನ್ನು ತೆಲಂಗಾಣ ಸರ್ಕಾರ 3 ದಿನಗಳಿಂದ ನೆಲಸಮ ಮಾಡುವ ಕಾರ್ಯ ಮಾಡುತ್ತಿದೆ. ಇದೇ ಜಾಗದಲ್ಲಿ ಹೊಸದಾಗಿ ಕಟ್ಟಡ ಕಟ್ಟಲು ರೂಪುರೇಷೆ ಸಿದ್ಧಪಡಿಸಿದೆ.

ಇದೀಗ ಸರ್ಕಾರದ ನಡೆಗೆ ಹೈಕೋರ್ಟ್ ಆದೇಶದಿಂದ ಹಿನ್ನಡೆಯಾಗಿದೆ. ಈ ಕುರಿತು ಪ್ರೊಫೆಸರ್ ಪಿ ಎಲ್ ವಿಶ್ವೇಶ್ವರ ರಾವ್ ಮತ್ತು ಡಾ ಚೆರುಕು ಸುಧಾಕರ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯಲ್ಲಿ ಸರ್ಕಾರ ಕಾನೂನನ್ನು ಸರಿಯಾಗಿ ಪಾಲಿಸದೇ ಕಟ್ಟಡವನ್ನು ನೆಲಸಮ ಮಾಡುತ್ತಿದೆ ಎಂದು ಆರೋಪಿಸಿದ್ದರು. 

ಸರ್ಕಾರದ ಕಾಯ್ದೆ ನಿರ್ಮಾಣ ಮತ್ತು ಉರುಳಿಸುವಿಕೆ ತ್ಯಾಜ್ಯ ನಿರ್ವಹಣಾ ನಿಯಮಗಳು 2016, ಸಾಂಕ್ರಾಮಿಕ ರೋಗಗಳ ಕಾಯ್ದೆ, 1897 ಮತ್ತು ಪರಿಸರ ಸಂರಕ್ಷಣಾ ಕಾಯ್ದೆ 1986 ರ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಸರ್ಕಾರ  ನಿರ್ಮಾಣ ಮತ್ತು ಕಟ್ಟಡ ತ್ಯಾಜ್ಯ ನಿರ್ವಹಣಾ ನಿಯಮಗಳು 2016, ಸಾಂಕ್ರಾಮಿಕ ರೋಗಗಳ ಕಾಯ್ದೆ, 1897 ಮತ್ತು ಪರಿಸರ ಸಂರಕ್ಷಣಾ ಕಾಯ್ದೆ 1986 ರ ನಿಬಂಧನೆಗಳನ್ನು ಗಾಳಿಗೆ ತೂರಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಹೀಗಾಗಿ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾನ್ ಮತ್ತು ನ್ಯಾಯಮೂರ್ತಿ ಬಿ ವಿಜಯ್ಸೆನ್ ರೆಡ್ಡಿ ಅವರು ನೆಲಸಮ ಕಾರ್ಯಕ್ಕೆ ಜುಲೈ 13ರವರೆಗೂ ತಡೆ ನೀಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp