ಐಸಿಎಸ್ಇ, ಐಎಸ್ ಸಿಯ 10, 12 ನೇ ತರಗತಿಗಳ ಫಲಿತಾಂಶ ಜುಲೈ 10 ರ ಮಧ್ಯಾಹ್ನ 3ಕ್ಕೆ

ಐಸಿಎಸ್ಇ ಹಾಗೂ ಐಎಸ್ ಸಿ ಪರೀಕ್ಷಾ ಫಲಿತಾಂಶ ಜು.10 ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.
ಐಸಿಎಸ್ಇ, ಐಎಸ್ ಸಿಯ 10, 12 ನೇ ತರಗತಿಗಳ ಫಲಿತಾಂಶ ಜು.10 ರ ಮಧ್ಯಾಹ್ನ 3ಕ್ಕೆ
ಐಸಿಎಸ್ಇ, ಐಎಸ್ ಸಿಯ 10, 12 ನೇ ತರಗತಿಗಳ ಫಲಿತಾಂಶ ಜು.10 ರ ಮಧ್ಯಾಹ್ನ 3ಕ್ಕೆ

ನವದೆಹಲಿ: ಐಸಿಎಸ್ಇ, ಐಎಸ್ ಸಿಯ 10-12ನೇ ತರಗತಿಗಳ ಪರೀಕ್ಷಾ ಫಲಿತಾಂಶ ಜು.10 ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.

ಐಸಿಎಸ್ಇ ಕೌನ್ಸಿಲ್ ನ ವೆಬ್ ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಫಲಿತಾಂಶವನ್ನು cisce.org ಹಾಗೂ results.cisce.org  ವೆಬ್ ಸೈಟ್ ಗಳಲ್ಲಿ ಆನ್ ಲೈನ್ ನಲ್ಲಿ ಪ್ರಕಟವಾಗುತ್ತದೆ, ಫಲಿತಾಂಶಗಳನ್ನು ಕೌನ್ಸಿಲ್ ನ CAREERS ಪೋರ್ಟಲ್ ಮೂಲಕ, ಎಸ್ಎಂಎಸ್ ಮೂಲಕ ವೀಕ್ಷಿಸಬಹುದು ಎಂದು ತಿಳಿದುಬಂದಿದೆ.

ಸಿಐಎಸ್ ಸಿಇ, ಅಂಗಸಂಸ್ಥೆ ಶಾಲೆಗಳು ತಮ್ಮ ಶಾಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಯೂನೀಕ್ ಐಡಿ ಹಾಗೂ ಪಾಸ್ವರ್ಡ್ ಮೂಲಕ ಲಾಗ್ ಇನ್ ಆಗಿ ವೀಕ್ಷಿಸಬಹುದಾಗಿದೆ. ಮಾ.19-31 ವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಕೊರೋನಾ ಹಿನ್ನೆಲೆಯಲ್ಲಿ ಐಸಿಎಸ್ಇ-ಐಎಸ್ ಸಿ ಮುಂದೂಡಿತ್ತು. ಜೂನ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದ ಕೇಂದ್ರ ಹಾಗೂ ಸಿಬಿಎಸ್ಇ ಜುಲೈ 1-15 ವರೆಗೆ ನಡೆಯಬೇಕಿದ್ದ 10-12 ನೇ ತರಗತಿಗಳ ಪರೀಕ್ಷೆಯನ್ನು ರದ್ದುಗೊಳಿಸಿರುವುದಾಗಿ ತಿಳಿಸಿತ್ತು. ಪರೀಕ್ಷೆಗಳು ರದ್ದುಗೊಂಡ ಪರಿಣಾಮ ಪರ್ಯಾಯ ಮೌಲ್ಯಮಾಪನ ಯೋಜನೆಯನ್ನು ಕಳೆದ ವಾರ ಘೋಷಿಸಲಾಗಿತ್ತು. 

ಐಸಿಎಸ್ಇ, ಐಎಸ್ ಸಿ ಮಂಡಳಿ ಈ ವರೆಗೂ ನಡೆಸಿದ್ದ ಪರೀಕ್ಷೆಗಳ ಪೈಕಿ ಬೆಸ್ಟ್ ಮೂರು ಪರೀಕ್ಷೆಗಳ ಪರ್ಸೆಂಟೇಜ್ ನ್ನು ಪರಿಗಣಿಸಿ, ಆಂತರಿಕ ಮೌಲ್ಯಮಾಪನವನ್ನೂ ಪರಿಗಣಿಸಿ ಫಲಿತಾಂಶ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com