ವಾಸ್ತವ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಸೇನೆಗಳ ಸಂಪೂರ್ಣ ಹಿಂತೆಗೆತಕ್ಕೆ ಭಾರತ, ಚೀನಾ ಪುನರುಚ್ಛಾರ

ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣಾ ರೇಖೆಯಯಲ್ಲಿ ಮುಂದುವರೆದಿರುವ ಸೇನೆ ಹಿಂತೆಗೆತದ ನಡುವೆ ಭಾರತ ಮತ್ತು ಚೀನಾ ರಾಯಭಾರಿಗಳು ಶುಕ್ರವಾರ ಸಭೆ ನಡೆಸಿ, ಗಡಿ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಗಡಿಯಲ್ಲಿ ಸೇನೆಗಳನ್ನು ಸಂಪೂರ್ಣ ಹಿಂತೆಗೆದುಕೊಳ್ಳುವುದನ್ನು ಎರಡೂ ದೇಶಗಳು ಖಚಿತಪಡಿಸುತ್ತವೆ ಎಂದು ಪುನರುಚ್ಛರಿಸಿದ್ದಾರೆ.
ಗಡಿ ಪ್ರದೇಶ
ಗಡಿ ಪ್ರದೇಶ

ನವದೆಹಲಿ: ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣಾ ರೇಖೆಯಯಲ್ಲಿ ಮುಂದುವರೆದಿರುವ ಸೇನೆ ಹಿಂತೆಗೆತದ ನಡುವೆ ಭಾರತ ಮತ್ತು ಚೀನಾ ರಾಯಭಾರಿಗಳು ಶುಕ್ರವಾರ ಸಭೆ ನಡೆಸಿ, ಗಡಿ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಗಡಿಯಲ್ಲಿ ಸೇನೆಗಳನ್ನು ಸಂಪೂರ್ಣ ಹಿಂತೆಗೆದುಕೊಳ್ಳುವುದನ್ನು ಎರಡೂ ದೇಶಗಳು ಖಚಿತಪಡಿಸುತ್ತವೆ ಎಂದು ಪುನರುಚ್ಛರಿಸಿದ್ದಾರೆ.
  
ಸೇನಾ ಹಿಂತೆಗೆತ ಪ್ರಕ್ರಿಯೆಗಳು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಕಾರ್ಯಸೂಚಿಗಳಿಗೆ ಅನುಸಾರವಾಗಿ ನಡೆಯಲಿವೆ.ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತ ಸಮಾಲೋಚನೆ ಮತ್ತು ಸಮನ್ವಯ ಕಾರ್ಯವಿಧಾನದ 16 ನೇ ಸಭೆ ಶುಕ್ರವಾರ ನಡೆಯಿತು.ಭಾರತೀಯ ನಿಯೋಗದ ನೇತೃತ್ವವನ್ನು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ವಹಿಸಿದ್ದರೆ, ಚೀನಾ ನಿಯೋಗದ ನೇತೃತ್ವವನ್ನು  ಚೀನಾದ ವಿದೇಶಾಂಗ ಸಚಿವಾಲಯದ ಗಡಿ ಮತ್ತು ಸಾಗರ ಇಲಾಖೆ ಮಹಾನಿರ್ದೇಶಕರು ವಹಿಸಿದ್ದರು ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಶ್ಚಿಮ ವಲಯದಲ್ಲಿನ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಡೆಯುತ್ತಿರುವ ಸೇನಾ ಹಿಂತೆಗೆತ ಪ್ರಕ್ರಿಯೆಯಲ್ಲಿನ ಪ್ರಗತಿ ಸೇರಿದಂತೆ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಸಭೆಯಲ್ಲಿ ಪರಿಶೀಲಿಸಲಾಗಿದೆ. ಹಿರಿಯ ಕಮಾಂಡರ್ ಗಳ ನಡುವೆ ಏರ್ಪಟ್ಟ ಒಪ್ಪಂದವನ್ನು ಉಭಯ ದೇಶಗಳು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸುವುದು ಅಗತ್ಯ ಎಂದು ಎರಡೂ ಕಡೆಯವರು ಸಮ್ಮತಿಸಿದ್ದಾರೆ. 

ಇಬ್ಬರು ವಿಶೇಷ ಪ್ರತಿನಿಧಿಗಳು ಸಮ್ಮತಿಸಿದಂತೆ  ಹಿರಿಯ ಕಮಾಂಡರ್ ಗಳು ಶೀಘ್ರದಲ್ಲೇ ಸಭೆ ಸೇರಿ ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಲಿದ್ದಾರೆ. ಇದರಿಂದಾಗಿ ಸೇನೆಗಳ ಸಂಪೂರ್ಣ ಹಿಂತೆಗೆತ ಮತ್ತು ಉದ್ವಿಗ್ನತೆ ಶಮನವನ್ನು ಸಮಯೋಚಿತವಾಗಿ ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com