ಕಾನ್ಪುರ ಎನ್ ಕೌಂಟರ್: ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಪತ್ನಿ ಮತ್ತು ಪುತ್ರ ಬಂಧನ

ಎನ್ ಕೌಂಟರ್ ನಲ್ಲಿ ಶುಕ್ರವಾರ ಬೆಳಗ್ಗೆ ಮೃತಪಟ್ಟಿರುವ ಉತ್ತರ ಪ್ರದೇಶದ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯ ಪತ್ನಿ ರಿಚಾ ದುಬೆ ಮತ್ತು ಕಿರಿಯ ಪುತ್ರನನ್ನು ಲಕ್ನೊದಲ್ಲಿ ಬಂಧಿಸಲಾಗಿದೆ.
ಲಕ್ನೊದಲ್ಲಿ ವಿಕಾಸ್ ದುಬೆ ಮನೆ ಹೊರಗೆ ಪೊಲೀಸ್ ಸಿಬ್ಬಂದಿ ಕಾವಲು
ಲಕ್ನೊದಲ್ಲಿ ವಿಕಾಸ್ ದುಬೆ ಮನೆ ಹೊರಗೆ ಪೊಲೀಸ್ ಸಿಬ್ಬಂದಿ ಕಾವಲು

ಲಕ್ನೊ: ಎನ್ ಕೌಂಟರ್ ನಲ್ಲಿ ಶುಕ್ರವಾರ ಬೆಳಗ್ಗೆ ಮೃತಪಟ್ಟಿರುವ ಉತ್ತರ ಪ್ರದೇಶದ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯ ಪತ್ನಿ ರಿಚಾ ದುಬೆ ಮತ್ತು ಕಿರಿಯ ಪುತ್ರನನ್ನು ಲಕ್ನೊದಲ್ಲಿ ಬಂಧಿಸಲಾಗಿದೆ.

ವಿಕಾಸ್ ದುಬೆಯ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಪತ್ನಿ ಮತ್ತು ಪುತ್ರನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ. ಅವರನ್ನು ಬಂಧಿಸಿ ಕೃಷ್ಣಾನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಕೃಷ್ಣಾನಗರದ ನರೈನ್ಪುರಿ ಪ್ರದೇಶದಲ್ಲಿರುವ ಖಾಲಿ ಜಾಗದಿಂದ ತಾಯಿ ಮಗನನ್ನು ಬಂಧಿಸಲಾಗಿದ್ದು ಅವರ ಮನೆಕೆಲಸ ಸಹಾಯಕ ಮಹೇಶ್ ನನ್ನು ಕೂಡ ಬಂಧಿಸಲಾಗಿದೆ. ಕಾನ್ಪುರ ಪೊಲೀಸರು ಇದೀಗ ರಿಚಾ, ಆಕೆಯ ಪುತ್ರ ಮತ್ತು ಕೆಲಸದವನನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ರಿಚಾ ಅಲಿಯಾಸ್ ಸೋನಾ ಜುಲೈ 2ರಿಂದ ಕೃಷ್ಣಾನಗರದಲ್ಲಿ ತನ್ನ ಬಂಧುಗಳೊಂದಿಗೆ ವಾಸಿಸುತ್ತಿದ್ದಳು. ಜುಲೈ 3ರಿಂದ ತಾಯಿ-ಮಗನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com