ವಿಕಾಸ್ ದುಬೆ ಜೀವ ಉಳಿಸಲು ನಿನ್ನೆಯೇ ಸುಪ್ರೀಂ ಕೋರ್ಟ್ ಗೆ ಅರ್ಜಿ: ಮೊದಲೇ ತಿಳಿದಿತ್ತಾ ಎನ್ ಕೌಂಟರ್ ವಿಷಯ?

ಇಂದು ಬೆಳಗ್ಗೆ ಎನ್‌ಕೌಂಟರ್‌ನಲ್ಲಿ ಹತನಾದ ಕುಖ್ಯಾತ ರೌಡಿ ವಿಕಾಸ್‌ ದುಬೆಯ ಜೀವ ಉಳಿಸಲು ನಿನ್ನೆಯೇ ಸುಪ್ರೀಂಕೋರ್ಟ್‌ ಅರ್ಜಿ ಯೊಂದು ಸಲ್ಲಿಕೆಯಾಗಿತ್ತು. ವಿಕಾಸ್ ದುಬೆ ಎನ್ ಕೌಂಟರ್ ಸಾಧ್ಯತೆಯಿದ್ದು ಆತನ  ಜೀವ ರಕ್ಷಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ  ಅರ್ಜಿ ಸಲ್ಲಿಸಲಾಗಿತ್ತು.
ವಿಕಾಸ್ ದುಬೆ
ವಿಕಾಸ್ ದುಬೆ

ನವದೆಹಲಿ: ಇಂದು ಬೆಳಗ್ಗೆ ಎನ್‌ಕೌಂಟರ್‌ನಲ್ಲಿ ಹತನಾದ ಕುಖ್ಯಾತ ರೌಡಿ ವಿಕಾಸ್‌ ದುಬೆಯ ಜೀವ ಉಳಿಸಲು ನಿನ್ನೆಯೇ ಸುಪ್ರೀಂಕೋರ್ಟ್‌ ಅರ್ಜಿ ಯೊಂದು ಸಲ್ಲಿಕೆಯಾಗಿತ್ತು. ವಿಕಾಸ್ ದುಬೆ ಎನ್ ಕೌಂಟರ್ ಸಾಧ್ಯತೆಯಿದ್ದು ಆತನ  ಜೀವ ರಕ್ಷಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ  ಅರ್ಜಿ ಸಲ್ಲಿಸಲಾಗಿತ್ತು.

‌ನಿನ್ನೆ ಕಾನ್ಪುರದ ಮಹಾಕಾಲ ದೇವಾಲಯದಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆಯುತ್ತಲೇ, ಈತನ ಎನ್‌ಕೌಂಟರ್‌ ಆಗುವ ಸಾಧ್ಯತೆಯನ್ನು ಮೊದಲೇ ಅರಿತಿದ್ದ ಕೆಲವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ವಿಕಾಸ್ ದುಬೆ ಎನ್‌ಕೌಂಟರ್‌ ಆಗುವ ಸಾಧ್ಯತೆ ಇದೆ. ಆದ್ದರಿಂದ ದಯವಿಟ್ಟು ಅವರನ್ನು ಸಾಯಿಸಬಾರದು ಎಂದು ಪೊಲೀಸರಿಗೆ ನಿರ್ದೇಶಿಸಿ' ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಕೂಡಲೇ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಗೊಳ್ಳುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.ನಿನ್ನೆ ಸಂಜೆ ಈ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ ಅಂದರೆ ಇಂದು (ಶುಕ್ರವಾರ) ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ಅರ್ಜಿದಾರರು ಕೋರಿಕೊಂಡಿದ್ದರು. ಆದರೆ ಈ ಅರ್ಜಿ ವಿಚಾರಣೆಗೆ ಬರುವ ಮುನ್ನವೇ ತಪ್ಪಿಸಿಕೊಳ್ಳಲು ಹೋದ ದುಬೆ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. 

ಖ್ಯಾತ ರೌಡಿ ವಿಕಾಸ್ ದುಬೇ ಹಾಗೂ ಆತನ ಐವರು ಸಹಚರರ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆ ನಡೆಸುವಂತೆ ಕೋರಿ ವಕೀಲ ವಕೀಲ ಘನಶ್ಯಾಮ್ ಉಪಾದ್ಯಾಯ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ವಿಕಾಸ್ ದುಬೇ ಹಾಗೂ ಐತನ ಐವರು ಸಹಚರರನ್ನು ನಕಲಿ ಎನ್ ಕೌಂಟರ್ ಮಾಡಲಾಗಿದೆ ಎಂದು ವಕೀಲ ಘನಶ್ಯಾಮ್ ಉಪಾದ್ಯಾಯ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಮಧ್ಯರಾತ್ರಿ 2 ಗಂಟೆ ವೇಳೆಗೆ ನಾನು ಅರ್ಜಿಯನ್ನು ಇ-ಫೈಲಿಂಗ್ ಮಾಡಿದ್ದೆ, ಜೊತೆಗೆ ಬೇಗ ವಿಚಾರಣೆ ನಡೆಸಿ ಪೊಲೀಸರಿಂದ ವಿಕಾಸ್ ದುಬೆ ಜೀವವನ್ನು ರಕ್ಷಿಸುವಂತೆ ಕೋರಿದ್ದೆ ಎಂದು ವಕೀಲ ಘನಶ್ಯಾಮ ಉಪಾಧ್ಯ ತಿಳಿಸಿದ್ದಾರೆ.

ಈ ವೇಳೆ, ಪೊಲೀಸರಿಂದ ರಿವಲ್ವಾರ್ ಕಸಿದು ವಿಕಾಸ್ ದುಬೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದ್ದು, ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಆತ ಬಲಿಯಾಗಿದ್ದಾನೆ ಎಂದು ಸ್ಪಷ್ಟಪಡಿಸಲಾಗಿದೆ. ಇದರ ಬೆನ್ನಲ್ಲೇ ವಕೀಲ ಘನಶ್ಯಾಮ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಎನ್ ಕೌಂಟರ್ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com